ಆ್ಯಪ್ನಗರ

ಪುರುಷರ ದೌರ್ಬಲ್ಯ ನಿವಾರಿಸುವ ಮೆಂತ್ಯ ಖಾದ್ಯ

ಚಳಿಗಾಲದ ಸಮಯದಲ್ಲಿ ನಿಮ್ಮ ಲೈಂಗಿಕ ಜೀವನ ಹೆಚ್ಚು ಕ್ರಿಯಾಶೀಲವಾಗಿರಲು ಮೆಂತ್ಯ ಖಾದ್ಯಗಳೇ ಹೆಚ್ಚು ಪರಿಣಾಮ ಬೀರುತ್ತವೆ ಎಂದು ಅಧ್ಯಯನವೊಂದು ತಿಳಿಸಿದೆ.

ಟೈಮ್ಸ್ ಆಫ್ ಇಂಡಿಯಾ 2 Apr 2017, 6:14 pm
ಅಹಮದಾಬಾದ್‌: ಮೆಂತ್ಯ ಖಾದ್ಯಗಳನ್ನು ಸೇವಿಸುವವರಿಗೊಂದು ಸಿಹಿ ಸುದ್ದಿ, ಚಳಿಗಾಲದ ಸಮಯದಲ್ಲಿ ನಿಮ್ಮ ಲೈಂಗಿಕ ಜೀವನ ಹೆಚ್ಚು ಕ್ರಿಯಾಶೀಲವಾಗಿರಲು ಮೆಂತ್ಯ ಖಾದ್ಯಗಳೇ ಹೆಚ್ಚು ಪರಿಣಾಮ ಬೀರುತ್ತವೆ ಎಂದು ಅಧ್ಯಯನವೊಂದು ತಿಳಿಸಿದೆ.
Vijaya Karnataka Web bitter methi yields sweet results for male libido
ಪುರುಷರ ದೌರ್ಬಲ್ಯ ನಿವಾರಿಸುವ ಮೆಂತ್ಯ ಖಾದ್ಯ


ಗುಜರಾತ್‌ನ ವೈದ್ಯ ಡಾ. ಪರಾಸ್‌ ಶಾ ಅವರು ಸುಮಾರು ಮೂರು ವರ್ಷಗಳ ಕಾಲ ನಡೆಸಿದ ಅಧ್ಯನದಲ್ಲಿ ಗುಜರಾತ್‌ನಲ್ಲಿ ತಯಾರಿಸುವ ಮೇತಿ ಪಾಕ್‌ ಎಂಬ ಖಾದ್ಯ ಸೇವನೆಯಿಂದ ನಿಮಿರುವಿಕೆಯಲ್ಲಿ ನಿಷ್ಕ್ರಿಯತೆ ಸೇರಿದಂತೆ ಇತರೇ ಲೈಂಗಿಕ ತೊಂದರೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ವರದಿ ತಿಳಸಿದೆ.

ವೈದ್ಯ ಪರಾಸ್‌ ಶಾ, 2012 ರಿಂದ 2015ರ ವರೆಗೆ ನಿಮಿರುವಿಕೆಯ ಅಪಸಾಮಾನ್ಯ(ಇಡಿ) ಹಾಗೂ ಅತೀ ಹೆಚ್ಚು ಕೊಲೆಸ್ಟ್ರಾಲ್‌ ತೊಂದರೆಗೊಳಗಾಗಿರವ 30-35 ವಯಸ್ಸಿನ ಸುಮಾರು 540 ಮಂದಿ ಮೇಲೆ ಸತತ 12 ವಾರಗಳ ಕಾಲ ಚಿಕಿತ್ಸೆ ನೀಡಿದ್ದಾರೆ. ಈ ಪ್ರಯೋಗದಲ್ಲಿ ನಿಮಿರುವಿಕೆಯ ಅಪಸಾಮಾನ್ಯ ತೊಂದರೆ ಮತ್ತು ಕೊಲೆಸ್ಟ್ರಾಲ್‌ ಸಹ ಸಾಮಾನ್ಯ ಹಂತಕ್ಕೆ ಮರಳಿದೆ.

'ಶೇ.80 ರಷ್ಟು ಮಂದಿ ಈ ಪ್ರಯೋಗದಲ್ಲಿ ಯಶಸ್ಸು ಸಾಧಿಸಿದ್ದಾರೆ. ಹೆಚ್ಚಿನವರಿಗೆ ಲೈಂಗಿಕ ಚಟುವಟಿಕೆಗಳಲ್ಲಿ ಈ ಪ್ರಯೋಗ ಧನಾತ್ಮಕ ಲಾಭವನ್ನು ತಂದಿದೆ. ಅಲ್ಲದೇ ನಿರುಪಯುಕ್ತ ಕೊಬ್ಬನ್ನೂ ಸಹ ಕರಗಿಸಿದೆ. ಉಳಿದ 20%ದಷ್ಟು ಮಂದಿಗೆ ಈ ಪ್ರಯೋಗ ಯಶಸ್ಸು ಸಾಧಿಸದಿರಲು ಅವರ ಸಿಗರೇಟು ಅಥವಾ ಇನ್ಯಾವುದೇ ಕೆಟ್ಟ ಚಟಗಳೇ ಕಾರಣ' ಎಂದು ಪರಾಸ್‌ ಶಾ ತಿಳಿಸಿದ್ದಾರೆ.

ಮೆಂತ್ಯ ಸ್ಯಾಪೊನಿನ್ಗಳು ಮತ್ತು ಸಪೊಜೆನಿನ್ಸ್‌ ಎಂಬ ಸಸ್ಯಜನ್ಯ ಪದಾರ್ಥ ಹೊಂದಿದೆ. ಇದರ ಸತತ ಸೇವನೆಯಿಂದ ಹಾರ್ಮೋನ್‌ಗಳ ಉತ್ಪತ್ತಿಯಾಗುತ್ತವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ