ಆ್ಯಪ್ನಗರ

ರಾಹುಲ್‌ ವಿರುದ್ಧ ಆಯೋಗಕ್ಕೆ ದೂರು

ಜಾತಿ/ಧರ್ಮ ಮೊದಲಾದ ವಿಷಯಗಳನ್ನು ಚುನಾವಣೆ ಪ್ರಚಾರಕ್ಕೆ ಬಳಸಿಕೊಳ್ಳುವಂತಿಲ್ಲ ಎಂಬ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ಬೆನ್ನಿಗೆ ಈ ಸಂಬಂಧ ಚುನಾವಣೆ ಆಯೋಗಕ್ಕೆ ಬರುತ್ತಿರುವ ನೀತಿ ಸಂಹಿತೆ ಉಲ್ಲಂಘನೆ ದೂರುಗಳು ಹೆಚ್ಚಿವೆ.

Vijaya Karnataka Web 15 Jan 2017, 8:12 am

ಹೊಸದಿಲ್ಲಿ: ಜಾತಿ/ಧರ್ಮ ಮೊದಲಾದ ವಿಷಯಗಳನ್ನು ಚುನಾವಣೆ ಪ್ರಚಾರಕ್ಕೆ ಬಳಸಿಕೊಳ್ಳುವಂತಿಲ್ಲ ಎಂಬ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ಬೆನ್ನಿಗೆ ಈ ಸಂಬಂಧ ಚುನಾವಣೆ ಆಯೋಗಕ್ಕೆ ಬರುತ್ತಿರುವ ನೀತಿ ಸಂಹಿತೆ ಉಲ್ಲಂಘನೆ ದೂರುಗಳು ಹೆಚ್ಚಿವೆ. ಹೊಸದಿಲ್ಲಿಯಲ್ಲಿ ಜ.11ರಂದು ನಡೆದ ಕಾಂಗ್ರೆಸ್‌ನ ಜನವೇದನೆ ಸಮ್ಮೇಳನದಲ್ಲಿ ಪಕ್ಷ ಉಪಾಧ್ಯಕ್ಷ ರಾಹುಲ್‌ ಗಾಂಧಿ ಜನರ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಚುನಾವಣೆ ಆಯೋಗಕ್ಕೆ ಬಿಜೆಪಿ ದೂರು ನೀಡಿದೆ.

ಕಾಂಗ್ರೆಸ್‌ ಚಿಹ್ನೆಯಾದ ಕೈ ಗುರುತು ಶಿವ, ಗುರುನಾನಕ್‌, ಬುದ್ಧ, ಇಸ್ಲಾಂ, ಜೈನ ಧರ್ಮದವರ 'ವರದ ಹಸ್ತ'ವಾಗಿದೆ ಎಂದು ರಾಹುಲ್‌ ಹೇಳಿರುವುದು ಜನಪ್ರತಿನಿಧಿ ಕಾಯಿದೆಯ ಸ್ಪಷ್ಟ ಉಲ್ಲಂಘನೆ. ಅಷ್ಟೇ ಅಲ್ಲ ಸುಪ್ರೀಂ ಕೋರ್ಟ್‌ ತೀರ್ಪಿನ ಉಲ್ಲಂಘನೆಯೂ ಹೌದು ಎಂದು ಬಿಜೆಪಿ ವಾದಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ