ಆ್ಯಪ್ನಗರ

ಬಾದಲ್‌ ರಾಜೀನಾಮೆ ಆರಂಭವಷ್ಟೇ..! ಕೃಷಿ ಮಸೂದೆ ಬಗ್ಗೆ ರೈತರಿಗೆ ಅರಿವಾದರೆ ಸರಕಾರ ಪತನ: ಅಖಿಲೇಶ್

ಲೋಕಸಭೆಯಲ್ಲಿ ಅಂಗೀಕರಿಸಿದ ಕೃಷಿ ಸಂಬಂಧಿತ ಮಸೂದೆಗಳ ಕುರಿತಂತೆ ಕೇಂದ್ರದ ವಿರುದ್ಧ ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್‌ ಯಾದವ್ ಕಿಡಿಕಾರಿದ್ದು, ಬಾದಲ್‌ ರಾಜೀನಾಮೆ ಕೇವಲ ಆರಂಭವಷ್ಟೇ. ಕೇಂದ್ರ ಸರಕಾರದ ಮಸೂದೆಯ ಬಗ್ಗೆ ರೈತರಿಗೆ ಸಂಪೂರ್ಣ ತಿಳುವಳಿಕೆ ಬಂದ ದಿನ ಬಿಜೆಪಿ ಸರಕಾರ ಪತನವಾಗಲಿದೆ ಎಂದು ಹೇಳಿದ್ದಾರೆ.

Agencies 18 Sep 2020, 10:09 pm
ಹೊಸದಿಲ್ಲಿ: ಸೆಪ್ಟೆಂಬರ್‌ 17ರಂದು ಲೋಕಸಭೆಯಲ್ಲಿ ಅಂಗೀಕರಿಸಿದ ಕೃಷಿ ಸಂಬಂಧಿತ ಮಸೂದೆಗಳ ಕುರಿತಂತೆ ಕೇಂದ್ರ ಸರಕಾರದ ವಿರುದ್ಧ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಟೀಕಾ ಪ್ರಹಾರ ನಡೆಸಿದ್ದಾರೆ. ಮಸೂದೆಗಳನ್ನು ರೈತ ವಿರೋಧಿ ಎಂದು ಹೇಳಿರುವ ಸಮಾಜವಾದಿ ಪಕ್ಷದ ಮುಖಂಡ, ಕೃಷಿ ಭೂಮಿಗಳ ಮೇಲೆ ಕಂಪನಿಗಳು ಹಿಡಿತ ಸಾಧಿಸಲು ಮಸೂದೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
Vijaya Karnataka Web bjp government will be out akhilesh yadav on row over agriculture bills
ಬಾದಲ್‌ ರಾಜೀನಾಮೆ ಆರಂಭವಷ್ಟೇ..! ಕೃಷಿ ಮಸೂದೆ ಬಗ್ಗೆ ರೈತರಿಗೆ ಅರಿವಾದರೆ ಸರಕಾರ ಪತನ: ಅಖಿಲೇಶ್


ಈ ಮಸೂದೆಗಳು ರೈತ ವಿರೋಧಿಯಾಗಿವೆ ಮತ್ತು ರೈತರ ವಿರುದ್ಧ ಪಿತೂರಿ ಮಾಡಲಾಗಿದೆ. ಇಂತಹ ಬಿಕ್ಕಟ್ಟಿನ ಸಮಯದಲ್ಲಿ ರೈತರು ನಮ್ಮ ಆರ್ಥಿಕತೆಯನ್ನು ರಕ್ಷಿಸಿದ್ದಾರೆ. ಆದರೆ, ಈಗ ದೊಡ್ಡ ಕೈಗಾರಿಕೋದ್ಯಮಿಗಳು ಕೃಷಿಯತ್ತ ಗಮನ ಹರಿಸುತ್ತಿದ್ದು, ಇದು ರೈತರನ್ನು ಕಾರ್ಮಿಕರನ್ನಾಗಿ ಮಾಡುತ್ತದೆ. ಇದಷ್ಟೇ ಅಲ್ಲದೇ, ಕೃಷಿ ಮಸೂದೆಗಳು ರೈತರನ್ನು ಕಂಪನಿಗಳ ನಿಯಂತ್ರಣಕ್ಕೆ ತರುತ್ತವೆ ಎಂದು ಯಾದವ್ ಹೇಳಿದರು.

ಕಾರ್ಪೊರೇಟ್ ಕೃಷಿಯನ್ನು ದೇಶದಲ್ಲಿ ಪರಿಚಯಿಸಿದರೆ, ರೈತರ ಭೂಮಿ ಕಂಪನಿಗಳ ವಶಕ್ಕೆ ಹೋದಂತಾಗುತ್ತದೆ. ರೈತರು ತಮ್ಮ ಇಷ್ಟದ ಉತ್ಪನ್ನಗಳನ್ನು ಬೆಳೆಯಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು. ಕೃಷಿ ಮಸೂದೆಗೆ ಸಂಬಂಧಿಸಿದಂತೆ ಎನ್‌ಡಿಎ ಭಾಗವಾದ ಶಿರೋಮಣಿ ಅಕಾಲಿ ದಳದ ನಾಯಕಿ ಹರ್‌ಸಿಮ್ರತ್‌ ಬಾದಲ್‌ ಕೇಂದ್ರ ಸಚಿವ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿದ್ದರು.

ತಪ್ಪು ಮಾಹಿತಿ ನಂಬಿ ಮೋಸ ಹೋಗಬೇಡಿ: ರೈತರಿಗೆ ಪ್ರಧಾನಿ ಮೋದಿ ಮನವಿ

ಅವರ ರಾಜೀನಾಮೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅಖಿಲೇಶ್‌ ಯಾದವ್‌, ಬಾದಲ್‌ ರಾಜೀನಾಮೆ ಕೇವಲ ಆರಂಭವಷ್ಟೇ. ಕೇಂದ್ರ ಸರಕಾರದ ಮಸೂದೆಯ ಬಗ್ಗೆ ರೈತರಿಗೆ ಸಂಪೂರ್ಣ ತಿಳುವಳಿಕೆ ಬಂದ ದಿನ ಬಿಜೆಪಿ ಸರಕಾರ ಪತನವಾಗಲಿದೆ ಎಂದು ಹೇಳಿದರು. ಕೃಷಿ ಸುಗ್ರೀವಾಜ್ಞೆಗಳ ವಿರುದ್ಧ ಪಂಜಾಬ್ ಮತ್ತು ಹರಿಯಾಣದ ರೈತರು ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದಾರೆ.

ರೈತರ ಕಿಚ್ಚಿಗೆ ಬೆಚ್ಚಿದ ಅಕಾಲಿದಳ ಕೇಂದ್ರ ಸಂಪುಟದಿಂದ ಹೊರಕ್ಕೆ‌; ಟಿಆರ್‌ಎಸ್‌, ಬಿಜೆಡಿಯಿಂದಲೂ ವಿರೋಧ

ಕೃಷಿಗೆ ಸಂಬಂಧಿಸಿದ ರೈತರ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ-2020, ರೈತರು (ಸಬಲೀಕರಣ ಮತ್ತು ಸಂರಕ್ಷಣೆ) - ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ-2020, ಮತ್ತು ಅಗತ್ಯ ವಸ್ತುಗಳ (ತಿದ್ದುಪಡಿ) ಮಸೂದೆಯನ್ನು ಲೋಕಸಭೆಯಲ್ಲಿ ವ್ಯಾಪಕ ವಿರೋಧದ ನಡುವೆಯೂ ಗುರುವಾರ ಅಂಗೀಕರಿಸಲಾಗಿದೆ. ಈ ಮಸೂದೆಗಳನ್ನು ರಾಜ್ಯಸಭೆಯಲ್ಲಿ ಮಂಡಿಸಲು ಕೇಂದ್ರ ಸಿದ್ಧತೆ ನಡೆಸಿದೆ.

ಕೇಂದ್ರ ಸರಕಾರದ ಕೃಷಿ ಮಸೂದೆಗಳು ರೈತರ ಪರವೋ? ವಿರುದ್ಧವೋ? ಪ್ರತಿಭಟನೆ ಏಕೆ? ಸಚಿವೆ ರಾಜೀನಾಮೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ