ಆ್ಯಪ್ನಗರ

ದೇಶದ ಸುಪ್ರೀಂ ಕೋರ್ಟ್‌ ಅನ್ನು ಪಾಕ್‌ ಸುಪ್ರೀಂ ಕೋರ್ಟ್‌ಗೆ ಹೋಲಿಸಿದ ನ್ಯಾಷನಲ್‌ ಹೆರಾಲ್ಡ್ ಪತ್ರಿಕೆ: ಬಿಜೆಪಿ ಟೀಕೆ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕುರಿತು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಈ ಬಗ್ಗೆ ವರದಿ ಮಾಡಿದ ನ್ಯಾಷನಲ್‌ ಹೆರಾಲ್ಡ್ ದೇಶದ ಸುಪ್ರೀಂಕೋರ್ಟ್ ಅನ್ನು ಪಾಕಿಸ್ತಾನದ ಸುಪ್ರೀಂಕೋರ್ಟ್‌ಗೆ ಹೋಲಿಸಿದೆ. ಈ ಕುರಿತು ಬಿಜೆಪಿ ಟ್ವೀಟ್‌ ಮಾಡಿದೆ.

Vijaya Karnataka Web 11 Nov 2019, 3:02 pm
ಹೊಸದಿಲ್ಲಿ: ದೇಶ ಬಹುಕಾಲದಿಂದ ಕಾಯುತ್ತಿದ್ದ ಐತಿಹಾಸಿಕ ಅಯೋಧ್ಯೆ ತೀರ್ಪು ಹೊರಬಿದ್ದಿದ್ದು, ಇದನ್ನು ಬಹುಪಾಲು ಇಡೀ ದೇಶವೇ ಒಪ್ಪಿಕೊಂಡಿದೆ. ಆದರೆ, ಅಯೋಧ್ಯೆ ತೀರ್ಪು ನೀಡಿದ್ದಕ್ಕೆ ಕಾಂಗ್ರೆಸ್‌ ಮುಖವಾಣಿ ನ್ಯಾಷನಲ್‌ ಹೆರಾಲ್ಡ್‌ ಭಾರತದ ಸುಪ್ರೀಂಕೋರ್ಟ್ ಅನ್ನು ಪಾಕಿಸ್ತಾನದ ಸುಪ್ರೀಂಕೋರ್ಟ್‌ಗೆ ಹೋಲಿಸಿದೆ. ಇದನ್ನು ಬಿಜೆಪಿ ಕರ್ನಾಟಕ ಟ್ವಿಟ್ಟರ್ ಖಾತೆ ಟೀಕಿಸಿದೆ.
Vijaya Karnataka Web national herald


ಭಾರತದ ರಾಜಕಾರಣ ಬದಲಿಸಿದ ಅಯೋಧ್ಯೆ: ರಾಮನಲ್ಲಿ ಬಿಜೆಪಿ ರಾಷ್ಟ್ರೀಯ ಸಂಕೇತ ರೂಪಿಸಿಕೊಂಡಿತು!

ಈ ಸಂಬಂಧ ಟ್ವೀಟ್‌ ಮಾಡಿದ ಬಿಜೆಪಿ ಕರ್ನಾಟಕ ಅಧಿಕೃತ ಟ್ವಿಟ್ಟರ್ ಖಾತೆ ಕಾಂಗ್ರೆಸ್‌ ಮುಖವಾಣಿ ನ್ಯಾಷನಲ್‌ ಹೆರಾಲ್ಡ್‌ ವರದಿಯನ್ನು ಟೀಕಿಸಿದೆ. ಚುನಾವಣೆಗಳ ಸಮಯದಲ್ಲಿ ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಮತದಾರರನ್ನು ವಂಚಿಸಲು ಟೆಂಪಲ್‌ ರನ್‌ ಮಾಡುತ್ತಿರುತ್ತಾರೆ. ಆದರೆ ಅಯೋಧ್ಯೆ ತೀರ್ಪಿನ ಬಳಿಕ ಕಾಂಗ್ರೆಸ್‌ ಮುಖವಾಣಿ ನ್ಯಾಷನಲ್‌ ಹೆರಾಲ್ಡ್‌ ದೇಶದ ಸುಪ್ರೀಂ ಕೋರ್ಟ್‌ ಅನ್ನು ಪಾಕಿಸ್ತಾನದ ಸುಪ್ರೀಂಕೋರ್ಟ್‌ಗೆ ಹೋಲಿಸಿದೆ. ಅಲ್ಲದೆ, ತೀರ್ಪನ್ನು ಪ್ರಶ್ನಿಸಿದೆ. ಈ ಮೂಲಕ ಭಾರತೀಯರನ್ನೂ ಅವಮಾನಿಸಿದೆ ಎಂದು ಬಿಜೆಪಿ ಕರ್ನಾಟಕ ಟ್ವೀಟ್‌ ಮಾಡಿದೆ.


ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಲು ಇನ್ನೆಷ್ಟು ವರ್ಷ ಬೇಕು ಗೊತ್ತೆ?

ಸುಪ್ರೀಂಕೋರ್ಟ್‌ ಸಾಂವಿಧಾನಿಕ ಪೀಠ ನೀಡಿದ ಅಯೋಧ್ಯೆ ತೀರ್ಪು ನೀಡಿದ ನಂತರ ಕಾಂಗ್ರೆಸ್‌ ಮುಖವಾಣಿ ನ್ಯಾಷನಲ್‌ ಹೆರಾಲ್ಡ್ ವರದಿ ಮಾಡಿದೆ. ಅಯೋಧ್ಯೆ ತೀರ್ಪು ಪಾಕಿಸ್ತಾನದ ಸುಪ್ರೀಂ ಕೋರ್ಟ್ ಅನ್ನು ಯಾಕೆ ನೆನಪಿಸುತ್ತದೆ ಎಂಬ ಶೀರ್ಷಿಕೆಯನ್ನೂ ನೀಡಿದೆ. ಅಲ್ಲದೆ, ಆರಂಭದಿಂದ ಬಿಜೆಪಿ ಹಾಗೂ ವಿಶ್ವ ಹಿಂದೂ ಪರಿಷತ್‌ಗೆ ಬೇಕಾಗಿದ್ದ ರೀತಿಯೇ ತೀರ್ಪು ನೀಡಿದೆ. ಅಲ್ಲದೆ, ಪ್ರತಿಮೆಗಳನ್ನು ಇಟ್ಟಿದ್ದು ಹಾಗೂ ಮಸೀದಿಗಳನ್ನು ಕೆಡವಿದ್ದು ಕಾನೂನು ಬಾಹಿರ ಎಂದ ಬಳಿಕವೂ ಈ ತೀರ್ಪು ನೀಡಿದೆ ಎಂದೂ ಕಾಂಗ್ರೆಸ್‌ ಮುಖವಾಣಿ ನ್ಯಾಷನಲ್‌ ಹೆರಾಲ್ಡ್ ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್‌ ಮಾಡಿತ್ತು.

ಅಯೋಧ್ಯೆ ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿಗಳಿಗೆ ಭದ್ರತೆ ಹೆಚ್ಚಿಸಿದ ಕೇಂದ್ರ ಸರಕಾರ

ನವೆಂಬರ್ 9, 2019 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅನುಮತಿ ನೀಡಿ ದೇಶದ ಸರ್ವೋಚ್ಛ ನ್ಯಾಯಾಲಯ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ