ಆ್ಯಪ್ನಗರ

ಜಮ್ಮು-ಕಾಶ್ಮೀರ: ಬೆಳಗ್ಗೆ ಅಪಹರಣ ಸಂಜೆ ರಕ್ಷಣೆ, ಬಿಜೆಪಿ ಮುಖಂಡನನ್ನ ಉಗ್ರರಿಂದ ರಕ್ಷಿಸಿದ ಸೇನೆ!

ಉಗ್ರರ ಅಪಹರಣಕ್ಕೊಳಗಾಗಿದ್ದ ಬಿಜೆಪಿ ಮುಖಂಡ ಮತ್ತು ಸೊಪೋರ್‌ ಜಿಲ್ಲೆಯ ವಾಟರ್‌ಗಾಮ್‌ ಪಾಲಿಕೆ ಸಮಿತಿ ಉಪಾಧ್ಯಕ್ಷ ಮೆಹ್ರಾಜುದಿನ್‌ ಮಲ್ಲಾಅವರನ್ನು ಪೊಲೀಸ್‌ ತಂಡ ರಕ್ಷಿಸಿದೆ. ಬೆಳಗ್ಗೆ ಉಗ್ರರು ಅಪಹರಿಸಿದರೆ ಸಂಜೆಯೊಳಗೆ ಪೊಲೀಸರು ಬಿಜೆಪಿ ಮುಖಂಡನನ್ನ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

TIMESOFINDIA.COM 16 Jul 2020, 7:03 am
ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ದುಷ್ಕರ್ಮಿಗಳಿಂದ ಅಪಹರಣಕ್ಕೊಳಗಾಗಿದ್ದ ಸ್ಥಳೀಯ ಬಿಜೆಪಿ ಮುಖಂಡ ಮತ್ತು ಸೊಪೋರ್‌ ಜಿಲ್ಲೆಯ ವಾಟರ್‌ಗಾಮ್‌ ಪಾಲಿಕೆ ಸಮಿತಿ ಉಪಾಧ್ಯಕ್ಷ ಮೆಹ್ರಾಜುದಿನ್‌ ಮಲ್ಲಾಅವರನ್ನು ಪೊಲೀಸ್‌ ತಂಡ ರಕ್ಷಿಸಿದೆ. ಬುಧವಾರ ಬೆಳಗ್ಗೆ ಮಲ್ಲಾಅವರು ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸ್ನೇಹಿತರ ಮನೆಗೆ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ಅವರನ್ನು ಸೊಪೋರ್‌ನಲ್ಲಿ ಅಪಹರಿಸಿದ್ದರು.
Vijaya Karnataka Web Ec85qIlVcAAQky9


ಸೇನಾ ಪಡೆಗಳ ನೆರವಿನೊಂದಿಗೆ ಪೊಲೀಸರು ತೀವ್ರ ಶೋಧ ಕಾರ್ಯ ಕೈಗೊಂಡು ಸೊಪೋರ್‌ ಪಟ್ಟಣ ತೊರೆಯುವ ಮತ್ತು ಪ್ರವೇಶಿಸುವ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ನಡೆಸಿದ್ದರು. ಸಂಜೆ ಹೊತ್ತಿಗೆ ಅವರನ್ನು ರಕ್ಷಿಸಲಾಗಿದೆ. ಇದರ ಬೆನ್ನಲ್ಲೇ ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಅವರು ಮಲ್ಲಾಅವರ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ಕಳೆದ ವಾರ ಬಂಡಿಪೊರ ಜಿಲ್ಲೆಯ ಬಿಜೆಪಿ ನಾಯಕ ವಾಸಿಮ್‌ ಬಾರಿ, ಅವರ ಸೋದರ ಮತ್ತು ತಂದೆಯನ್ನು ಉಗ್ರರು ಅಪಹರಿಸಿ ಹತ್ಯೆಗೈದಿದ್ದರು. ಈ ಘಟನೆಯಿಂದ ಕಣಿವೆಯಲ್ಲಿ ಬಿಜೆಪಿ ನಾಯಕರನ್ನು ಉಗ್ರರು ಗುರಿಯಾಗಿಸುತ್ತಿರುವ ಆತಂಕ ಮೂಡಿದೆ. ಪಾಕ್‌ ಪೋಷಿತ ಲಷ್ಕರೆ ತಯ್ಬಾ ಸಂಘಟನೆ ಈ ದುಷ್ಕೃತ್ಯಗಳನ್ನು ನಡೆಸುತ್ತಿರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ.

ಕೊರೊನಾ ಲಸಿಕೆ ಅಭಿವೃದ್ಧಿಯಲ್ಲಿ ಭಾರತ ಮುಂಚೂಣಿ; ಆ.15ರೊಳಗೆ ಔಷಧಿ ಸಿಕ್ಕರೂ ಅಚ್ಚರಿಯಿಲ್ಲ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ