ಆ್ಯಪ್ನಗರ

ಮಣಿಪುರದಲ್ಲಿ ಕಾಂಗ್ರೆಸ್‌ ಗರ್ವಭಂಗ, ವಿಧಾನಸಭೆಯ ವಿಶ್ವಾಸಮತದಲ್ಲಿ ಬಿಜೆಪಿಗೆ ಗೆಲುವು!

ಮಣಿಪುರ ಮುಖ್ಯಮಂತ್ರಿ ಎನ್‌.ಬಿರೇನ್‌ ಸಿಂಗ್‌ ಅವರಿಗೆ ವಿಧಾನಸಭೆಯಲ್ಲಿ ವಿಶ್ವಾಸಮತ ಗೆಲುವು ದಕ್ಕಿದೆ. ಸೋಮವಾರ ನಡೆದ ಅಧಿವೇಶನದಲ್ಲಿ ಬಿಜೆಪಿ ನೇತೃತ್ವದ ಮೈತ್ರಿ ಸರಕಾರದ ಪರ 28 ಹಾಗೂ ವಿರುದ್ಧ 16 ಶಾಸಕರು ಮತ ಚಲಾಯಿಸಿದರು.

Vijaya Karnataka Web 11 Aug 2020, 7:17 am
ಇಂಪಾಲ್‌: ಮಣಿಪುರ ಮುಖ್ಯಮಂತ್ರಿ ಎನ್‌.ಬಿರೇನ್‌ ಸಿಂಗ್‌ ಅವರಿಗೆ ವಿಧಾನಸಭೆಯಲ್ಲಿ ವಿಶ್ವಾಸಮತ ಗೆಲುವು ದಕ್ಕಿದೆ. ಸೋಮವಾರ ನಡೆದ ಅಧಿವೇಶನದಲ್ಲಿ ಬಿಜೆಪಿ ನೇತೃತ್ವದ ಮೈತ್ರಿ ಸರಕಾರದ ಪರ 28 ಹಾಗೂ ವಿರುದ್ಧ 16 ಶಾಸಕರು ಮತ ಚಲಾಯಿಸಿದರು.
Vijaya Karnataka Web manipur-chief-minister-n-biren-singh-to-move-confidence-vote-in-assembly-on-monday


ಪ್ರತಿಪಕ್ಷ ಕಾಂಗ್ರೆಸ್‌ನ ಎಂಟು ಶಾಸಕರು ಅಧಿವೇಶನದಲ್ಲಿ ಭಾಗಿಯಾಗದೇ ದೂರ ಉಳಿದರು. ಕಾಂಗ್ರೆಸ್‌ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದ ಹಿನ್ನೆಲೆಯಲ್ಲಿಯೇ ಮುಖ್ಯಮಂತ್ರಿ ವಿಶ್ವಾಸಮತ ಕೋರಿದ್ದರು. ಬಿಜೆಪಿ ನಾಯಕರೊಬ್ಬರು ಪಾಲ್ಗೊಂಡಿದ್ದಾರೆ ಎನ್ನಲಾದ ಡ್ರಗ್ಸ್‌ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ನಿರಾಕರಿಸಿದ್ದ ಕಾರಣ ಬಿರೇನ್‌ ಸರಕಾರದ ವಿರುದ್ಧ ಕಾಂಗ್ರೆಸ್‌ ಜುಲೈ 28ರಂದು ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಿತ್ತು.

ನಾಲ್ವರು ಶಾಸಕರ ಅನರ್ಹತೆ ಹಾಗೂ ಮೂವರು ಬಿಜೆಪಿ ಶಾಸಕರ ರಾಜೀನಾಮೆಯಿಂದ 60 ಸದಸ್ಯ ಬಲದ ವಿಧಾನಸಭೆಯ ಹಾಲಿ ಬಲ 53ಕ್ಕೆ ಇಳಿದಿದೆ. ಆಡಳಿತಾರೂಢ ಮೈತ್ರಿಕೂಟದಲ್ಲಿ ಸ್ಪೀಕರ್‌ ಸೇರಿ 29, ಕಾಂಗ್ರೆಸ್‌ನಲ್ಲಿ24 ಶಾಸಕರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ