ಆ್ಯಪ್ನಗರ

ರಕ್ಷಣಾ ಸಚಿವಾಲಯ ಸಂಸತ್ ಸ್ಥಾಯಿ ಸಮಿತಿಗೆ ಪ್ರಗ್ಯಾ ಠಾಕೂರ್‌ ನೇಮಕ: ಕೇಂದ್ರ ಸರಕಾರದ ಕಾಲೆಳೆದ ಟ್ವೀಟಿಗರು

ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್‌ರನ್ನು ರಕ್ಷಣಾ ಸಚಿವಾಲಯದ ಸಂಸದೀಯ ಸಮಿತಿಗೆ ನೇಮಿಸಿಕೊಳ್ಳಲಾಗಿದೆ. ಈ ಹಿನ್ನೆಲೆ ಕೇಂದ್ರ ಸರಕಾರದ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಯಾಕೆ ಅಂತೀರಾ? ಈ ವರದಿ ಓದಿ.

Vijaya Karnataka Web 21 Nov 2019, 11:48 am
ಹೊಸದಿಲ್ಲಿ: ಬಿಜೆಪಿಯ ವಿವಾದಾತ್ಮಕ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್‌ರನ್ನು ರಕ್ಷಣಾ ಸಚಿವಾಲಯದ ಸಂಸದೀಯ ಸ್ಠಾಯಿ ಸಮಿತಿಗೆ ನೇಮಿಕಗೊಳ್ಳಲಾಗಿದೆ. ಇದಕ್ಕೆ ಕಾಂಗ್ರೆಸ್‌ ಹಾಗೂ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ಕೇಳಿ ಬರುತ್ತಿದ್ದು, ಚರ್ಚೆಗೆ ಗ್ರಾಸವಾಗಿದೆ.
Vijaya Karnataka Web pragya thakur


ಕಾಂಗ್ರೆಸ್‌ ಟ್ವೀಟ್‌


ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ನೇತೃತ್ವದ 21 ಸದಸ್ಯರ ರಕ್ಷಣಾ ಸಚಿವಾಲಯದ ಸಂಸದೀಯ ಸಮಾಲೋಚನಾ ಸಮಿತಿಗೆ ಸಂಸದೆ ಹಾಗೂ ಮಾಲೇಗಾಂವ್‌ ಬಾಂಬ್‌ ಸ್ಫೋಟ ಆರೋಪಿ ಪ್ರಗ್ಯಾ ಸಿಂಗ್ ಠಾಕೂರ್‌ರನ್ನು ನೇಮಿಸಲಾಗಿದೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಪ್ರಗ್ಯಾ ಥಾಕೂರ್‌ ನೇಮಕ

ಬಾಂಬ್‌ ಸ್ಫೋಟ ಆರೋಪಿ ಪ್ರಗ್ಯಾ ಠಾಕೂರ್‌ರನ್ನು ರಕ್ಷಣಾ ಸಚಿವಾಲಯದ ಸಂಸದೀಯ ಸಮಿತಿಗೆ ನೇಮಿಸಲಾಗಿದೆ. ಈ ಹಿನ್ನೆಲೆ ಇದು ''ಮಾಸ್ಟರ್ ಸ್ಟ್ರೋಕ್! ನಮ್ಮ ಗಡಿಗಳನ್ನು ರಕ್ಷಿಸಲು ನಾವು ಅಂತಿಮವಾಗಿ ಪ್ರಗ್ಯಾರ 'ಶ್ರಾಪ್' ಮತ್ತು 'ಮಾರಕ ಶಕ್ತಿ'ಯನ್ನು ಬಳಸಬಹುದು ಎಂದು ಹಲವು ಟ್ವೀಟಿಗರು ಕೇಂದ್ರ ಸರಕಾರವನ್ನು ಕಾಲೆಳೆದಿದ್ದಾರೆ. ಅಲ್ಲದೆ, ಬಾಂಬ್‌ ತಯಾರಿಕೆ ವಿಧಾನವನ್ನೂ ಕಲಿಯಬಹುದು ಎಂದು ಹಲವರು ಟ್ವೀಟ್ ಮೂಲಕ ಮೋದಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಸುದ್ದಿ ಓದಿ: ನಮ್ಮ ಮುಂದಿನ ಟಾರ್ಗೆಟ್ ಅಯೋಧ್ಯೆ ರಾಮಮಂದಿರ ನಿರ್ಮಾಣ!


ಇದನ್ನೂ ಓದಿ: ಗಾಂಧಿ ಹತ್ಯೆ: ಬಿಜೆಪಿ ಬಣ್ಣ ಕೊನೆಗೂ ಬಯಲು

ಲೋಕಸಭೆ ಚುನಾವಣೆಯಲ್ಲಿ ಪ್ರಗ್ಯಾ ಠಾಕೂರ್‌ಗೆ ಬಿಜೆಪಿ ಟಿಕೆಟ್‌ ನೀಡಿದ್ದಕ್ಕೆ ತೀವ್ರ ವಿರೋಧ ಕೇಳಿಬಂದಿತ್ತು. ಅಲ್ಲದೆ, ಚುನಾವಣಾ ಪ್ರಚಾರದ ವೇಳೆ ಮಹಾತ್ಮ ಗಾಂಧಿ ಹತ್ಯೆ ರೂವಾರಿ ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಹೇಳಿಕೆ ನೀಡಿದ್ದರು. ನಂತರ ಅದು ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ತನ್ನ ಹೇಳಿಕೆಯನ್ನು ಹಿಂಪಡೆದಿದ್ದರು. ಅಲ್ಲದೆ, ಪ್ರಧಾನಿ ಮೋದಿ ಸಹ ಗೋಡ್ಸೆಯ ಬಗ್ಗೆ ಈ ರೀತಿ ಹೇಳಿಕೆ ನೀಡಿದ್ದಕ್ಕೆ ಪ್ರಗ್ಯಾ ಠಾಕೂರ್‌ರನ್ನು ಎಂದಿಗೂ ಮರೆಯಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದರು. ಈಗ ರಕ್ಷಣಾ ಸಚಿವಾಲಯದ ಸಂಸದೀಯ ಸಮಿತಿಯ ಸದಸ್ಯರಾಗಿ ನೇಮಕವಾಗಿದ್ದರಿಂದ ಮೋದಿಯನ್ನೂ ನೆಟ್ಟಿಗರು ಕಾಲೆಳೆದಿದ್ದಾರೆ.

ಭೋಪಾಲ್‌ನಲ್ಲಿ ದಿಗ್ವಿಜಯ್‌ ವಿರುದ್ಧ ಸಾಧ್ವಿ ಪ್ರಗ್ಯಾ ಸಿಂಗ್‌ ಬಿಜೆಪಿ ಅಭ್ಯರ್ಥಿ?

ಮಾಲೇಗಾಂವ್ ಸ್ಫೋಟ ಆರೋಪಿ ಪ್ರಗ್ಯಾ ಠಾಕೂರ್‌ ವಿರುದ್ಧ ಎನ್‌ಐಎ ಎಂಕೋಕಾ ಆರೋಪವನ್ನು ಹಿಂಪಡೆದ ಬಳಿಕ ಸಂಸದೆಗೆ ಜಾಮೀನು ನೀಡಲಾಗಿತ್ತು. ಸದ್ಯ ಕಾನೂನುಬಾಹಿರ ಚಟುವಟಿಕೆಗಳು (ತಡೆ) ಕಾಯ್ದೆ ಅಡಿಯಲ್ಲಿ ಹಲವು ಆರೋಪಗಳನ್ನು ಎದುರಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ