ಆ್ಯಪ್ನಗರ

ಗಾಂಧಿ ಕೊಲೆಗಾರ ಗೋಡ್ಸೆಯನ್ನು ‘ದೇಶಭಕ್ತ’ ಎಂದ ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್‌..!

ಎಸ್‌ಪಿಜಿ (ತಿದ್ದುಪಡಿ) ಮಸೂದೆ ಚರ್ಚೆ ವೇಳೆ ಡಿಎಂಕೆ ನಾಯಕ ಎ ರಾಜ, ಗಾಂಧಿಯನ್ನು ಕೊಂದಿದ್ದೇಕೆ ಎಂಬುದರ ಬಗ್ಗೆ ಗೋಡ್ಸೆ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸುತ್ತಿದ್ದರು. ಈ ವೇಳೆ ಮಧ್ಯ ಪ್ರವೇಶಿಸಿದ ಪ್ರಗ್ಯಾ ಸಿಂಗ್‌ ಠಾಕೂರ್‌, “ನೀವು ದೇಶಭಕ್ತರ ಉದಾಹರಣೆಯನ್ನು ನೀಡುವಂತಿಲ್ಲ,” ಎಂದು ಅಡ್ಡಿಪಡಿಸಿದರು.

TIMESOFINDIA.COM 27 Nov 2019, 7:21 pm
ಹೊಸದಿಲ್ಲಿ: ಬಿಜೆಪಿ ಲೋಕಸಭಾ ಸದಸ್ಯೆ ಪ್ರಗ್ಯಾ ಸಿಂಗ್‌ ಠಾಕೂರ್‌ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಕೊಲೆಗಾರ ನಾಥುರಾಮ್‌ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದು ವಿವಾದಕ್ಕೆ ನಾಂದಿ ಹಾಡಿದ್ದಾರೆ.
Vijaya Karnataka Web Pragya Singh Thakur


ಲೋಕಸಭೆಯಲ್ಲಿ ಚರ್ಚೆ ವೇಳೆ ಅವರು ಈ ಪ್ರಸ್ತಾಪ ಮಾಡಿದ್ದು, ಇದರಿಂದ ಆಕ್ರೋಶಗೊಂಡ ವಿರೋಧ ಪಕ್ಷಗಳು ತಕ್ಷಣವೇ ಪ್ರತಿಭಟನೆ ನಡೆಸಿದ ಬೆಳವಣಿಗೆಗೆ ಬುಧವಾರದ ಕಲಾಪ ಸಾಕ್ಷಿಯಾಯಿತು.

ವಿಶೇಷ ಭದ್ರತಾ ಪಡೆ (ತಿದ್ದುಪಡಿ) ಮಸೂದೆ ಚರ್ಚೆ ವೇಳೆ ಡಿಎಂಕೆ ನಾಯಕ ಎ ರಾಜ, ಮಹಾತ್ಮಾ ಗಾಂಧಿಯನ್ನು ಕೊಂದಿದ್ದೇಕೆ ಎಂಬುದಾಗಿ ಗೋಡ್ಸೆ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸುತ್ತಿದ್ದರು. ಈ ವೇಳೆ ಮಧ್ಯ ಪ್ರವೇಶಿಸಿದ ಪ್ರಗ್ಯಾ ಸಿಂಗ್‌ ಠಾಕೂರ್‌, “ನೀವು ದೇಶಭಕ್ತರ ಉದಾಹರಣೆಯನ್ನು ನೀಡುವಂತಿಲ್ಲ,” ಎಂದು ಅಡ್ಡಿಪಡಿಸಿದರು.

ಅಂತಿಮವಾಗಿ ಅವರನ್ನು ಹತ್ಯೆ ಮಾಡಲು ನಿರ್ಧರಿಸುವ ಮೊದಲು 32 ವರ್ಷಗಳ ಕಾಲ ಗಾಂಧಿಯ ವಿರುದ್ಧ ದ್ವೇಷ ಸಾಧಿಸಿದ್ದಾಗಿ ಗೊಡ್ಸೆ ಸ್ವತಃ ಒಪ್ಪಿಕೊಂಡಿದ್ದಾನೆ ಎಂದು ರಾಜಾ ಹೇಳಿದರು. ನಿರ್ದಿಷ್ಟ ಸಿದ್ಧಾಂತವನ್ನು ಗೋಡ್ಸೆ ನಂಬಿದ್ದರಿಂದ ಗಾಂಧಿಯನ್ನು ಕೊಂದ ಎಂದು ರಾಜಾ ವಿವರಿಸುತ್ತಿದ್ದರು.

ಇದಕ್ಕೆ ಪ್ರಗ್ಯಾ ಠಾಕೂರ್ ಅಡ್ಡಿ ಪಡಿಸುತ್ತಿದ್ದಂತೆ ಕೆರಳಿದ ವಿರೋಧ ಪಕ್ಷಗಳು ತಕ್ಷಣವೇ ಪ್ರತಿಭಟಿಸಿದವು. ಇದರಿಂದ ಎಚ್ಚೆತ್ತ ಬಿಜೆಪಿ ನಾಯಕರು ಕುಳಿತುಕೊಳ್ಳುವಂತೆ ಪ್ರಗ್ಯಾ ಠಾಕೂರ್‌ಗೆ ಸೂಚಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ