ಆ್ಯಪ್ನಗರ

ಕೇರಳ RSS ಕಾರ್ಯಕರ್ತನ ಕೊಲೆ: 8 ಮಂದಿ ಬಂಧನ

ಆರ್‌ಎಸ್‌ಎಸ್‌ ಕಾರ್ಯಕರ್ತನ ಕೊಲೆ ಬಳಿಕ ಕೇರಳ ಬಂದ್‌ಗೆ ಕೇರಳ ಬಿಜೆಪಿ ಘಟಕ ನೀಡಿದ್ದ ಕರೆಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿದ್ದು, ಪ್ರಕರಣ ಸಂಬಂಧ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ

ಟೈಮ್ಸ್ ಆಫ್ ಇಂಡಿಯಾ 30 Jul 2017, 9:04 pm
ತಿರುವನಂತಪುರಂ: ಆರ್‌ಎಸ್‌ಎಸ್‌ ಕಾರ್ಯಕರ್ತನ ಕೊಲೆ ಬಳಿಕ ಕೇರಳ ಬಂದ್‌ಗೆ ಕೇರಳ ಬಿಜೆಪಿ ಘಟಕ ನೀಡಿದ್ದ ಕರೆಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿದ್ದು, ಪ್ರಕರಣ ಸಂಬಂಧ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
Vijaya Karnataka Web bjp shuts down kerala after rss mans murder eight arrested
ಕೇರಳ RSS ಕಾರ್ಯಕರ್ತನ ಕೊಲೆ: 8 ಮಂದಿ ಬಂಧನ


ಆರ್‌ಎಸ್‌ಎಸ್‌ ಕಾರ್ಯಕರ್ತ ಎ.ರಾಜೇಶ್‌ರನ್ನು ಸಿಪಿಐ-ಎಂ ಕಾರ್ಯಕರ್ತರು ಕೊಲೆ ಮಾಡಿದ್ದರು ಎನ್ನಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದು ಈಗಾಗಲೇ ಎಂಟು ಮಂದಿ ಬಂಧಿಸಲಾಗಿದೆ. ಶನಿವಾರ ರಾತ್ರಿ ರಾಜೇಶ್‌ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದರು ಬಳಿಕ ರಾಜೇಶ್‌ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ರಾಜೇಶ್‌ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

ರಾಜೇಶ್‌‌ ಕೊಲೆ ಹಿಂದೆ ಸಿಪಿಐ-ಎಂ ಪಕ್ಷದ ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದೆ. ಅಲ್ಲದೇ, ಇಂದು ಕೇರಳದಾದ್ಯಂತ ಬಿಜೆಪಿ ಬಂದ್‌ ಕರೆ ನೀಡಿತ್ತು. ರಾಜ್ಯಾದ್ಯಾಂತ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು ಸರಕಾರಿ ವಾಹನಗಳು ರಸ್ತೆಗಿಳಿದಿರಲಿಲ್ಲ. ಕೆಲ ಖಾಸಾಗಿ ವಾಹನಗಳು ಸಂಚಾರ ನಡೆಸಲು ಮುಂದಾದರೂ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಕಾರ್ಯಕರ್ತರು ಬಸ್‌ ಜಖಂ ಗೊಳಿಸಿದ್ದಾರೆ ಎನ್ನಲಾಗಿದೆ.

ರಾಜ್ಯದ ಕಾನೂನು ವ್ಯವಸ್ಥೆ ವರದಿ ಕೇಳಿದ ರಾಜ್ಯಪಾಲ:
ಕೇರಳದಲ್ಲಿ ನಡೆಯುತ್ತಿರುವ ಕೊಲೆ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗುತ್ತಿದ್ದು, ಹೀಗಾಗಿ ರಾಜ್ಯಪಾಲ ಪಿ. ಸದಾಶಿವಂ ಮುಖ್ಯಮಂತ್ರಿ ಪಿನರಾಯಿ ವಿಜಯನ್‌ ಹಾಗೂ ಕೇರಳ ಪೊಲೀಸ್‌ ಮುಖ್ಯಸ್ಥ ಲೋಕನಾತ್‌ ಬೆಹ್ರಾಗೆ ರಾಜ್ಯ ಕಾನೂನು ಸುವ್ಯವಸ್ಥೆ ಕುರಿತು ವರದಿ ನೀಡುವಂತೆ ಆದೇಶಿಸಿದ್ದಾರೆ.

ಇದೇ ವೇಳೆ ರಾಜ್ಯದಲ್ಲಿ ಕಳೆದ ಎರಡು ವಾರದಲ್ಲಿ ಬಿಜೆಪಿ ಮತ್ತು ಸಿಪಿಐ-ಎಂ ನಡುವೆ ನಡೆಯುತ್ತಿರುವ ಜಗಳವನ್ನು ಶಮನಗೊಳಿಸಲು ರಾಜ್ಯ ಎರಡೂ ಪಕ್ಷ ಮುಖಂಡರ ಜತೆ ಸಭೆ ನಡೆಸಲು ಸದಾಶಿವಂ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ