ಆ್ಯಪ್ನಗರ

ತಾಜ್‌ ಮಹಲ್‌: ಸೋಮ್‌ ವಿರುದ್ಧ ತಿರುಗಿಬಿದ್ದ ಯೋಗಿ

ತಾಜ್‌ ಮಹಲ್‌ ಕುರಿತು ನೀಡಿರುವ ಹೇಳಿಕೆಗೆ ಸಂಬಂಧಿಸಿ ವಿವರಣೆ ನೀಡುವಂತೆ ಉತ್ತರ ಪ್ರದೇಶದ ಸಿಎಂ ಆದಿತ್ಯನಾಥ್‌ ಅವರು ಬಿಜೆಪಿ ಶಾಸಕ ಸಂಗೀತ್‌ ಸೋಮ್‌ ಅವರಿಗೆ ಸೂಚಿಸಿದ್ದಾರೆ.

TNN 18 Oct 2017, 12:56 pm
ಆಗ್ರಾ: ವಿಶ್ವ ವಿಖ್ಯಾತ ತಾಜ್‌ ಮಹಲ್‌ ಬಗ್ಗೆ ನೀಡಿರುವ ಹೇಳಿಕೆಗೆ ಸೂಕ್ತ ವಿವರಣೆ ನೀಡಬೇಕು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಬಿಜೆಪಿ ಶಾಸಕ ಸಂಗೀತ್‌ ಸೋಮ್‌ ಅವರಿಗೆ ತಾಕೀತು ಮಾಡಿದ್ದಾರೆ.
Vijaya Karnataka Web bjp snubs som yogi asks him to explain taj remark
ತಾಜ್‌ ಮಹಲ್‌: ಸೋಮ್‌ ವಿರುದ್ಧ ತಿರುಗಿಬಿದ್ದ ಯೋಗಿ


ಉನ್ನತ ಮೂಲಗಳ ಪ್ರಕಾರ, ಸೋಮ್‌ ಅವರ ಹೇಳಿಕೆ ಪಕ್ಷಕ್ಕೆ ತೀವ್ರ ಮುಜುಗರವುಂಟು ಮಾಡಿದ್ದು ಹೀಗಾಗಿ ವಿವರಣೆ ನೀಡುವಂತೆ ಯೋಗಿ ಹೇಳಿದ್ದಾರೆ. ಅ.26ರಂದು ನಗರ ಪ್ರದಕ್ಷಿಣೆ ಹೊರಟಿರುವ ಯೋಗಿ ತಾಜ್‌ಮಹಲ್‌ಗೂ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸೋಮ್‌ ಹೇಳಿಕೆಯನ್ನು ಪಕ್ಷ ಖಂಡಿಸಿರುವುದಾಗಿ ಬಿಜೆಪಿ ವಕ್ತಾರ ಚಂದ್ರ ಮೋಹನ್‌ ಹೇಳಿದ್ದಾರೆ. 'ಸೋಮ್‌ ಅವರ ಹೇಳಿಕೆ ಅವರ ಯೋಚನಾ ಮಟ್ಟಕ್ಕೆ ಸೀಮಿತವಾಗಿದ್ದು ಇದಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ನಾವು ಆಗ್ರಾದಲ್ಲಿ ಪ್ರವಾಸಿಗರ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಎಂದು ಮೋಹನ್‌' ಹೇಳಿದರು.


ಇಷ್ಟೆಲ್ಲದರ ಮಧ್ಯೆ ಮಂಗಳವಾರ ಉತ್ತರ ಪ್ರದೇಶದ ಶಿಯಾ ವಕ್ಫ್‌ ಬೋರ್ಡ್‌ ಅಧ್ಯಕ್ಷ ಹೊಸ ವಿವಾದ ಸೃಷ್ಟಿಸಿದ್ದು, ತಾಜ್‌ ಮಹಲನ್ನು ತಾವು ಪೂಜಿಸಲು ಸಾಧ್ಯವಿಲ್ಲ. ಅಲ್ಲದೇ ಹೆಚ್ಚಿ ನ ಮೊಘಲರು ಐಯಾಶ್‌( ದೇಶ ದ್ರೋಹಿ)ಗಳು ಎಂದು ಹೇಳಿದ್ದಾರೆ.

'ತಾಜ್‌ಮಹಲ್‌ ಪ್ರೀತಿಯ ಸಂಕೇತ ಆದರೆ ಪೂಜೆಯ ಸ್ಥಾನವಲ್ಲ. ಒಂದಿಬ್ಬರು ಮೊಘಲರು ದೇಶದ್ರೋಹಿಗಳಾಗಿದ್ದರು. ಮುಸ್ಲಿಮರು ಇವರ ವಿಗ್ರಹಕ್ಕೆ ಮನ್ನಣೆಯನ್ನೂ ಸಹ ನೀಡುವುದಿಲ್ಲ' ಎಂದು ಸೈಯದ್ ವಾಸೀಮ್ ರಿಜ್ವಿ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ