ಆ್ಯಪ್ನಗರ

ಹರಿಯಾಣದಲ್ಲಿ ಬಿಜೆಪಿ-ಜೆಜೆಪಿ ಮೈತ್ರಿ ಸರಕಾರ: ದುಷ್ಯಂತ್‌ ಸಿಂಗ್‌ ಚೌಟಾಲಾಗೆ ಡಿಸಿಎಂ ಪಟ್ಟ

ಹರಿಯಾಣದಲ್ಲಿ ಸರಕಾರ ರಚನೆ ಕುರಿತಾಗಿ ಇದ್ದ ಕುತೂಹಲ ಕೊನೆಗೂ ಅಂತ್ಯಗೊಂಡಿದೆ. ಹರಿಯಾಣದಲ್ಲಿ ಬಿಜೆಪಿ ಸರಕಾರ ರಚನೆ ಮಾಡಲಿದೆ ಎಂದು ಅಮಿತ್‌ ಶಾ ತಿಳಿಸಿದ್ದಾರೆ.

Vijaya Karnataka Web 25 Oct 2019, 10:13 pm
ಚಂಡೀಗಢ: ಭಾರಿ ಕುತೂಹಲ ಕೆರಳಿಸಿದ್ದ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯುವಲ್ಲಿ ವಿಫಲವಾಯಿತು. ಆದರೆ ಈಗ ಜನನಾಯಕ್‌ ಜನತಾ ಪಕ್ಷದ ಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿರುವ ಬಿಜೆಪಿ ಸರಕಾರ ರಚನೆಗೆ ಮುಂದಾಗಿದೆ.
Vijaya Karnataka Web ಅಮಿತ್‌ ಶಾ ಜತೆ ನಾಯಕರು
ಅಮಿತ್‌ ಶಾ ಜತೆ ನಾಯಕರು


90 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 40 ಸ್ಥಾನ, ಕಾಂಗ್ರೆಸ್‌ 31, ಜೆಜೆಪಿ 10, ಇತರರು 9 ಕ್ಷೇತ್ರದಲ್ಲಿ ಜಯಗಳಿಸಿದ್ದರು. ಬಹುಮತಕ್ಕಾಗಿ ಬಿಜೆಪಿಗೆ 6 ಸ್ಥಾನದ ಕೊರತೆ ಇತ್ತು.

ಫಲಿತಾಂಶ ಬಂದ ನಂತರದಿಂದಲೂ ನಿರಂತರ ರಾಜಕೀಯ ಚಟುವಟಿಕೆ ನಡೆದಿದ್ದು, ಈಗ ಬಿಜೆಪಿ ಸರಕಾರ ರಚನೆಗೆ ಹಾದಿ ಸುಗಮವಾಗಿದೆ.

ಹೊಸದಿಲ್ಲಿಯಲ್ಲಿ ಜೆಜೆಪಿ ಪಕ್ಷದ ದುಷ್ಯಂತ್‌ ಸಿಂಗ್‌ ಚೌಟಾಲಾ ಜತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಜತೆ ಮಾತುಕತೆ ನಡೆಸಿದರು. ಜತೆಗೆ ಬಿಜೆಪಿಗೆ ಬೆಂಬಲ ನೀಡುವುದಾಗಿಯೂ ದುಷ್ಯಂತ್‌ ಸಿಂಗ್ ಚೌಟಾಲಾ ಘೋಷಿಸಿದರು.

ನಂತರ ಮಾತನಾಡಿದ ಅಮಿತ್‌ ಶಾ, ಹರಿಯಾಣದಲ್ಲಿ ಬಿಜೆಪಿ ಸರಕಾರ ರಚನೆಯಾಗಲಿದೆ. ಜೆಜೆಪಿಗೆ ಉಪ ಮುಖ್ಯಮಂತ್ರಿ ಸ್ಥಾನ ದೊರೆಯಲಿದೆ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ