ಆ್ಯಪ್ನಗರ

'ರಾಯ್‌ಬರೇಲಿ, ಅಮೇಠಿಯಲ್ಲಿ ಕಾಂಗ್ರೆಸ್‌ ಏನು ಮಾಡಿದೆ: ಅಮಿತ್‌ ಶಾ

ಉತ್ತರ ಪ್ರದೇಶದ ರಾಯ್‌ಬರೇಲಿ ಮತ್ತು ಅಮೇಠಿ ಲೋಕಸಭಾ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಕಾಂಗ್ರೆಸ್‌ ಪಕ್ಷ ಹಾಗೂ ಗಾಂಧಿ ಕುಟುಂಬಗಳ ವಿರುದ್ಧ ವಾಗ್ದಾಳಿ ನಡೆಸಿದರು.

TIMESOFINDIA.COM 21 Apr 2018, 9:28 pm
ಲಖನೌ: ಕಾಂಗ್ರೆಸ್‌ ಭದ್ರಕೋಟೆ ಎಂದೇ ಪರಿಗಣಿಸಲಾಗಿರುವ ಉತ್ತರ ಪ್ರದೇಶದ ರಾಯ್‌ಬರೇಲಿ ಮತ್ತು ಅಮೇಠಿ ಲೋಕಸಭೆ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಕಾಂಗ್ರೆಸ್‌ ಪಕ್ಷ ಹಾಗೂ ಗಾಂಧಿ ಕುಟುಂಬಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
Vijaya Karnataka Web amit


ಗಾಂಧಿ ಕುಟುಂಬ ಈ ಕ್ಷೇತ್ರಗಳನ್ನು ದಶಕಗಳ ಕಾಲ ತನ್ನ ಸುಪರ್ದಿಯಲ್ಲಿಟ್ಟುಕೊಂಡಿದ್ದರೂ ಅಭಿವೃದ್ಧಿ ಆಗಿಲ್ಲ ಎಂದು ದೂರಿದ ಅವರು, ವಂಶ ಪಾರಂಪರ್ಯ ರಾಜಕಾರಣ ಕೊನೆಗೊಳಿಸುವ ಪಣತೊಟ್ಟರು.

ರಾಯ್‌ರಬರೇಲಿಯಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಶಾ, ''ಕಾಂಗ್ರೆಸ್‌ ಪಕ್ಷ 60 ವರ್ಷಗಳಲ್ಲಿ ಮಾಡದ್ದನ್ನು ಬಿಜೆಪಿ 5 ವರ್ಷಗಳಲ್ಲಿ ಮಾಡಿ ತೋರಿಸಲಿದೆ. ಕೇಂದ್ರ ಸರಕಾರ ಇಲ್ಲಿಯ ತನಕ ಅಭಿವೃದ್ಧಿಗೆಂದೇ ರಾಜ್ಯಕ್ಕೆ 8 ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮೊತ್ತ ನೀಡಿದೆ. ಈ ಮೊದಲು, ಉತ್ತರಪ್ರದೇಶ ಗೂಂಡಾಗಿರಿ ಮತ್ತು ಕಾನೂನುರಹಿತ ಸ್ಥಿತಿಗೆ ಕುಖ್ಯಾತಿ ಪಡೆದಿತ್ತು. ಯೋಗಿ ಅಧಿಕಾರದ ಚುಕ್ಕಾಣಿ ಹಿಡಿದ ಬೆನ್ನಿಗೇ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸುಧಾರಿಸಿದೆ,'' ಎಂದರು.

ರಾಹುಲ್‌ ಗಾಂಧಿಯವರು 'ಕೇಸರಿ ಭಯೋತ್ಪಾದನೆ' ಎಂದು ಆರೋಪಿಸಿದ್ದಾರೆ. ಆದರೆ, ಮೆಕ್ಕಾ ಮಸೀದಿ ಬಾಂಬ್‌ ಸ್ಫೋಟ ಪ್ರಕರಣದಿಂದ ಅಸೀಮಾನಂದ ಅವರನ್ನು ಕೋರ್ಟ್‌ ಬಿಡುಗಡೆ ಮಾಡಿತು. ಹಿಂದೂಗಳನ್ನು ದೂಷಿಸಿದ್ದಕ್ಕಾಗಿ ಈಗ ರಾಹುಲ್‌ ದೇಶದ ಕ್ಷಮೆ ಕೇಳಬೇಕಿದೆ,'' ಎಂದು ಶಾ ಆಗ್ರಹಿಸಿದರು.

ವೇದಿಕೆಯಲ್ಲಿ ಬೆಂಕಿ

ಅಮಿತ್‌ ಶಾ ಸಾರ್ವಜನಿಕರನ್ನುದ್ದೇಶಿಸಿ ಭಾಷಣ ಮಾಡಲು ಕುಳಿತಿದ್ದ ವೇದಿಕೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಸಾರ್ವಜನಿಕರು ಕೆಲ ಹೊತ್ತು ಆತಂಕಕ್ಕೊಳಗಾದರು. ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಬೆಂಕಿ ಆಕಸ್ಮಿಕ ಸಂಭವಿಸಿದ್ದು, ಸ್ವಲ್ಪ ಹೊತ್ತಿನ್ನಲೇ ಬೆಂಕಿಯನ್ನು ಹತೋಟಿಗೆ ತರಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಕಾಂಗ್ರೆಸ್‌ಗೆ ಬಿಎಸ್‌ಪಿ ಸಾಥ್‌?

ಲಖನೌ: 2019ರ ಲೋಕಸಭಾ ಚುನಾವಣೆಯಲ್ಲಿ, ರಾಯ್‌ಬರೇಲಿ ಮತ್ತು ಅಮೇಠಿ ಕ್ಷೇತ್ರಗಳಲ್ಲಿ ಬಿಎಸ್‌ಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಕಾಂಗ್ರೆಸ್‌ ಅಭ್ಯರ್ಥಿಗೆ ಬೆಂಬಲ ನೀಡಲಿದೆ ಎಂದು ಸುದ್ದಿಯಾಗಿದೆ. ಪಕ್ಷ ದ ಈ ನಡೆಯು ಮತವಿಭಜನೆಯಾಗುವುದನ್ನು ತಡೆಯಲಿದೆ. ಎರಡೂ ಕ್ಷೇತ್ರಗಳಲ್ಲಿ ಪಕ್ಷ ವು ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಬೆಂಬಲಿಸಲಿದೆ ಎಂದು ಪಕ್ಷ ದ ಮುಖ್ಯಸ್ಥೆ ಮಾಯಾವತಿಯವರ ನಿಕಟವರ್ತಿಯೊಬ್ಬರು ಮಾಹಿತಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ