ಆ್ಯಪ್ನಗರ

ಪಶ್ಚಿಮ ಬಂಗಾಳದಲ್ಲಿ ಮತ್ತೆ ಹಿಂಸಾಚಾರ; ಬಿಜೆಪಿ ಕಾರ್ಯಕರ್ತರ ಮೇಲೆ ನಾಡಬಾಂಬ್‌ ದಾಳಿ..!

ಬಿಜೆಪಿ ಕಾರ‍್ಯಕರ್ತರ ಪ್ರತಿಭಟನೆಯಿಂದ ಸ್ಥಳದಲ್ಲಿ ಕೆಲಹೊತ್ತು ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು. ಈ ದಾಳಿಯ ಹಿಂದೆ ಟಿಎಂಸಿ ಕಾರ‍್ಯಕರ್ತರ ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದೆ. ದಾಳಿ ಸಂಬಂಧ ಯಾರನ್ನೂ ಬಂಧಿಸಲಾಗಿಲ್ಲ.

Vijaya Karnataka Web 20 Jan 2021, 8:36 am
ಕೋಲ್ಕೊತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಬಿಜೆಪಿ ನಾಯಕ ಸುವೇಂದು ಅಧಿಕಾರಿ ನಡುವಿನ ವಾಕ್ಸಮರ ತೀವ್ರಗೊಂಡಿರುವ ಮಧ್ಯೆ, ಪೂರ್ವ ಮಿಡ್ನಾಪುರ ಜಿಲ್ಲೆಯಲ್ಲಿ ಸುವೇಂದು ಅವರ ರಾರ‍ಯಲಿಗೆ ತೆರಳುತ್ತಿದ್ದ ಬಿಜೆಪಿ ಕಾರ‍್ಯಕರ್ತರ ಮೇಲೆ ಕಚ್ಚಾ ಬಾಂಬ್‌ ದಾಳಿ ನಡೆದಿದೆ.
Vijaya Karnataka Web BJP FLAG
PTI photo


ರಾಜ್ಯ ವಿಧಾನಸಭೆ ಚುನಾವಣೆಗೆ ಅಖಾಡ ಬಿರುಸುಗೊಂಡಿದ್ದು, ಈ ಹಿಂದೆ ಸುವೇಂದು ಅವರು ಟಿಎಂಸಿಯಿಂದ ಶಾಸಕರಾಗಿ ಗೆದ್ದಿದ್ದ ನಂದಿಗ್ರಾಮ ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ಮಮತಾ ಬ್ಯಾನರ್ಜಿ ಸೋಮವಾರ ಘೋಷಿಸಿದ್ದರು. ಇದಕ್ಕೆ ಸುವೇಂದು ಅಧಿಕಾರಿ ಅವರು, 50 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಮಮತಾ ವಿರುದ್ಧ ಗೆಲ್ಲುವುದಾಗಿ ಹೇಳುವ ಮೂಲಕ ಸವಾಲು ಸ್ವೀಕರಿಸಿದ್ದರು. ಇವರಿಬ್ಬರ ಮಾತಿನ ಸಮರದ ನಡುವೆ, ಮಂಗಳವಾರ ಸುವೇಂದು ಅವರ ಜಾಥಾದಲ್ಲಿ ಭಾಗವಹಿಸಲು ಮಿಡ್ನಾಪುರ ಜಿಲ್ಲೆಯ ಹೇರಿಯಾ ಗ್ರಾಮದತ್ತ ತೆರಳುತ್ತಿದ್ದ ಬಿಜೆಪಿ ಕಾರ‍್ಯಕರ್ತರ ಮೇಲೆ ಮಧ್ಯಾಹ್ನ ನಾಡಬಾಂಬ್‌ ದಾಳಿ ನಡೆಸಲಾಗಿದೆ.

ಸೋಮನಾಥ ದೇಗುಲ ಟ್ರಸ್ಟ್‌ ಅಧ್ಯಕ್ಷರಾಗಿ ಪ್ರಧಾನಿ ನರೇಂದ್ರ ಮೋದಿ ನೇಮಕ
ದಾಳಿಯಲ್ಲಿ ಹಲವರಿಗೆ ಗಾಯಗಳಾಗಿದ್ದು, ವಾಹನಗಳು ಜಖಂಗೊಂಡಿವೆ. ಬಿಜೆಪಿ ಕಾರ‍್ಯಕರ್ತರ ಪ್ರತಿಭಟನೆಯಿಂದ ಸ್ಥಳದಲ್ಲಿ ಕೆಲಹೊತ್ತು ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು. ಈ ದಾಳಿಯ ಹಿಂದೆ ಟಿಎಂಸಿ ಕಾರ‍್ಯಕರ್ತರ ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದೆ. ದಾಳಿ ಸಂಬಂಧ ಯಾರನ್ನೂ ಬಂಧಿಸಲಾಗಿಲ್ಲ. ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುವುದು. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ.
ಬಿಜೆಪಿಯು ಮಾವೋವಾದಿಗಳಿಗಿಂತಲೂ ಅಪಾಯಕಾರಿಯಾದ ಪಕ್ಷವಾಗಿದೆ. ಸುಳ್ಳು ಆಶ್ವಾಸನೆಗಳ ಮೂಲಕ ಜನರನ್ನು ವಂಚಿಸುತ್ತಿದೆ. ಟಿಎಂಸಿ ತೊರೆದು ಬಿಜೆಪಿ ಸೇರುವವರಿಗೆ ನಮ್ಮ ಅಭ್ಯಂತರವೇನೂ ಇಲ್ಲ. ಇದರಿಂದ ಪಕ್ಷಕ್ಕೇನೂ ನಷ್ಟವಿಲ್ಲ.
ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಸಿಎಂ

ನಂದಿ ಗ್ರಾಮದಲ್ಲಿಯೇ ಸ್ಪರ್ಧೆ ಮಾಡುವುದಾದರೆ ಮಮತಾ ಬ್ಯಾನರ್ಜಿ ಅವರು ಮಾಜಿ ಸಿಎಂ ಎಂಬ ಲೆಟರ್‌ಹೆಡ್‌ ಅನ್ನು ಈಗಲೇ ಸಿದ್ಧಮಾಡಿಟ್ಟುಕೊಳ್ಳಲಿ. ದಾಳಿ, ಹಲ್ಲೆ ಮೂಲಕ ನಮ್ಮ ಕಾರ್ಯಕರ್ತರನ್ನು ಬೆದರಿಸಲು ಸಾಧ್ಯವಿಲ್ಲ.
ಸುವೇಂದು ಅಧಿಕಾರಿ, ಬಿಜೆಪಿ ನಾಯಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ