ಆ್ಯಪ್ನಗರ

ಉಳಿಸಿದ 98 ಸಾವಿರ ರೂ. ಏನು ಮಾಡಬೇಕೆಂಬ ಚಿಂತೆ ಈ ಭಿಕ್ಷುಕನಿಗೆ

ಇಲ್ಲೊಬ್ಬ ಭಿಕ್ಷುಕನಿಗೆ ಮಾತ್ರ ತಾನು ಜೀವಮಾನ ಪೂರ್ತಿ ಭಿಕ್ಷೆ ಬೇಡಿ, ಕೂಡಿಟ್ಟ ಹಣವನ್ನು ಏನು ಮಾಡಬೇಕೆಂಬುವುದೇ ತೋಚದಂತಾಗಿದೆ.

ಟೈಮ್ಸ್ ಆಫ್ ಇಂಡಿಯಾ 11 Nov 2016, 6:32 pm
ಇಂದೋರ್: 500 ರೂ. ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ಕೇಂದ್ರ ಸರಕಾರ ನಿಷೇಧಿಸಿರುವುದು ಕಾಳಧನಿಕರನ್ನು ಮಟ್ಟ ಹಾಕಲು. ಜನಸಾಮಾನ್ಯರು ಒಂದೆರಡು ದಿನಗಳ ಕಾಲ ತೊಂದರೆ ಅನುಭವಿಸುವಂತಾದರೂ ಎಲ್ಲವೂ ಶೀಘ್ರದಲ್ಲಿಯೇ ಸರಿ ಹೋಗುವಂತೆ ಸಕಲ ಕ್ರಮಗಳನ್ನೂ ಸರಕಾರ ತೆಗೆದುಕೊಂಡಿದೆ. ಆದರೆ, ಇಲ್ಲೊಬ್ಬ ಭಿಕ್ಷುಕನಿಗೆ ಮಾತ್ರ ತಾನು ಜೀವಮಾನ ಪೂರ್ತಿ ಭಿಕ್ಷೆ ಬೇಡಿ, ಕೂಡಿಟ್ಟ ಹಣವನ್ನು ಏನು ಮಾಡಬೇಕೆಂಬುವುದೇ ತೋಚದಂತಾಗಿದೆ.
Vijaya Karnataka Web blind beggar stuck with rs 98000 bounty in demonetization aftershocks
ಉಳಿಸಿದ 98 ಸಾವಿರ ರೂ. ಏನು ಮಾಡಬೇಕೆಂಬ ಚಿಂತೆ ಈ ಭಿಕ್ಷುಕನಿಗೆ


ಇಲ್ಲಿನ ದೇವಾಸ್ ಜಿಲ್ಲೆಯ ಭಿಕ್ಷುಕ ಸೀತಾರಾಮ್ ಕುರುಡನಾಗಿದ್ದು, ಕಳೆದ 20 ವರ್ಷಗಳಿಂದಲೂ ಭಿಕ್ಷೆ ಬೇಡುವುದನ್ನೇ ಕಾಯಕ ಮಾಡಿಕೊಂಡಿದ್ದಾನೆ. ಕಂಡ್ ಕಂಡಲ್ಲಿ ಭಿಕ್ಷೆ ಬೇಡಿ ಇದುವರೆಗೆ 98 ಸಾವಿರ ರೂ. ಉಳಿತಾಯ ಮಾಡಿದ್ದು, ಈ ಹಣವನ್ನೂ 500 ರೂ. ಹಾಗೂ 1000 ರೂ. ಮುಖಬೆಲೆಯ ಹಣದಿಂದಲೇ ಸಂಗ್ರಹಿಸಿಟ್ಟಿದ್ದಾನೆ. ನೋಟು ನಿಷೇಧದ ಹಿನ್ನೆಲೆಯಲ್ಲಿ ಈತನಿಗೆ ಏನು ಮಾಡಬೇಕೆಂಬುದು ತೋಚದೆ, ತಾನೂ ಕೂಡಿಟ್ಟ ಹಣವನ್ನು ತಂದು, ಗ್ರಾಮ ಪಂಚಾಯತಿ ಕಚೇರಿ ಅಧಿಕಾರಿಗಳಿಗೆ ಸಹಕರಿಸುವಂತೆ ಆಗ್ರಹಿಸಿದ್ದಾನೆ.

ಭಿಕ್ಷೆ ಬೇಡಿದ ಹಣವನ್ನು ಸುರಕ್ಷಿತವಾಗಿಡಲು ಸಾಧ್ಯವಾಗದ ಸೀತಾರಾಮ್, ತಮ್ಮ ಪರಿಚಯಸ್ಥರ ಬಳಿ ಸಂಪಾದಿಸಿದ ಹಣವನ್ನು ಇಟ್ಟುಕೊಳ್ಳಲು ಹೇಳಿದ್ದರು. ಇದೀಗ ಸರಕಾರದ ಈ ನಿರ್ಧಾರದಿಂದ ಈ ಹಣ ಇಟ್ಟುಕೊಳ್ಳುವುದು ವ್ಯರ್ಥವೆಂದು ಹೇಳಿ, ಜವಾಬ್ದಾರಿ ತೆಗೆದುಕೊಳ್ಳಲು ಆಗುವುದಿಲ್ಲವೆಂಬ ಸ್ನೇಹಿತರು, ಸೀತಾರಾಮ್‌ಗೆ ಹಣವನ್ನು ಮರಳಿಸಿದ್ದಾರೆ.

ಈ ಸಮಸ್ಯೆಗೆ ಸೂಕ್ತ ಪರಿಹಾರ ಕಂಡು ಕೊಳ್ಳಲು ನೆರವು ನೀಡುವ ಭರವಸೆಯನ್ನು ಗ್ರಾಮ ಪಂಚಾಯತಿ ಅಧಿಕಾರಿಗಳು ಭಿಕ್ಷುಕನಿಗೆ ನೀಡಿದ್ದು, ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಬ್ಯಾಂಕ್ ಖಾತೆ ತೆರೆದು, ಹಣವನ್ನಿಡಲು ಸೂಕ್ತ ವ್ಯವಸ್ಥೆ ಮಾಡಿಕೊಡುವ ಭರವಸೆ ಈ ಭಿಕ್ಷುಕನಿಗೆ ಸಿಕ್ಕಿದೆ.

ರಾಜಸ್ಥಾನ ಮೂಲದ ಸೀತಾರಾಮ್ ಸಿಯಾ ಗ್ರಾಮಕ್ಕೆ ಕಳೆದ 20 ವರ್ಷಗಳ ಹಿಂದೆ ಪತ್ನಿಯೊಂದಿಗೆ ವಲಸೆ ಬಂದಿದ್ದಾರೆ. ಕುರುಡರಾದ ಕಾರಣ ಎಲ್ಲಿಯೂ ಕೆಲಸ ಸಿಗದ ಕಾರಣ, ಹಳ್ಳಿಯ ರಸ್ತೆಗಳಲ್ಲಿ ಭಿಕ್ಷೆ ಬೇಡಲು ಆರಂಭಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ