ಆ್ಯಪ್ನಗರ

ಹೇಳಿಕೆಯಿಂದ ದೂರವಿರಬೇಕಾಗಿತ್ತು: ಸತ್ಯಪಾಲ್‌ ಮಲಿಕ್‌

ಆಕ್ರೋಶದಿಂದ ಈ ಮಾತು ಹೊರಬಂದಿರುವುದಾಗಿ ಸತ್ಯಪಾಲ್‌ ಮಲಿಕ್‌ ಹೇಳಿದ್ದಾರೆ. ಅಲ್ಲದೇ ಇಂತಹ ಹೇಳಿಕೆಯಿಂದ ದೂರವಿರಬೇಕಾಗಿತ್ತು ಎಂದಿದ್ದಾರೆ.

PTI 23 Jul 2019, 5:00 am
ಶ್ರೀನಗರ: ಉಗ್ರರು ಮುಗ್ಧರನ್ನು ಕೊಲ್ಲುವ ಬದಲು ಭ್ರಷ್ಟರನ್ನು ಗುರಿಯಾಗಿಸಿಕೊಳ್ಳಬೇಕು ಎಂದು ಹೇಳಿಕೆ ವಿವಾದ ಮೈಮೇಲೆ ಎಳೆದುಕೊಂಡಿದ್ದ ಜಮ್ಮು-ಕಾಶ್ಮೀರ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಅವರು, ಆಕ್ರೋಶದಿಂದ ಈ ಮಾತು ಹೊರಬಂದಿರುವುದಾಗಿ ಹೇಳಿದ್ದಾರೆ. ಅಲ್ಲದೇ ಇಂತಹ ಹೇಳಿಕೆಯಿಂದ ದೂರವಿರಬೇಕಾಗಿತ್ತು ಎಂದಿದ್ದಾರೆ.
Vijaya Karnataka Web 408458-satyapal-malik

''ರಾಜ್ಯದಲ್ಲಿನ ಭ್ರಷ್ಟಾಚಾರ ನೋಡಿ ನನ್ನ ರಕ್ತ ಕುದಿಯುತ್ತಿದೆ. ಅಷ್ಟರಮಟ್ಟಿಗೆ ವ್ಯವಸ್ಥೆ ಹದಗೆಟ್ಟಿದೆ. ಅನೇಕ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದು, ನಾನು ತನಿಖೆಗೆ ಆದೇಶಿಸಿದ ಪ್ರಕರಣಗಳಲ್ಲಿ ಮೂವರು ಮಾಜಿ ಸಚಿವರುಗಳ ಹೆಸರಗಳೂ ಇವೆ. ಈ ಆಕ್ರೋಶದಲ್ಲಿ ಉಗ್ರರು ಮುಗ್ಧರ ಬದಲಿಗೆ ಭ್ರಷ್ಟರನ್ನು ಗುರಿಯಾಗಿಸಿಕೊಳ್ಳಬೇಕು ಎಂದು ಹೇಳಿದೆ. ಆದರೆ ಸಾಂವಿಧಾನಿಕ ಹುದ್ದೆಯಲ್ಲಿದ್ದುಕೊಂಡು ನಾನು ಹೀಗೆ ಹೇಳಬಾರದಿತ್ತು,'' ಎಂದು ಅವರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ