ಆ್ಯಪ್ನಗರ

ಅಮಿತಾಭ್‌ ಬಚ್ಚನ್‌ ಟ್ವಿಟರ್‌ ಖಾತೆ ಹ್ಯಾಕ್‌, ಪಾಕ್‌ ಪ್ರಧಾನಿ ಫೋಟೊ ಪ್ರತ್ಯಕ್ಷ

ಅಮಿತಾಭ್‌ ಅವರ ಖಾತೆಯಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಫೋಟೊ ಹಾಕಿದ್ದ ಹ್ಯಾಕರ್ಸ್‌, ಅವರ ಸ್ವವಿವರಣೆಯನ್ನು ಕೂಡ ಬದಲಾಯಿಸಿ 'ಲವ್‌ ಪಾಕಿಸ್ತಾನ್‌' ಎಂದು ಬರೆದಿದ್ದರು.

PTI 12 Jun 2019, 5:00 am
ಹೊಸದಿಲ್ಲಿ : ಬಾಲಿವುಡ್‌ ಹಿರಿಯ ನಟ ಅಮಿತಾಭ್‌ ಬಚ್ಚನ್‌ ಹಾಗೂ ಗಾಯಕ ಅದ್ನಾನ್‌ ಸಾಮಿ ಅವರ ಅವರ ಟ್ವಿಟರ್‌ ಖಾತೆಯನ್ನು ಟರ್ಕಿ ಮೂಲದ ಹ್ಯಾಕರ್ಸ್‌ಗಳು ಹ್ಯಾಕ್‌ ಮಾಡಿದ್ದ ಘಟನೆ ನಡೆದಿದೆ.
Vijaya Karnataka Web tweet


ಅಮಿತಾಭ್‌ ಅವರ ಖಾತೆಯಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಫೋಟೊ ಹಾಕಿದ್ದ ಹ್ಯಾಕರ್ಸ್‌, ಅವರ ಸ್ವವಿವರಣೆಯನ್ನು ಕೂಡ ಬದಲಾಯಿಸಿ 'ಲವ್‌ ಪಾಕಿಸ್ತಾನ್‌' ಎಂದು ಬರೆದಿದ್ದರು. ಟರ್ಕಿ ರಾಷ್ಟ್ರಧ್ವಜದ ಎಮೊಜಿಯನ್ನು ಕೂಡ ಖಾತೆಯಲ್ಲಿ ಹಾಕಿ, ಹಾರುತ್ತಿರುವ ಗರುಡದ ಫೋಟೊವನ್ನು ಮುಖಪುಟದಲ್ಲಿ ಪ್ರದರ್ಶಿಸಿದ್ದರು.

''ನಾವು ಬಹುದೊಡ್ಡ ಸೈಬರ್‌ ದಾಳಿ ಬಗ್ಗೆ ನಿಮ್ಮನ್ನು ಎಚ್ಚರಿಸುತ್ತೇವೆ. ಟರ್ಕಿ ಫುಟ್ಬಾಲ್‌ ಆಟಗಾರರನ್ನು ಐಸ್‌ಲೆಂಡ್‌ ಅವಮಾನಿಸಿದೆ. ನಾವು ಅಯ್ಯಿಲ್ದಿಜ್‌ ಟಿಮ್‌ ಟರ್ಕಿಶ್‌ ಸೈಬರ್‌ ಸೇನೆಯವರು,'' ಎಂದು ಹ್ಯಾಕರ್ಸ್‌ ಅಮಿತಾಭ್‌ ಅವರ ಖಾತೆಯಿಂದ ಟ್ವೀಟ್‌ ಮಾಡಿದ್ದರು. ಬಳಿಕ ಹಲವು ಎಚ್ಚರಿಕೆ ಟ್ವೀಟ್‌ಗಳನ್ನು ಮಾಡಿ, ಭಾರತದ ಮುಸ್ಲಿಮರ ನೆರವಿಗೆ ನಾವು ಕಾಯುತ್ತಿದ್ದೇವೆ ಎಂದು ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನ ಲಿಂಕ್‌ ಕೂಡ ಹಾಕಿದ್ದರು. ಬಚ್ಚನ್‌ ಖಾತೆ ಹ್ಯಾಕ್‌ ವಿಚಾರ ವೈರಲ್‌ ಆಗುತ್ತಿದ್ದಂತೆ ಎಚ್ಚೆತ್ತ ಮುಂಬೈ ಪೊಲೀಸ್‌ ಸೈಬರ್‌ ತಂಡ ಖಾತೆಯನ್ನು ಮತ್ತೆ ಸಕ್ರಿಯಗೊಳಿಸಿ, ಹ್ಯಾಕರ್ಸ್‌ ಹಾಕಿದ್ದ ಸಂದೇಶಗಳನ್ನು ಅಳಿಸಿದೆ.

ಭಾರತದಲ್ಲಿ ನೆಲೆಸಿರುವ ಪಾಕ್‌ ಮೂಲದ ಖ್ಯಾತ ಗಾಯಕ ಅದ್ನಾನ್‌ ಸಮಿ ಅವರ ಟ್ವಿಟರ್‌ ಖಾತೆಯನ್ನು ಕೂಡ ಟರ್ಕಿ ಹ್ಯಾಕರ್ಸ್‌ ಹ್ಯಾಕ್‌ ಮಾಡಿದ್ದಾರೆ. ಇಲ್ಲಿಯೂ ಪಾಕ್‌ ಪ್ರಧಾನಿ ಇಮ್ರಾನ್‌ ಫೋಟೊವನ್ನು ಹಾಕಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ