ಆ್ಯಪ್ನಗರ

ಉತ್ತರ ಪ್ರದೇಶದ ಲಖನೌ ನ್ಯಾಯಾಲಯದಲ್ಲಿ ಕಚ್ಚಾ ಬಾಂಬ್‌ ಸ್ಫೋಟ: ವಕೀಲರು ಸೇರಿ ಮೂವರಿಗೆ ಗಾಯ

ಉತ್ತರ ಪ್ರದೇಶ ವಿಧಾನಸಭೆಯಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿ ಹಾಗೂ ಲಖನೌನ ನ್ಯಾಯಾಲಯದ ಕಾಂಪೌಂಡ್‌ ಬಳಿ ಕಚ್ಚಾ ಬಾಂಬ್‌ ಸ್ಫೋಟಗೊಂಡಿದೆ. ಸ್ಫೋಟದಲ್ಲಿ ಇಬ್ಬರು ವಕೀಲರು ಸೇರಿ ಮೂವರಿಗೆ ಗಾಯಗಳಾಗಿದೆ ಎಂದು ತಿಳಿದುಬಂದಿದೆ.

Agencies 13 Feb 2020, 2:40 pm
ಲಖನೌ: ಉತ್ತರ ಪ್ರದೇಶ ರಾಜಧಾನಿ ಲಖನೌನ ನ್ಯಾಯಾಲಯದ ಕಾಂಪೌಂಡ್‌ ಬಳಿ ಗುರುವಾರ ಮಧ್ಯಾಹ್ನ ಕಚ್ಚಾ ಬಾಂಬ್‌ ಸ್ಫೋಟವಾಗಿದೆ. ಸ್ಫೋಟದಲ್ಲಿ ಇಬ್ಬರು ವಕೀಲರು ಸೇರಿ ಮೂವರಿಗೆ ಗಾಯಗಳಾಗಿದೆ ಎಂದು ಸ್ಥಳದಲ್ಲಿದ್ದ ವಕೀಲರೊಬ್ಬರು ಹೇಳಿದ್ದಾರೆ.
Vijaya Karnataka Web lucknow crude bomb toi


ಅಲ್ಲದೆ, ಸ್ಥಳದಲ್ಲಿ ಮೂರು ಕಚ್ಚಾ ಬಾಂಬ್‌ಗಳು ಪತ್ತೆಯಾಗಿದೆ ಎಂದೂ ತಿಳಿದುಬಂದಿದೆ. ಬಾಂಬ್‌ ಅನ್ನು ಲಖನೌ ನ್ಯಾಯಾಲಯದ ವಕೀಲರ ಚೇಂಬರ್‌ನತ್ತ ಎಸೆಯಲಾಗಿದ್ದು, ಈ ವೇಳೆ ವಕೀಲರು ಗಾಯಕ್ಕೊಳಗಾಗಿದ್ದಾರೆ ಎಂದು ತಿಳಿದುಬಂದಿದೆ. ಲಖನೌ ವಕೀಲರ ಸಂಘದ ಜಂಟಿ ಕಾರ್ಯದರ್ಶಿ ಸಂಜೀವ್‌ ಲೋಧಿಯನ್ನು ಗುರಿಯಾಗಿಸಿಕೊಂಡು ಬಾಂಬ್‌ ಎಸೆಯಲಾಗಿದೆ ಎನ್ನಲಾಗಿದ್ದು, ಮತ್ತೊಬ್ಬ ವಕೀಲ ಜಿತು ಯಾದವ್‌ ಈ ಕೃತ್ಯ ನಡೆಸಿದ್ದಾರೆಂದು ಲೋಧಿ ಆರೋಪಿಸಿದ್ದಾರೆ.

ಸ್ಥಳಕ್ಕೆ ಉತ್ತರ ಪ್ರದೇಶ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಯ ಸಮೀಪವಿರುವ ಹಜರತ್‌ಗಂಜ್‌ನ ಲಖನೌ ಕಲೆಕ್ಟರೇಟ್‌ನಲ್ಲಿ ಮತ್ತು ಉತ್ತರ ಪ್ರದೇಶ ವಿಧಾನಸಭೆಯಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿ ಈ ಸ್ಫೋಟ ಸಂಭವಿಸಿರುವುದು ಆಘಾತಕಾರಿಯಾಗಿದೆ.

ಉತ್ತರ ಪ್ರದೇಶ: 22 ಮಕ್ಕಳನ್ನು ಒತ್ತೆ ಇರಿಸಿಕೊಂಡು ಗುಂಡು ಹಾರಿಸಿದ ಕ್ರಿಮಿನಲ್‌

ಈ ಘಟನೆಯ ಬಳಿಕ ಹಲವು ವಕೀಲರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಪ್ರದೇಶದಲ್ಲಿ ವಕೀಲರು ಕಿಕ್ಕಿರಿದ್ದಾರೆ. ಇನ್ನು, ಈ ಘಟನೆಯನ್ನು ಖಂಡಿಸಿರುವ ಬಾರ್‌ ಕೌನ್ಸಿಲ್‌ ಆಫ್‌ ಇಂಡಿಯಾದ ಮುಖ್ಯಸ್ಥ ಮನನ್ ಮಿಶ್ರಾ, ಅಪರಾಧಿಗಳನ್ನು ಶೀಘ್ರದಲ್ಲೇ ಬಂಧಿಸಬೇಕು. ಇಂತಹ ಘಟನೆಗಳ ಕಾರಣದಿಂದಾಗಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ ವಕೀಲರ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತರಲು ಒತ್ತಾಯಿಸಿದ್ದೇವೆ ಎಂದು ಒತ್ತಾಯಿಸಿದ್ದಾರೆ.

ಗೋವು ಕಳ್ಳರ ಬಾಂಬ್‌ ದಾಳಿಗೆ ಕೈ ಕಳೆದುಕೊಂಡ ಬಿಎಸ್‌ಎಫ್‌ ಯೋಧ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ