ಆ್ಯಪ್ನಗರ

ದಲಿತ ಪದ ಬಳಸದಂತೆ ಮಾಧ್ಯಮಗಳಿಗೆ ಕೋರ್ಟ್‌ ಸೂಚನೆ

ಮಾಧ್ಯಮದ ವರದಿಗಳಲ್ಲಿ 'ದಲಿತ' ಎಂಬ ಶಬ್ಧವನ್ನು ಬಳಸದಿರಲು ಯಾವ ಬಗೆ ಸೂಚನೆಗಳನ್ನು ನೀಡಿದ್ದೀರಿ ಬಾಂಬೆ ಹೈಕೋರ್ಟ್‌ ಪ್ರಶ್ನಿಸಿದೆ

TIMESOFINDIA.COM 7 Jun 2018, 6:01 pm
ನಾಗ್ಪುರ: ಮಾಧ್ಯಮದ ವರದಿಗಳಲ್ಲಿ 'ದಲಿತ' ಎಂಬ ಶಬ್ಧವನ್ನು ಬಳಸದಿರಲು ಸೂಚನೆಗಳನ್ನು ನೀಡಬೇಕು ಎಂದು ಕೇಂದ್ರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಪ್ರೆಸ್‌ ಕೌನ್ಸಿಲ್‌ ಆಫ್‌ ಇಂಡಿಯಾಗೆ ಬಾಂಬೆ ಹೈಕೋರ್ಟ್‌ನ ನಾಗ್ಪುರ ವಿಭಾಗೀಯ ಪೀಠ ಆದೇಶಿಸಿದೆ.
Vijaya Karnataka Web bobay hc


ಪತ್ರಿಕೆ ಹಾಗೂ ಟಿವಿ ಮಾಧ್ಯಮಗಳಲ್ಲಿ ದಲಿತ ಎಂಬ ಪದದ ಬದಲಿಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಎಂದು ಉಲ್ಲೇಖಿಸುವ ಬಗ್ಗೆ ಕೇಂದ್ರ ಸಮಾಜ ಕಲ್ಯಾಣ ಇಲಾಖೆಯ ಮಾ. 15ರ ಸುತ್ತೋಲೆಯನ್ನು ಹೊರಡಿಸಿರುವ ಕುರಿತು ನ್ಯಾಯಮೂರ್ತಿಗಳಾದ ಭೂಷಣ್‌ ಧರ್ಮಾಧಿಕಾರಿ ಹಾಗೂ ಜಕ ಹಕ್‌ ಅವರಿದ್ದ ವಿಭಾಗೀಯ ಪೀಠ ಗಮನ ಸೆಳೆಯಿತು.

ಕೇಂದ್ರ ಸರಕಾರದ ಸುತ್ತೋಲೆಯ ಆಧಾರದ ಮೇರೆಗೆ ಬಾಂಬೆ ಸರಕಾರ 4 ವಾರಗೊಳಗಾಗಿ ಅಧಿಸೂಚನೆ ಪ್ರಕಟಿಸುವುದಾಗಿ ಸರಕಾರಿ ವಕೀಲರು ಕೋರ್ಟ್‌ಗೆ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ