ಆ್ಯಪ್ನಗರ

ಗಡಿ ಸಂಘರ್ಷದ ನಡುವೆ ಹಾರಿದ ಟಿಬೆಟ್‌ ಧ್ವಜ

ಸಿಕ್ಕಿಂ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರೆದಿರುವ ನಡುವೆಯೇ, ಭಾರತ ಪ್ರವಾಸ ಕೈಗೊಳ್ಳುವ ತನ್ನ ಪ್ರಜೆಗಳಿಗೆ ಚೀನಾ ಸರ್ಕಾರ ಭದ್ರತಾ ಸಲಹೆಗಳ ಸರಮಾಲೆಯನ್ನೇ ನೀಡಿದೆ.

ಟೈಮ್ಸ್ ಆಫ್ ಇಂಡಿಯಾ 9 Jul 2017, 8:57 am

ಸಿಕ್ಕಿಂ ಮತ್ತು ಭೂತಾನ್‌ ಗಡಿ ವಿಚಾರದಲ್ಲಿ ಭಾರತ-ಚೀನಾ ನಡುವೆ ಸಂಘರ್ಷ ನಡೆಯುತ್ತಿದ್ದರೆ, ಮತ್ತೊಂದೆಡೆ ಚೀನಾ ಜತೆಗೆ ಗಡಿ ವಿವಾದ ಇರುವ ಪಾಂಗ್‌ಗಾಂಗ್‌ ಸರೋವರ ಪ್ರದೇಶದಲ್ಲಿ ಟಿಬೆಟ್‌ ರಾಷ್ಟ್ರಧ್ವಜ ಹಾರಾಡುತ್ತಿದೆ.

ಹೊಸದಿಲ್ಲಿ: ಸಿಕ್ಕಿಂ ಮತ್ತು ಭೂತಾನ್‌ ಗಡಿ ವಿಚಾರದಲ್ಲಿ ಭಾರತ-ಚೀನಾ ನಡುವೆ ಸಂಘರ್ಷ ನಡೆಯುತ್ತಿದ್ದರೆ, ಮತ್ತೊಂದೆಡೆ ಚೀನಾ ಜತೆಗೆ ಗಡಿ ವಿವಾದ ಇರುವ ಪಾಂಗ್‌ಗಾಂಗ್‌ ಸರೋವರ ಪ್ರದೇಶದಲ್ಲಿ ಟಿಬೆಟ್‌ ರಾಷ್ಟ್ರಧ್ವಜ ಹಾರಾಡುತ್ತಿದೆ.

ಟಿಬೆಟ್‌ನ ಅಧ್ಯಕ್ಷ ಲಾಬ್‌ಸಾಂಗ್‌ ಸಾಂಗೇ ಲಡಾಕ್‌ನ ಪಾಂಗ್‌ಗಾಂಗ್‌ ತೀರದಲ್ಲಿ ಟಿಬೆಟ್‌ ರಾಷ್ಟ್ರಧ್ವಜ ಹಾರಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಅತಿ ಪ್ರಮುಖ ವಲಯದಲ್ಲಿ ಇದೇ ಮೊದಲ ಬಾರಿಗೆ ಟಿಬೆಟ್‌ನ ಸ್ವತಂತ್ರ ರಾಷ್ಟ್ರಧ್ವಜವು ಅನಾವರಣಗೊಂಡಿದೆ ಎಂದು ಟಿಬೆಟ್‌ನ ಸರಕಾರದ ವಕ್ತಾರ ಸೋನಮ್‌ ನೊರ್ಬು ಡಾಗ್ಪೋ ಪ್ರತಿಕ್ರಿಯಿಸಿದ್ದಾರೆ.

14 ಸಾವಿರ ಅಡಿ ಎತ್ತರದಲ್ಲಿರುವ ಪಾಂಗ್‌ ಗಾಂಗ್‌ ಸರೋವರವು ಅರ್ಧ ಭಾರತ ಹಾಗೂ ಇನ್ನರ್ಧ ಟಿಬೆಟ್‌ ವಲಯದಲ್ಲಿ ಹರಡಿದೆ. ಈ ಭಾಗದಲ್ಲಿ ಟಿಬೆಟ್‌ ರಾಷ್ಟ್ರಧ್ವಜ ಹಾರಿಸಿರುವುದು ರಾಜಕೀಯ ಪ್ರಾಮುಖ್ಯತೆ ಪಡೆದಿದೆ ಎಂದು ವಿಶ್ಲೇಷಿಸಲಾಗಿದೆ.

Vijaya Karnataka Web border standoff china issues safety advisory for its citizens travelling to india
ಗಡಿ ಸಂಘರ್ಷದ ನಡುವೆ ಹಾರಿದ ಟಿಬೆಟ್‌ ಧ್ವಜ


ಪ್ರವಾಸಿಗರಿಗೆ ಎಚ್ಚರಿಕೆ:
ಬೀಜಿಂಗ್‌: ಸಿಕ್ಕಿಂ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರೆದಿರುವ ನಡುವೆಯೇ, ಭಾರತ ಪ್ರವಾಸ ಕೈಗೊಳ್ಳುವ ತನ್ನ ಪ್ರಜೆಗಳಿಗೆ ಚೀನಾ ಸರ್ಕಾರ ಭದ್ರತಾ ಸಲಹೆಗಳ ಸರಮಾಲೆಯನ್ನೇ ನೀಡಿದೆ. ಆತ್ಮರಕ್ಷಣೆಗೆ ಅಗತ್ಯವಿರುವ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡೇ ಭಾರತಕ್ಕೆ ತೆರಳುವಂತೆ ಅದು ತಾಕೀತು ಮಾಡಿದೆ.

''ಇದು ಪ್ರಯಾಣದ ತಯಾರಿ ಕುರಿತ ಸಲಹೆಯಲ್ಲ. ಚೀನಾ ಪ್ರಯಾಣಿಕರಿಗೆ ನೀಡುತ್ತಿರುವ ಕಟ್ಟೆಚ್ಚರದ ಸಲಹೆ,'' ಎಂದು ಚೀನಾ ವಿದೇಶಾಂಗ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತ ಪ್ರವಾಸ ಕೈಗೊಳ್ಳುವುದಿದ್ದರೆ, ಭದ್ರತೆಗೆ ಹೆಚ್ಚಿನ ಆದ್ಯತೆ ನೀಡುವುದರ ಜತೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಚೀನೀ ಪ್ರವಾಸಿಗರಿಗೆ ಸಲಹೆ ನೀಡಲಾಗಿದೆ.

ಇಂದಿನ (ಜುಲೈ 8) ದಿನಾಂಕ ನಮೂದಿಸಿ ಚೀನೀ ಭಾಷೆಯಲ್ಲಿ ಬರೆಯಲಾಗಿರುವ ಭದ್ರತಾ ಸಲಹೆಯನ್ನು ದಿಲ್ಲಿಯಲ್ಲಿರುವ ಚೀನಾ ರಾಯಭಾರಿ ಕಚೇರಿ ಮುಖಾಂತರ ಚೀನೀ ನಾಗರಿಕರಿಗೆ ವಿತರಿಸಲಾಗಿದೆ.

ಸ್ಥಳೀಯ ಭದ್ರತಾ ಏರ್ಪಾಟುಗಳ ಬಗ್ಗೆ ತಿಳಿದುಕೊಳ್ಳುವುದು, ವೈಯಕ್ತಿಕ ಗುರುತಿನ ಚೀಟಿ ಕೊಂಡೊಯ್ಯುವುದು, ಭಾರತೀಯ ಕಾನೂನು ಮತ್ತು ನಿಯಮಗಳನ್ನು ಪಾಲಿಸುವುದು , ಆತ್ಮರಕ್ಷಣೆಯ ಅರಿವು ಹೆಚ್ಚಿಸಿಕೊಳ್ಳುವುದು, ಭದ್ರತೆಯನ್ನು ಬಿಗಿಗೊಳಿಸಿಕೊಳ್ಳುವುದು, ಅನಗತ್ಯ ತಿರುಗಾಟ ಕಡಿತಗೊಳಿಸುವುದು, ಆತ್ಮರಕ್ಷಣೆ ಹಾಗೂ ಆಸ್ತಿ ರಕ್ಷಣೆಗೆ ಆದ್ಯತೆ ನೀಡುವುದು, ತಮ್ಮ ಪ್ರಯಾಣದ ಬಗ್ಗೆ ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಗೆ ಮುಂಚಿತವಾಗಿ ಮಾಹಿತಿ ನೀಡುವುದು.... ಇವು ಭದ್ರತಾ ಸಲಹೆಯಲ್ಲಿ ಅಡಕವಾಗಿರುವ ಪ್ರಮುಖ ಅಂಶಗಳಾಗಿವೆ.

ಅಗತ್ಯಕ್ಕಿರಲಿ ಎಂದು ರಾಯಭಾರಿ ಕಚೇರಿಯ ದೂತಾವಾಸ ವಿಭಾಗದ ದೂರವಾಣಿ ಸಂಖ್ಯೆ ಒದಗಿಸುವುದಕ್ಕೂ ಏರ್ಪಾಟು ಮಾಡಲಾಗಿದೆ.

ಭೂತಾನ್‌ ಟ್ರೈಜಂಕ್ಷನ್‌ಗೆ ಸಮೀಪ ದೋಕ್ಲಾಮ್‌ ವಲಯದಲ್ಲಿ ಚೀನಾ ಸೇನೆಯ ನಿರ್ಮಾಣ ಘಟಕವೊಂದು ರಸ್ತೆ ನಿರ್ಮಿಸಲು ಹೊರಟಿರುವುದರಿಂದ ಕಳೆದ ಮೂರು ವಾರಗಳಿಂದ ಭಾರತ ಹಾಗೂ ಚೀನಾ ನಡುವೆ ಸಿಕ್ಕಿಂ ಗಡಿಯಲ್ಲಿ ಉಗ್ವಿಗ್ನ ಪರಿಸ್ಥಿತಿ ನೆಲೆಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ