ಆ್ಯಪ್ನಗರ

ಪೋರ್ನ್‌ ವೀಕ್ಷಿಸಿ ತಂಗಿ ಮೇಲೆ ದೌರ್ಜನ್ಯ; ಆತ್ಮಹತ್ಯೆ

ತನ್ನ ಐದು ವರ್ಷದ ತಂಗಿಯ ಮೇಲೆ ಲೈಂಗಿಕ ಕಿರುಕುಳ ನೀಡಿ ಸಿಕ್ಕಿಬಿದ್ದ 12ರ ಬಾಲಕ ಭಯಗೊಂಡು ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಟೈಮ್ಸ್ ಆಫ್ ಇಂಡಿಯಾ 5 Aug 2017, 4:06 pm
ರಾಜ್‌ಕೋಟ್‌: ತನ್ನ ಐದು ವರ್ಷದ ತಂಗಿಯ ಮೇಲೆ ಲೈಂಗಿಕ ಕಿರುಕುಳ ನೀಡಿ ಸಿಕ್ಕಿಬಿದ್ದ 12ರ ಬಾಲಕ ಬೇಸರಗೊಂಡು ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
Vijaya Karnataka Web boy caught molesting 5 year old sister immolates self
ಪೋರ್ನ್‌ ವೀಕ್ಷಿಸಿ ತಂಗಿ ಮೇಲೆ ದೌರ್ಜನ್ಯ; ಆತ್ಮಹತ್ಯೆ


'ಮೆಟೋದ ಜಿಡಿಸಿ' ಎಂಬ ಪ್ರದೇಶದ ನಿವಾಸಿಯಾಗಿರುವ ಬಾಲಕ, ಲಾಲಾ ಎಂಬವರ ಹೋಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದ, ಶುಕ್ರವಾರದಂದು ಬಾಲಕ ತನ್ನ ಮೊಬೈಲ್‌ನಲ್ಲಿ ಪೋರ್ನ್‌ ವೀಡಿಯೋ ವೀಕ್ಷಿಸಿದ್ದಾನೆ. ಬಳಿಕ ತನ್ನ ತಂಗಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಮುಂದಾಗಿದ್ದಾನೆ. ಈ ವೇಳೆ ಹೋಟೇಲ್‌ ಮಾಲೀಕ ಲಾಲ ಹಾಗು ಮತ್ತೋರ್ವ ವ್ಯಕ್ತಿ ಬಾಲಕ ಕೃತ್ಯವನ್ನು ವೀಕ್ಷಿಸಿದ್ದಾರೆ. ಅಲ್ಲದೇ ಈ ಘಟನೆಯಲ್ಲಿ ಪೋಷಕರಿಗೆ ತಿಳಿಸುವುದಾಗಿ ಬೆದರಿಸಿದ್ದಾರೆ.

ಇದರಿಂದ ಭಯಗೊಂಡ ಬಾಲಕ ಕೋಣೆಯೊಂದರಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಲಾಲ ಪೊಲೀಸರಿಗೆ ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಡಿ ಹೆಚ್‌ ಗೋಖನಿ, ಮೇಲ್ನೋಟಕ್ಕೆ ತನ್ನ ಕೃತ್ಯ ಎಲ್ಲಿ ಬಯಲಾಗುತ್ತದೆಯೋ ಎಂಬ ಭಯಕ್ಕೆ ಬಾಲಕ ಆತ್ಮಹತ್ಯೆ ಮಾಡಿಕೊಂಡಂತಿದೆ. ಹೀಗಾಗಿ ಇದೊಂದು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ