ಆ್ಯಪ್ನಗರ

ಹೃದಯವಿದ್ರಾವಕ: ತಂದೆ ಮಗನ ಸಾವಿಗೆ ಕಾರಣವಾಯ್ತು ಕಣ್ಣುಮುಚ್ಚಾಲೆ ಆಟ

ಕಣ್ಣುಮುಚ್ಚಾಲೆ ಆಟವೊಂದು ತಂದೆ - ಮಗನ ದುರಂತ ಅಂತ್ಯಕ್ಕೆ ಕಾರಣವಾಗಿದೆ.

TIMESOFINDIA.COM 22 Dec 2018, 4:02 pm
ಕೊಯಮತ್ತೂರು: ತಂದೆ ಮಗಳು ಆಡುತ್ತಿದ್ದ ಆಟ ಬಹುದೊಡ್ಡ ದುರಂತಕ್ಕೆ ಕಾರಣವಾದ ಹೃದಯವಿದ್ರಾವಕ ಘಟನೆ ತಮಿಳುನಾಡಿನಲ್ಲಿ ಗುರುವಾರ ಸಂಜೆ ನಡೆದಿದೆ. ಆಕಸ್ಮಿಕವಾಗಿ ನೀರಲ್ಲಿ ಮುಳುಗಿ 2 ವರ್ಷದ ಮಗ ಸತ್ತನೆಂದು ಆತನ ತಂದೆ ಕೂಡ ಆತ್ಮಹತ್ಯೆಗೆ ಶರಣಾಗಿದ್ದು ವಿನೋದಕ್ಕಾಗಿ ಆಡಿದ ಆಟ ತಂದೆ ಮಗನ ಬದುಕಿನ ಆಟವನ್ನೇ ಮುಗಿಸಿದೆ. ಕುಟುಂಬದ ಉಳಿದ ಸದಸ್ಯರಾದ ತಾಯಿ ಮಗಳ ಗೋಳಿಗ ಹೇಳತೀರದಾಗಿದೆ.
Vijaya Karnataka Web Death


ಘಟನೆ ವಿವರ:
ಮೊಬೈಲ್ ಅಂಗಡಿ ನಡೆಸುತ್ತಿದ್ದ ಮಣಿಕಂದನ್ (32) ಗುರುವಾರ ಸಂಜೆ ತನ್ನ ಮಗಳು ದೇವದರ್ಶಿನಿ (5)ಯೊಂದಿಗೆ ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದರು. ಆಗ 2 ವರ್ಷದ ಮಗ ದೇಜಶ್ವಿನ್ ಅಲ್ಲೇ ಸುತ್ತಮುತ್ತಲು ಆಡಿಕೊಂಡಿದ್ದ. ಕೆಲ ದಿನಗಳ ಹಿಂದೆ ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ಬಿದ್ದು ಪೆಟ್ಟುಕೊಂಡಿದ್ದ ತಾಯಿ ಪೂವಿತ ಬೆಡ್ ರೂಮ್‌ನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಳು.

ಆಟದಲ್ಲಿ ಮೈಮರೆತಿದ್ದ ಮಣಿಕಂದನ್‌ಗೆ ಸುಮಾರು 1 ಗಂಟೆ ಬಳಿಕ ಮಗ ಕಾಣಿಸದಿರುವುದು ಗಮನಕ್ಕೆ ಬಂದಿದೆ. ಮನೆ ಸುತ್ತಲೂ ಆತನಿಗಾಗಿ ಹುಡುಕಾಟ ನಡೆಸಿದ ತಂದೆಗೆ ನೆಲಮಟ್ಟದಲ್ಲಿದ್ದ ತೆರೆದ ನೀರಿನ ಟ್ಯಾಂಕ್‌ನಲ್ಲಿ ಮಗನ ಶವ ತೇಲುತ್ತಿರುವುದು ಕಾಣಿಸಿದೆ. ಇದರಿಂದ ಆಘಾತಕ್ಕೊಳಗಾದ ಮಣಿಕಂದನ್ ದುಃಖ ವ್ಯಕ್ತಪಡಿಸದೆ, ಮಗಳನ್ನು ಕರೆದು ಟೆರೆಸ್ ಮೇಲೆ ಹೋಗು. ನಾನು ಅವಿತುಕೊಂಡು ಸಂಖ್ಯೆ ಎಣಿಸುತ್ತೇನೆ ಎಂದಿದ್ದಾನೆ. ಮೇಲಕ್ಕೆ ಹೋದ ಮಗು ಅಪ್ಪನ ಧ್ವನಿ ಕೇಳದೆ ಕೆಳಕ್ಕಿಳಿದು ಬಂದು ಆತನಿಗಾಗಿ ಹುಡುಕಾಡಿದ್ದಾಳೆ. ಆದರೆ ಕೋಣೆಯೊಂದರಲ್ಲಿ ಒಳಗಡೆಯಿಂದ ಚಿಲಕ ಹಾಕಿರುವುದು ಆಕೆಯ ಗಮನಕ್ಕೆ ಬಂದಿದೆ. ತಕ್ಷಣ ಆಕೆ ತಾಯಿಯನ್ನು ಎಬ್ಬಿಸಿದ್ದಾಳೆ. ತಾಯಿ ಪೂವಿತಾ ಬಾಗಿಲು ತೆಗೆಯಲಾಗದೆ ಕಿಟಕಿಯಿಂದ ನೋಡಿದಾಗ ಪತಿ ನೇಣಿನ ಕುಣಿಕೆಯಲ್ಲಿ ತೂಗುತ್ತಿರುವುದು ಕಾಣಿಸಿದೆ. ತಕ್ಷಣ ಆಕೆ ನೆರೆಹೊರೆಯವರನ್ನು ಕರೆದಿದ್ದಾಳೆ.

ಬಳಿಕ ಮಗುವಿಗಾಗಿ ಹುಡುಕಾಟ ನಡೆಸಿದ್ದು, ಆತ ಕೂಡ ನೀರಿನ ಟ್ಯಾಂಕ್‌ಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ದಂಪತಿಯದು 6 ವರ್ಷಗಳ ದಾಂಪತ್ಯವಾಗಿದ್ದು ಒಂದೇ ಸಲ ಪತಿ ಮತ್ತು ಮಗುವನ್ನು ಕಳೆದುಕೊಂಡಿರುವ ಪೂವಿತಾ ರೋದನ ಎಂಥ ಕಲ್ಲು ಹೃದಯವನ್ನು ಕರಗಿಸುವಂತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ