ಆ್ಯಪ್ನಗರ

ಗೆಳತಿಯ ಗ್ಯಾಂಗ್‌ರೇಪ್‌ ಬಲವಂತ ವೀಕ್ಷಣೆ, 19ರ ಯುವಕ ಆತ್ಮಹತ್ಯೆ

ಛತ್ತೀಸ್‌ಗಢದ ಕೋರ್ಬಾದಲ್ಲಿ ನಡೆದಿದ್ದ 19 ವರ್ಷದ ಬಾಲಕನ ಆತ್ಮಹತ್ಯೆ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದೆ. ಹುಡುಗನ ಆತ್ಮಹತ್ಯೆಗೆ ಕಾರಣ ಹುಡುಕುತ್ತಿದ್ದ ಪೊಲೀಸರಿಗೆ ಹಾಗೂ ಪೋಷಕರಿಗೆ ಈಗ ನಿಜಾಂಶ ಬಯಲಾಗಿದೆ.

TIMESOFINDIA.COM 14 Sep 2018, 11:57 am
ರಾಯ್‌ಪುರ: ಛತ್ತೀಸ್‌ಗಢದ ಕೋರ್ಬಾದಲ್ಲಿ ನಡೆದಿದ್ದ 19 ವರ್ಷದ ಬಾಲಕನ ಆತ್ಮಹತ್ಯೆ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದೆ. ಹುಡುಗನ ಆತ್ಮಹತ್ಯೆಗೆ ಕಾರಣ ಹುಡುಕುತ್ತಿದ್ದ ಪೊಲೀಸರಿಗೆ ಹಾಗೂ ಪೋಷಕರಿಗೆ ಈಗ ನಿಜಾಂಶ ಬಯಲಾಗಿದೆ.
Vijaya Karnataka Web youth suicide


ಕೋರ್ಬಾ ಪೊಲೀಸ್‌ ಠಾಣೆಗೆ ಬಂದ ಅಪ್ರಾಪ್ತ ವಯಸ್ಸಿನ ಹುಡುಗಿಯೊಬ್ಬಳು ಆತ್ಮಹತ್ಯೆ ಪ್ರಕರಣದ ರಹಸ್ಯವನ್ನು ಬಿಚ್ಚಿಟ್ಟಿದ್ದಾಳೆ. ತಾನು ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದೆ. ಆ ಕೃತ್ಯವನ್ನು ನೋಡಲು ಹುಡುಗನನ್ನು ಬಲವಂತವಾಗಿ ಕೂರಿಸಲಾಗಿತ್ತು. ಹೀಗಾಗಿ, ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಬಾಲಕಿ ತನಗಾದ ಅತ್ಯಾಚಾರದ ಕುರಿತು ಹಾಗೂ 19 ವರ್ಷದ ಹುಡುಗನ ಸಾವಿನ ಕಾರಣವನ್ನು ಬಹಿರಂಗಪಡಿಸಿದ್ದಾಳೆ. ಇನ್ನು, ಸಂತ್ರಸ್ಥ ಬಾಲಕಿಯ ಹೇಳಿಕೆ ಬಳಿಕ ತನಿಖೆ ನಡೆಸಿದ ಪೊಲೀಸರು, ಎರಡು ಪ್ರಕರಣಗಳಿಗೆ ಕಾರಣವಾದ ಈಶ್ವರ್ ದಾಸ್‌ ಹಾಗೂ ಖೇಮ್‌ ಕನ್ವರ್‌ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ ಕೇಸ್‌ ದಾಖಲಿಸಿಕೊಂಡಿದ್ದಾರೆ.

ಸೆಪ್ಟೆಂಬರ್‌ 1 ರಂದು ಸಂಜೆ ಮಾರ್ಕೆಟ್‌ನಿಂದ ಮನೆಗೆ ಹೋಗುತ್ತಿದ್ದ ಸಂತ್ರಸ್ಥ ಬಾಲಕಿಗೆ 19 ವರ್ಷದ ಮೃತ ಬಾಲಕ ಎದುರಾಗಿದ್ದಾನೆ. ಅಲ್ಲದೆ, ರಸ್ತೆ ಖಾಲಿ ಇದ್ದ ಕಾರಣದಿಂದಾಗಿ ಬಾಲಕಿಯನ್ನು ತಾನು ಮನೆಗೆ ಬಿಡುತ್ತೇನೆ ಎಂದು ಆಕೆಗೆ ಹೇಳಿದ್ದ ಎಂದು ಕಟ್‌ಘೋರಾದ ಪೊಲೀಸ್‌ ಅಧಿಕಾರಿ ಸಂದೀಪ್ ಮಿತ್ತಲ್ ಮಾಹಿತಿ ನೀಡಿದ್ದಾರೆ. ಅಲ್ಲದೆ, ಅದೇ ವೇಳೆ ಬೈಕ್‌ನಲ್ಲಿ ಹೋಗುತ್ತಿದ್ದ ದಾಸ್‌ ಹಾಗೂ ಕನ್ವರ್ ಬಾಲಕ - ಬಾಲಕಿಯನ್ನು ನೋಡಿ ಇಬ್ಬರನ್ನು ಕೆಟ್ಟದಾಗಿ ಬೈದಿದ್ದಾರೆ.

ಬಳಿಕ, ಬಾಲಕನನ್ನು ಥಳಿಸಿದ ಆರೋಪಿಗಳು ಆತನ ಬಳಿಯಿದ್ದ ಮೊಬೈಲ್ ಫೋನ್‌ ಅನ್ನು ಕಿತ್ತುಕೊಂಡಿದ್ದಾರೆ. ಆ ವೇಳೆ, ಬಾಲಕಿ ತನ್ನ ಗ್ರಾಮಕ್ಕೆ ಓಡಿ ಹೋಗಲು ಯತ್ನಿಸಿದ್ದು, ಅವಳನ್ನು ಹಿಂಬಾಲಿಸಿದ ಇಬ್ಬರು ಆರೋಪಿಗಳು ರಕ್ತದ ಮಡುವಿನಲ್ಲಿದ್ದ ಬಾಲಕನ ಬಳಿಗೆ ವಾಪಸ್‌ ಕರೆತಂದಿದ್ದಾರೆ. ನಂತರ, ಇಬ್ಬರು ಆರೋಪಿಗಳು ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಅಲ್ಲದೆ, ಒಬ್ಬ ಆರೋಪಿ ಅತ್ಯಾಚಾರ ನಡೆಸುವ ವೇಳೆ ಮತ್ತೊಬ್ಬ ಆರೋಪಿ ಬಾಲಕನಿಗೆ ಸತತವಾಗಿ ಹೊಡೆಯುತ್ತಿದ್ದ. ಜತೆಗೆ, ಅತ್ಯಾಚಾರದ ಕೃತ್ಯವನ್ನು ನೋಡುವಂತೆ ಒತ್ತಾಯಿಸಿದ್ದ ಎಂದು ಪೊಲೀಸ್ ಅಧಿಕಾರಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ