ಆ್ಯಪ್ನಗರ

FBನಲ್ಲಿ ಗುಡ್‌ಬೈ ಹೇಳಿ ವಿದ್ಯಾರ್ಥಿ ನೇಣಿಗೆ ಶರಣು

ಹನ್ನೊಂದನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ಸಂಪ್ರೀತ್‌ ಬ್ಯಾನರ್ಜಿ ಬುಧವಾರ ರಾತ್ರಿ ಫೇಸ್‌ಬುಕ್‌ನಲ್ಲಿ ಗುಡ್‌ಬೈ ಹೇಳಿದಾಗ ಆತ ಈ ಲೋಕಕ್ಕೆ ಗುಡ್ ಬೈ ಹೇಳಿದ್ದಾನೆ ಎಂದು ಗೊತ್ತಾಗಿದ್ದು ಗುರುವಾರ ಬೆಳಗ್ಗೆ. ತನ್ನ ಬೆಡ್‌ರೂಂನಲ್ಲಿ ನೇಣಿಗೆ ಶರಣಾಗಿದ್ದಾನೆ.

Vijaya Karnataka Web 20 Jan 2017, 2:27 pm
ಕೋಲ್ಕೊತ: ಹನ್ನೊಂದನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ಸಂಪ್ರೀತ್‌ ಬ್ಯಾನರ್ಜಿ ಬುಧವಾರ ರಾತ್ರಿ ಫೇಸ್‌ಬುಕ್‌ನಲ್ಲಿ ಗುಡ್‌ಬೈ ಹೇಳಿದಾಗ ಆತ ಈ ಲೋಕಕ್ಕೆ ಗುಡ್ ಬೈ ಹೇಳಿದ್ದಾನೆ ಎಂದು ಗೊತ್ತಾಗಿದ್ದು ಮಾತ್ರ ಗುರುವಾರ ಬೆಳಗ್ಗೆ . ತನ್ನ ಬೆಡ್‌ರೂಂನಲ್ಲಿ ನೇಣಿಗೆ ಶರಣಾಗಿದ್ದಾನೆ. ಆತ್ಮಹತ್ಯೆ ಕುರಿತು ಯಾವುದೇ ಡೆತ್‌ನೋಟ್‌ ಬರೆದಿಟ್ಟಿಲ್ಲ. ಆದರೂ ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಕಡಿಮೆ ಅಂಕಗಳಿಸಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಸಂಶಯಿಸಲಾಗಿದೆ.
Vijaya Karnataka Web boy posts bye on facebook found hanging
FBನಲ್ಲಿ ಗುಡ್‌ಬೈ ಹೇಳಿ ವಿದ್ಯಾರ್ಥಿ ನೇಣಿಗೆ ಶರಣು


ಮಗ ಉತ್ತಮ ಅಂಕಗಳಿಸಬೇಕು, ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನಕೊಡಬೇಕೆಂದು ಬಯಸಿದ್ದ ಸಂಪ್ರೀತ್ ಪೋಷಕರು ಮಗನ ಸಾವಿಗೆ ಶಿಕ್ಷಕರೇ ಕಾರಣ ಎಂದು ಹೇಳುತ್ತಿದ್ದಾರೆ. ಅವನು ಕಡಿಮೆ ಅಂಕಗಳಿಸಿದ್ದಕ್ಕೆ ಟೀಚರ್ ಇತರ ಮಕ್ಕಳ ಮುಂದೆ ಬಯ್ಯುತ್ತಿದ್ದರು. ಇದರಿಂದ ಮನನೊಂದು ಮಗ ಆತ್ಮಹತ್ಯೆ ಮಾಡಿದ್ದಾನೆ ಎಂದು ಆರೋಪಿಸಿದರು.

ಅಕೌಂಟೆನ್ಸಿ ಟೀಚರ್ ಕಡಿಮೆ ಅಂಕ ಗಳಿಸಿದ್ದಕ್ಕೆ ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ್ದರು. ಅದು ಸಹ ಶಿಕ್ಷಣ ಶಾಲೆಯಾಗಿದ್ದು ಹುಡುಗಿಯರ ಮುಂದೆ ಆ ರೀತಿ ಮಾಡಿಸಿದ್ದಕ್ಕೆ ಅವನಿಗೆ ತುಂಬಾ ಅವಮಾನವಾಗಿತ್ತು, ಆದ್ದರಿಂದ ಬುಧವಾರ ಮತ್ತು ಶುಕ್ರವಾರ ಆ ಟೀಚರ್ ಕ್ಲಾಸ್‌ ಇರುವ ದಿನ ಶಾಲೆಗೇ ಹೋಗುತ್ತಿರಲಿಲ್ಲ ಎಂದು ಮೃತನ ತಾಯಿ ಅಪರ್ಣ ಆರೋಪಿಸಿದ್ದಾರೆ.

ಸಂಪ್ರೀತ್ ವಾಣಿಜ್ಯ ವಿದ್ಯಾರ್ಥಿಯಾಗಿದ್ದು ಕೆಲವು ದಿನಗಳ ಹಿಂದೆ ನಡೆದ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ್ದ. ಇವರ ಸ್ನೇಹಿತರು ಮತ್ತು ಇವನ ಉತ್ತರ ಒಂದೇ ರೀತಿಯಿದ್ದರೂ ಈತನಿಗೆ ಮಾತ್ರ ತುಂಬಾ ಕಡಿಮೆ ಅಂಕ ನೀಡಲಾಗಿತ್ತು. ಅವರಿಗೆ ಜಾಸ್ತಿ ಕೊಟ್ಟು ನನಗೆ ಏಕೆ ಕಡಿಮೆ ಕೊಟ್ಟಿರಿ ಎಂದು ಕೇಳಿದ್ದಕ್ಕೆ ಹೊಡೆದಿದ್ದರು ಎನ್ನಲಾಗಿದೆ.

ಗುರುವಾರ ಬೆಳಗ್ಗೆ ಸಂಪ್ರೀತ್‌ನನ್ನು ಎಬ್ಬಿಸಲು ಅಪರ್ಣರವರು ಹೋದಾಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ