ಆ್ಯಪ್ನಗರ

ಮನಃಪರಿವರ್ತನಾ ಕೇಂದ್ರದಲ್ಲಿದ್ದ ಬಾಲಕ ಉತ್ತಮ ದರ್ಜೆಯಲ್ಲಿ ಪಾಸ್‌

ತಾಯಿ ಹಾಗೂ ತಂಗಿಯನ್ನು ಹತ್ಯೆ ಮಾಡಿ, ಮನಃಪರಿವರ್ತನಾ ಕೇಂದ್ರ ಸೇರಿದ್ದ ಬಾಲಕ ಸಿಬಿಎಸ್‌ಸಿ 10ನೇ ತರಗತಿ ಪರೀಕ್ಷೆಯನ್ನು ಉತ್ತಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾನೆ.

TIMESOFINDIA.COM 7 Jul 2018, 5:52 pm
ನೋಯ್ಡಾ: ತಾಯಿ ಹಾಗೂ ತಂಗಿಯನ್ನು ಹತ್ಯೆ ಮಾಡಿ, ಮನಃಪರಿವರ್ತನಾ ಕೇಂದ್ರ ಸೇರಿದ್ದ ಬಾಲಕ ಸಿಬಿಎಸ್‌ಸಿ 10ನೇ ತರಗತಿ ಪರೀಕ್ಷೆಯನ್ನು ಉತ್ತಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾನೆ. ಉತ್ತರ ಪ್ರದೇಶ ಸರಕಾರದಿಂದ 25 ಸಾವಿರ ರೂ. ಬಹುಮಾನವನ್ನೂ ಪಡೆದುಕೊಂಡಿದ್ದಾನೆ.
Vijaya Karnataka Web home


ಕಲಿಕೆಯಲ್ಲಿ ಹಿಂದಿದ್ದ ಬಾಲಕನ ಮೇಲೆ ತಾಯಿ ದಿನ ನಿತ್ಯ ರೇಗಾಡುತ್ತಿದ್ದಳು. ಒಂದು ದಿನ ರಾತ್ರಿ ತಾಯಿ ಮಲಗಿದ್ದ ವೇಳೆ, ಕ್ರಿಕೆಟ್‌ ಬ್ಯಾಟ್‌ ಹಾಗೂ ಪಿಜಾ ಕಟರ್‌ನಿಂದ ತಾಯಿ ಹಾಗೂ ಸಹೋದರಿ ಮೇಲೆ ದಾಳಿ ಮಾಡಿ ಹತ್ಯೆ ಮಾಡಿದ್ದ. ಇದೀಗ ಬಾಲಕ ಒಟ್ಟಾರೆ 500 ಅಂಕಗಳಲ್ಲಿ 255 ಅಂಕ ಗಳಿಸಿದ್ದು, ಹಿಂದಿ (72) ಅಂಕ ಗಳಿಸುವ ಮೂಲಕ ಕೇಂದ್ರದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಐಟಿ (50), ಆಂಗ್ಲ ಭಾಷೆಯಲ್ಲಿ 44 ವಿಜ್ಞಾನದಲ್ಲಿ 33 ಅಂಕ ಗಳಿಸುವ ಮೂಲಕ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದಾನೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಮನಃ ಪರಿವರ್ತನಾ ಕೇಂದ್ರಗಳಲ್ಲಿನ ಬಾಲಕರು 10ನೇ ಹಾಗೂ 12ನೇ ತರಗತಿಯಲ್ಲಿ ಅತ್ಯುತ್ತಮ ದರ್ಜೆಯಲ್ಲಿ ಉತ್ತೀರ್ಣರಾದರೆ 51 ಸಾವಿರ ಹಾಗೂ ಉತ್ತಮ ದರ್ಜೆಯಲ್ಲಿ ಪಾಸಾದರೆ 25 ಸಾವಿರ ರೂ.ಗಳನ್ನು ಬಹುಮಾನ ರೂಪದಲ್ಲಿ ನೀಡುತ್ತದೆ. ಈ ಬಾರಿ ವಿವಿಧ ಕೇಂದ್ರಗಳಲ್ಲಿ ಸುಮಾರು 50 ಮಕ್ಕಳು ಉತ್ತೀರ್ಣರಾಗಿದ್ದಾರೆ.

ಬಾಲನ್ಯಾಯ ಮಂಡಳಿ (ಜುವೆನೈಲ್ ಜಸ್ಟೀಸ್ ಬೋರ್ಡ್‌) ಸದಸ್ಯ ಹಾಗೂ ವಕೀಲ ಅನೀತ್‌ ಬಘೇಲ್‌, ಇಬ್ಬರು ಮಕ್ಕಳು ಪರೀಕ್ಷೆ ಬರೆದಿದ್ದರು. ಈ ಪೈಕಿ ಒಬ್ಬ 12ನೇ ತರಗತಿ ಪರೀಕ್ಷೆ ಬರೆದಿದ್ದು, ಅತ್ಯುತ್ತಮ ದರ್ಜೆಯಲ್ಲಿ ಪಾಸಾಗಿದ್ದಾನೆ ಎಂದು ಹೇಳಿದರು.

2017ರ ಡಿ.6 ರಂದು ತಾಯಿ ಹಾಗೂ ಸಹೋದರಿಯನ್ನು ಹತ್ಯೆ ಮಾಡಿದ ಬಾಲಕ, ಮನೆಯಲ್ಲಿ 1.5 ಲಕ್ಷ ರೂ. ನಗದು ಹಣವನ್ನು ತೆಗೆದುಕೊಂಡು ಹೊಸದಿಲ್ಲಿಗೆ ಪರಾರಿಯಾಗಿದ್ದ. ನಾಲ್ಕು ದಿನ ಬಳಿಕ ತನ್ನ ತಂದೆಗೆ ಫೋನ್‌ ಮಾಡಿದ ಬಾಲಕನನ್ನು ಪೊಲೀಸರು ಪತ್ತೆ ಹಚ್ಚಿ, ನೋಯ್ಡಾಗೆ ಕರೆ ತಂದಿದ್ದಾರೆ.

ಬಾಲಕನಿಗೆ ತನ್ನ ತಪ್ಪಿನ ಅರಿವಾಗಿದ್ದು, ಕ್ಷಮೆಯಾಚಿಸಿದ್ದಾನೆ. ಕೌನ್ಸಲಿಂಗ್‌ ಮೂಲಕ ಅವನಿಗೆ ಹೆಚ್ಚಿ ತಿಳುವಳಿಕೆ ನೀಡಿ, ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿತ್ತು. ನೋಯ್ಡಾದ ಮನಃ ಪರಿವರ್ತನಾ ಕೇಂದ್ರದಲ್ಲಿ 140 ಮಕ್ಕಳು ಇದ್ದಾರೆ ಎಂದು ಬಘೇಲ್‌ ತಿಳಿಸಿದ್ದಾರೆ. ತನ್ನ ಸಾಧನೆ ಕುರಿತು ಮಾತನಾಡಲು ಬಾಲಕ ನಿರಾಕರಿಸಿದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ