ಆ್ಯಪ್ನಗರ

ಚೀನಾ ಗಡಿಯಲ್ಲಿ ಬ್ರಹ್ಮೋಸ್ ಕ್ಷಿಪಣಿ ನಿಯೋಜನೆ

ಚೀನಾದ ತಂಟೆಕೋರತನಕ್ಕೆ ಸರಿಯಾಗಿ ಮದ್ದು ಅರೆಯಲು ನಿರ್ಧರಿಸಿರುವ ಭಾರತ, ಪೂರ್ವಗಡಿಯಲ್ಲಿ ಸುಧಾರಿತ ಬ್ರಹ್ಮೋಸ್ ಕ್ಷಿಪಣಿ ಪಡೆ ನಿಯೋಜಿಸಲು ನಿರ್ಧರಿಸಿದೆ.

ಏಜೆನ್ಸೀಸ್ 4 Aug 2016, 4:00 am
ಹೊಸದಿಲ್ಲಿ: ಚೀನಾದ ತಂಟೆಕೋರತನಕ್ಕೆ ಸರಿಯಾಗಿ ಮದ್ದು ಅರೆಯಲು ನಿರ್ಧರಿಸಿರುವ ಭಾರತ, ಪೂರ್ವಗಡಿಯಲ್ಲಿ ಸುಧಾರಿತ ಬ್ರಹ್ಮೋಸ್ ಕ್ಷಿಪಣಿ ಪಡೆ ನಿಯೋಜಿಸಲು ನಿರ್ಧರಿಸಿದೆ.
Vijaya Karnataka Web brahmos to be deployed along indo china border
ಚೀನಾ ಗಡಿಯಲ್ಲಿ ಬ್ರಹ್ಮೋಸ್ ಕ್ಷಿಪಣಿ ನಿಯೋಜನೆ


ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಭದ್ರತೆ ಮೇಲಿನ ಸಂಪುಟ ಸಮಿತಿ ಈ ನಿರ್ಧಾರ ಕೈಗೊಂಡಿದೆ. ಚೀನಾದ ಗಡಿಯಲ್ಲಿ ಇತ್ತೀಚೆಗಷ್ಟೇ ಯುದ್ಧ ಟ್ಯಾಂಕ್‌ಗಳನ್ನು ನಿಯೋಜಿಸಿದ್ದ ಭಾರತ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅತ್ಯಂತ ಆಧುನಿಕ ತಂತ್ರಜ್ಞಾನ ಹೊಂದಿರುವ 290 ಕಿ.ಮೀ.ದೂರದ ಗುರಿಯನ್ನು ಪುಡಿಗುಟ್ಟಬಲ್ಲ ಬ್ರಹ್ಮೋಸ್ ಕ್ಷಿಪಣಿ ದಳ ನಿಯೋಜನೆ ನಡೆಸುತ್ತಿದೆ.

ಎಷ್ಟು, ಏನಿದರ ವಿಶೇಷತೆ?

ಆರಂಭದಲ್ಲಿ ಅತ್ಯಂತ ಸುಧಾರಿತ ಮಾದರಿಯ 100 ಕ್ಷಿಪಣಿಗಳನ್ನು 5 ಉಡಾವಣೆ ವಾಹನ, ಅದಕ್ಕೆ ಸಂಬಂಧಿಸಿದ್ದ ಟ್ರ್ಯಾಕಿಂಗ್ ಮತ್ತು ರಾಡಾರ್ ವ್ಯವಸ್ಥೆಗಳೊಂದಿಗೆ ನಿಯೋಜಿಸಲಾಗುತ್ತದೆ. ಇದಕ್ಕಾಗಿಯೇ ಹೊಸ ಕ್ಷಿಪಣಿ ದಳವನ್ನು ರಚಿಸಲಾಗುತ್ತದೆ. ಇದಕ್ಕಾಗಿ 4,300 ಕೋಟಿ ರೂ.ಗಳನ್ನು ವ್ಯಯಿಸಲಾಗುತ್ತಿದೆ.

ಭೂ ಸೇನೆ ಮತ್ತು ನೌಕಾಪಡೆಯಲ್ಲಿ ಈಗಾಗಲೇ ಬ್ರಹ್ಮೋಸ್ ಕ್ಷಿಪಣಿಗಳನ್ನು ನಿಯೋಜಿಸಲಾಗಿದೆ. ಸದ್ಯ ಭಾರತೀಯ ಸೇನೆಯಲ್ಲಿ ಬ್ರಹ್ಮೋಸ್ ಕ್ಷಿಪಣಿಯ ಮೂರು ತುಕಡಿಗಳು ಕಾರ‌್ಯನಿರ್ವಹಿಸುತ್ತಿದ್ದು, ಇದು ನಾಲ್ಕನೇ ತುಕಡಿಯಾಗಿದೆ.

ಕ್ಷಿಪಣಿಯ ವಿಶೇಷತೆ ಏನು?

ಬ್ರಹ್ಮೋಸ್ ಕ್ಷಿಪಣಿಯ ಅತ್ಯಂತ ಸುಧಾರಿತ ಆವೃತ್ತಿ ಇದಾಗಿದ್ದು, ಈ ಕ್ಷಿಪಣಿಗಳು ಶಬ್ಧಕ್ಕಿಂತ ಮೂರು ಪಟ್ಟು ವೇಗ (ಮ್ಯಾಚ್-2.8)ಹೊಂದಿವೆ. ಭೂಮಿಗೆ 75 ಡಿಗ್ರಿ ಸಮಾನಾಂತರದಲ್ಲಿ ಸಾಗಿ ವೈರಿ ನೆಲೆಗೆ ಅಪ್ಪಳಿಸುವ ಸಾಮರ್ಥ್ಯ ಈ ಕ್ಷಿಪಣಿಗಳಿಗೆ. ಅತೀ ಕೆಳಮಟ್ಟದಲ್ಲಿ ಹಾರಾಟ ನಡೆಸುವುದರಿಂದ ಈ ಕ್ಷಿಪಣಿಗಳು ರಾಡಾರ್ ಅಥವಾ ಕ್ಷಿಪಣಿ ರಕ್ಷಣಾ ವ್ಯವಸ್ಥೆಗೆ ನಿಲುಕಲಾರವು.

ಏಕೆ ಈ ಕ್ರಮ

ನೆರೆಯ ಚೀನಾ ಇತ್ತೀಚಿನ ದಿನಗಳಲ್ಲಿ ಗಡಿ ತಂಟೆ ಹೆಚ್ಚಿಸಿದೆ. ಅರುಣಾಚಲ ಪ್ರದೇಶ, ಲಡಾಕ್ ಭಾಗಗಳಲ್ಲಿ ಗಡಿ ಅತಿಕ್ರಮಣ ನಡೆಸುತ್ತಿದ್ದ ಚೀನಾ ಸೈನಿಕರು ಈಗ ಉತ್ತರಾಖಂಡ ರಾಜ್ಯಕ್ಕೂ ನುಸುಳಲು ಆರಂಭಿಸಿದ್ದಾರೆ. ದಕ್ಷಿಣ ಚೀನಾ ಸಮುದ್ರದ ಹಕ್ಕಿನ ವಿವಾದ ಭುಗಿಲೆದ್ದ ಬಳಿಕವಂತೂ ಗಡಿ ತಂಟೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಚೀನಾದ ಯಾವುದೇ ದುಸ್ಸಾಹಸಕ್ಕೆ ಸರಿಯಾಗಿ ಮದ್ದು ಅರೆಯುವ ಉದ್ದೇಶದಿಂದ ಗಡಿ ಭದ್ರತಾ ವ್ಯವಸ್ಥೆಯನ್ನು ವ್ಯಾಪಕವಾಗಿ ಹೆಚ್ಚಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ