ಆ್ಯಪ್ನಗರ

ಬೆಂಗಳೂರು ಬಾಲಕನ ಅಂಗಾಂಗ ನ್ಯೂಯಾರ್ಕ್‌ನ ಎಂಟು ಮಂದಿಗೆ

ಮಿದುಳು ನಿಷ್ಕ್ರಿಯಗೊಂಡ ಬೆಂಗಳೂರಿನ ಯುವಕನ ಅಂಗಾಂಗಗಳನ್ನು ನ್ಯೂಯಾರ್ಕ್‌ನ ಎಂಟು ಮಂದಿಗೆ ಜೋಡಿಸಲಾಗಿದ್ದು, ಆ ಮೂಲಕ ಅವರೆಲ್ಲ ಹೊಸ ಜೀವನ ಪಡೆದಿದ್ದಾರೆ.

ವಿಕ ಸುದ್ದಿಲೋಕ 9 Mar 2016, 3:28 pm
ನ್ಯೂಯಾರ್ಕ್: ಮಿದುಳು ನಿಷ್ಕ್ರಿಯಗೊಂಡ ಬೆಂಗಳೂರಿನ ಯುವಕನ ಅಂಗಾಂಗಗಳನ್ನು ನ್ಯೂಯಾರ್ಕ್‌ನ ಎಂಟು ಮಂದಿಗೆ ಜೋಡಿಸಲಾಗಿದ್ದು, ಆ ಮೂಲಕ ಅವರೆಲ್ಲ ಹೊಸ ಜೀವನ ಪಡೆದಿದ್ದಾರೆ.
Vijaya Karnataka Web brain dead bluru youth lives on in 8 in new york
ಬೆಂಗಳೂರು ಬಾಲಕನ ಅಂಗಾಂಗ ನ್ಯೂಯಾರ್ಕ್‌ನ ಎಂಟು ಮಂದಿಗೆ


ರಾಜೀವ್ ನ್ಯೂಯಾರ್ಕ್ ಯುನಿವರ್ಸಿಟಿಯಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು. ಶ್ವಾಸಕೋಶದ ಸೋಂಕಿಗೆ ಒಳಗಾಗಿ ಫೆ.21ರಂದು ಬ್ರೂಕ್ಲಿನ್ ಸೆಂಟರ್ ಆಸ್ಪತ್ರೆಗೆ ದಾಖಲಾಗಿದ್ದ 24 ವರ್ಷದ ರಾಜೀವ್ ನಾಯ್ಡು ಭಾನುವಾರ ಮೃತಪಟ್ಟಿದ್ದರು. ಕುಟುಂಬ ಸದಸ್ಯರು ಅವರ ಕಣ್ಣು, ಹೃದಯ,ಕಿಡ್ನಿ, ಅಸ್ಥಿಮಜ್ಜೆ , ಯಕೃತ್ ಸೇರಿದಂತೆ ಅಂಗಾಂಗ ದಾನ ಮಾಡಲು ನಿರ್ಧರಿಸಿದರು.

ಗುರುವಾರ ಮೃತದೇಹವನ್ನು ಬೆಂಗಳೂರಿಗೆ ತರಲಾಗುವುದು, ಬೊಮ್ಮಸಂದ್ರದ ವಿದ್ಯಾನಗರದಲ್ಲಿ ಶುಕ್ರವಾರ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ರಾಜೀವ್ ಅವರ ಸೋದರಿ ಕೃತಿಕಾ ಪುರುಷೋತ್ತಮ್ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ