ಆ್ಯಪ್ನಗರ

ಅದ್ದೂರಿಯಾಗಿ ನಡೆಯಿತು ಹಿಂದೂ ಸಂಪ್ರದಾಯದಂತೆ ಮಂಗಳಮುಖಿ ಮದುವೆ !

ಒಡಿಶಾದ ಭುವನೇಶ್ವರದಲ್ಲಿ ಮಂಗಳಮುಖಿಯೊಬ್ಬರು ಹಿಂದೂ ಪದ್ದತಿಯಂತೆ ಮದುವೆಯಾಗಿ ಸುದ್ದಿಯಾಗಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 27 Jan 2017, 5:13 pm
ಭುವನೇಶ್ವರ್‌: ಈಗಾಗಲೇ ದೇಶದಲ್ಲಿ ಯಾರಿಗೂ ತಿಳಿಯದಂತೆ ಯುವಕರೊಂದಿಗೆ ಗುಟ್ಟಾಗಿ ಮಂಗಳಮುಖಿಯರು ಮದುವೆಯಾಗಿರುವ ಅನೇಕ ಘಟನೆಗಳು ನಡೆದು ಹೋಗಿವೆ. ತಮ್ಮ ಸುಮುದಾಯವನ್ನೇ ಕೀಳುಮಟ್ಟದಲ್ಲಿ ಕಾಣುವ ಈ ಕಾಲಘಟ್ಟದಲ್ಲಿ, ಒಡಿಶಾದ ಭುವನೇಶ್ವರದಲ್ಲಿ ಮಂಗಳಮುಖಿಯೊಬ್ಬರು ಹಿಂದೂ ಪದ್ದತಿಯಂತೆ ಮದುವೆಯಾಗಿ ಸುದ್ದಿಯಾಗಿದ್ದಾರೆ.
Vijaya Karnataka Web breaking stereotypes in a first eunuch ties knot with man in bhubaneswar
ಅದ್ದೂರಿಯಾಗಿ ನಡೆಯಿತು ಹಿಂದೂ ಸಂಪ್ರದಾಯದಂತೆ ಮಂಗಳಮುಖಿ ಮದುವೆ !


ಶುಕ್ರವಾರದಂದು ಮಂಗಳಮುಖಿ ಮೇಘನಾ ಹಾಗೂ ಬಸುದೇವ್‌ ಭುವನೇಶ್ವರದ ದೇವಾಲಯದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಇವರ ಮದುವೆಗೆ ಭುವನೇಶ್ವರದ ಪಾಲಿಕೆಯ ಮೇಯರ್‌ ಅನಂತ್‌ ನಾರಾಯಣ್‌ ಜೇನಾ ಕೂಡಾ ಆಗಮಿಸಿ ನವ ಜೋಡಿಗಳನ್ನು ಹರಸಿದ್ದಾರೆ.

ಬಳಿಕ ಎಎನ್‌ಐ ಜತೆ ಮಾತನಾಡಿರುವ ಮೇಘನಾ, " ಈ ಸಮಾಜದಲ್ಲಿ ಮಂಗಳಮುಖಿಯರನ್ನು ಕಂಡರೆ ವಿಚಿತ್ರ ಮನೋಭಾವ ಹೊಂದಿದ್ದಾರೆ, ಅಲ್ಲದೇ ನಮಗೆ ಮದುವೆ ಹಾಗೂ ತಾಯ್ತನದ ಶಕ್ತಿಯಿಲ್ಲ ಎಂಬ ಅಭಿಪ್ರಾಯ ಹೊಂದಿದ್ದಾರೆ. ಈ ಎಲ್ಲಾ ತಪ್ಪು ಕಲ್ಪನೆಯನ್ನು ನಾನು ಸುಳ್ಳು ಮಾಡುತ್ತೇನೆ, ತನ್ನನ್ನು ಮದುವೆಯಾಗುವಂತಹ ದೃಢ ನಿರ್ಧಾರ ತೆಗೆದುಕೊಂಡಿರುವ ಬಸುದೇವ್‌ ಹಾಗೂ ಕುಟುಂಬದವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದಿದ್ದಾರೆ.

ಬಸುದೇವ್‌ಗೆ ಈ ಮೊದಲೇ ಮದುವೆಯಾಗಿದ್ದು ಕೌಟುಂಬಿಕ ಕಲಹದಿಂದ ವಿಚ್ಛೇದನ ಪಡೆದಿದ್ದರು, "ಬಸುದೇವ್‌ ಕುಟುಂಬಸ್ಥರೇ ತನ್ನನ್ನು ನೋಡಿ ಮದುವೆ ಪ್ರಸ್ತಾಪ ನಡೆಸಿದ್ದಾರೆ, ಹಾಗಾಗಿ ಇದೊಂದು ಪೂರ್ವ ನಿಶ್ಚಿತ ಮದುವೆ " ಎಂದು ಮೇಘನಾ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ