ಆ್ಯಪ್ನಗರ

ಬ್ರೆಕ್ಸಿಟ್: ಭಾರತದ ಸ್ಟಾಕ್ ಮಾರುಕಟ್ಟೆಯಲ್ಲಿ ಭಾರಿ ಕುಸಿತ

ಭಾರತದ ಹೂಡಿಕೆದಾರರು ಆತಂಕಗೊಂಡಿದ್ದು, ಸ್ಟಾಕ್ ಮಾರುಕಟ್ಟೆಯಲ್ಲಿ ನಾಲ್ಕು ಲಕ್ಷ ಕೋಟಿ ಕುಸಿತ ದಾಖಲಾಗಿದೆ.

ಟೈಮ್ಸ್ ಆಫ್ ಇಂಡಿಯಾ 24 Jun 2016, 12:36 pm
ಮುಂಬಯಿ: ಯುರೋಪ್ ಒಕ್ಕೂಟದಿಂದ ಬ್ರಿಟನ್ ಹೊರ ನಡೆದ ಪರಿಣಾಮವಾಗಿ ಭಾರತದ ಸ್ಟಾಕ್‌ ಮಾರುಕಟ್ಟೆ ತಲ್ಲಣಗೊಂಡಿದೆ. ಹೂಡಿಕೆದಾರರು ಆತಂಕಗೊಂಡಿದ್ದು, ಗುರುವಾರ ದಿನದ ಕೊನೆಗೆ ಇದ್ದ 104.4 ಲಕ್ಷ ಕೋಟಿ ಹೂಡಿಕೆ ಶುಕ್ರವಾರ ಬೆಳಗ್ಗೆ ನಾಲ್ಕು ಲಕ್ಷ ಕೋಟಿ ಕುಸಿತ ದಾಖಲಾಗಿದೆ.
Vijaya Karnataka Web brexit knocks off over rs 4 trn from india stock market wealth
ಬ್ರೆಕ್ಸಿಟ್: ಭಾರತದ ಸ್ಟಾಕ್ ಮಾರುಕಟ್ಟೆಯಲ್ಲಿ ಭಾರಿ ಕುಸಿತ


ಸೆನ್ಸೆಕ್ಸ್ 26000 ಅಂಕಗಳ ಒಳಗಿದ್ದು, 950 ಪಾಯಿಂಟ್ ಕುಸಿತ ದಾಖಲಿಸಿದೆ. ಬ್ರಿಟನ್‌ನಲ್ಲಿ ಕಾರ್ಯಾಚರಿಸುವ ಭಾರತೀಯ ಕಂಪೆನಿಗಳ ಮೇಲೂ ವ್ಯತಿರಿಕ್ತ ಪರಿಣಾಮವುಂಟಾಗುವ ಸಾಧ್ಯತೆ ಇದೆ.

ಸರಕಾರದ ಕಾಳಜಿ ಇದ್ದರೂ ಸ್ಟಾಕ್ ಮಾರುಕಟ್ಟೆಯಲ್ಲಿ 1058 ಪಾಯಿಂಟ್‌ಗಳ ನಷ್ಟ ತಪ್ಪಿಸಲಾಗಲಿಲ್ಲ. ಬ್ರಿಟನ್‌ನಲ್ಲಿ ನಡೆದಿರುವ ಈ ಬೆಳವಣಿಗೆಯು ಯುರೋಪ್ ಒಕ್ಕೂಟದಲ್ಲಿ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಲಿದೆ. ಭಾರತದ ಕಂಪೆನಿಗಳು ಕೂಡ ತಮ್ಮ ನಿಲುವನ್ನು ಪುನರ್ ಪರಿಶೀಲಿಸಭೇಕಾದ ಅಗತ್ಯ ಇದೆ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯ.

ಭಾರತದ ಆರ್ಥಿಕತೆ ಸದೃಢವಾಗಿದ್ದು, ಬ್ರಿಟನ್ ಒಕ್ಕೂಟ ತೊರೆಯುವ ಮೂಲಕ ಆಗಬಹುದಾದ ಪರಿಣಾಮಗಳನ್ನು ಎದುರಿಸಲು ಸಜ್ಜಾಗಿದೆ. ಅಲ್ಲಿನ ಜನಮತ ಗಣನೆಯನ್ನು ನಾವು ಗೌರವಿಸುತ್ತೇವೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಪ್ರತಿಕ್ರಿಯಿಸಿದ್ದಾರೆ.

31 ವರ್ಷಗಳಲ್ಲೇ ಬ್ರಿಟನ್‌ನ ಕರೆನ್ಸಿ ಪೌಂಡ್ ಮೌಲ್ಯ ಡಾಲರ್ ಎದುರು ಅತಿ ಕನಿಷ್ಠ ಮಟ್ಟಕ್ಕೆ ಇಳಿದು ಅಲ್ಲಿನ ಷೇರು ಪೇಟೆಯಲ್ಲೂ ಸಂಚಲನವುಂಟಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ