ಆ್ಯಪ್ನಗರ

ಹೋಟೆಲ್‌ಗೆ ನಿಮ್ಮದೇ ಪಾತ್ರೆ ತನ್ನಿ, ಆಹಾರದಲ್ಲಿ ಡಿಸ್ಕೌಂಟ್ ಪಡೆಯಿರಿ

ಊಟದ ಪ್ಯಾಕಿಂಗ್‌ಗಾಗಿ ಪ್ಲಾಸ್ಟಿಕ್ ಡಬ್ಬಗಳನ್ನು ಬಳಸದಂತೆ ಜನರಿಗೆ ಪ್ರೇರಣೆ ನೀಡಲು ಮುಂದಾಗಿರುವ ತಮಿಳುನಾಡಿನ ಕೆಲ ಹೋಟೆಲ್‌ಗಳು ನೀವೇ ಪಾತ್ರೆ ತಂದರೆ ಆಹಾರದಲ್ಲಿ ರಿಯಾಯತಿ ನೀಡಲಾಗುವುದು ಎಂದು ಘೋಷಿಸಿವೆ.

Navbharat Times 21 Aug 2018, 1:48 pm
[ನವ್ ಭಾರತ್ ಟೈಮ್ಸ್‌ನಲ್ಲಿ 21 ಆಗಸ್ಟ್ 2018ರಂದು ಪ್ರಕಟವಾದ ಸುದ್ದಿ]
Vijaya Karnataka Web Plastic Food


ಚೆನ್ನೈ:
ಊಟದ ಪ್ಯಾಕಿಂಗ್‌ಗಾಗಿ ಪ್ಲಾಸ್ಟಿಕ್ ಡಬ್ಬಗಳನ್ನು ಬಳಸದಂತೆ ಜನರಿಗೆ ಪ್ರೇರಣೆ ನೀಡಲು ಮುಂದಾಗಿರುವ ತಮಿಳುನಾಡಿನ ಕೆಲ ಹೋಟೆಲ್‌ಗಳು ನೀವೇ ಪಾತ್ರೆ ತಂದರೆ ಆಹಾರದಲ್ಲಿ ರಿಯಾಯತಿ ನೀಡಲಾಗುವುದು ಎಂದು ಘೋಷಿಸಿವೆ.

2019, ಜನವರಿ 1 ರಿಂದ ಪ್ಲಾಸ್ಟಿಕ್ ನಿಷೇಧ ಮಾಡುವುದಾಗಿ ರಾಜ್ಯ ಸರಕಾರ ಘೋಷಿಸಿರುವ ಹಿನ್ನೆಲೆಯಲ್ಲಿ ಹೋಟೆಲ್ ಉದ್ಯೋಗಿಗಳು ಈ ವಿನೂತನ ನಡೆಯನ್ನಿಟ್ಟಿದ್ದಾರೆ.

ನಮ್ಮ ಈ ಆಫರ್ ಊಟದ ಪಾರ್ಸಲ್ ಕೊಂಡು ಹೋಗಲು ತಮ್ಮದೇ ಪಾತ್ರೆ ತರಲು ಗ್ರಾಹಕರಿಗೆ ಈ ಪ್ರೇರಣೆ ನೀಡಲಿದೆ. 10,000 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ತಮಿಳುನಾಡು ಹೋಟೆಲ್ ಅಸೋಸಿಯೇಷನ್ ಪಾತ್ರೆ ತಂದವರಿಗೆ ಈಗಾಗಲೇ ಬಿಲ್‌ನಲ್ಲಿ 5% ರಿಯಾಯತಿಯನ್ನು ಘೋಷಿಸಿದೆ, ಎಂದು ಅಸೋಸಿಯೇಷನ್ ಅಧ್ಯಕ್ಷ ಎಮ್ ರವಿ ತಿಳಿಸಿದ್ದಾರೆ.

ಹೋಟೆಲ್ ಉದ್ಯಮಿಗಳ ಈ ಪರಿಸರ ಸ್ನೇಹಿ ನಡೆ ಎಲ್ಲರಿಂದಲೂ ಶ್ಲಾಘನೆಗೆ ಪಾತ್ರವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ