ಆ್ಯಪ್ನಗರ

ಉಗ್ರ ನಿಗ್ರಹದಲ್ಲಿ ಭಾರತಕ್ಕೆ ಬ್ರಿಟನ್‌ ನೆರವು

ಉಗ್ರ ನಿಗ್ರಹ ಹೋರಾಟದಲ್ಲಿ ಸಹಕಾರ, ಮಾಹಿತಿ ವಿನಿಮಯ, ದುಷ್ಟರನ್ನು ಕೋರ್ಟ್‌ ಕಟಕಟೆಗೆ ಎಳೆದು ತರುವುದು ಸೇರಿ ಎಲ್ಲ ನೆರವು ನೀಡಲಿದೆ.

Vijaya Karnataka 8 Mar 2019, 7:14 am
ಹೊಸದಿಲ್ಲಿ: ಭಾರತ-ಪಾಕ್‌ ಬಿಕ್ಕಟ್ಟು ಉಲ್ಬಣಿಸಿರುವ ಮಧ್ಯೆಯೇ ಬ್ರಿಟನ್‌ ರಾಷ್ಟ್ರೀಯ ಭದ್ರತಾ ಸಲಹೆಗಾರ ಮಾರ್ಕ್‌ ಸೆಡ್‌ವಿಲ್‌ ಗುರುವಾರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಧೋವಲ್‌ ಅವರಿಗೆ ದೂರವಾಣಿ ಕರೆ ಮಾಡಿ ಹಲವು ವಿಚಾರಗಳ ಕುರಿತು ಚರ್ಚಿಸಿದ್ದಾರೆ.
Vijaya Karnataka Web Teror


ಪುಲ್ವಾಮಾ ದಾಳಿ ಪ್ರಸ್ತಾಪಿಸಿ ಸೆಡ್‌ವಿಲ್‌, ಇದೊಂದು ಹೇಡಿಗಳ ಕೃತ್ಯ ಎಂದು ಖಂಡಿಸಿದ್ದಾರೆ. ಉಗ್ರ ನಿಗ್ರಹದ ವಿಚಾರದಲ್ಲಿ ಭಾರತಕ್ಕೆ ಬ್ರಿಟನ್‌ ಬೆಂಬಲವಾಗಿ ನಿಲ್ಲಲಿದೆ. ಉಗ್ರ ನಿಗ್ರಹ ಹೋರಾಟದಲ್ಲಿ ಸಹಕಾರ, ಮಾಹಿತಿ ವಿನಿಮಯ, ದುಷ್ಟರನ್ನು ಕೋರ್ಟ್‌ ಕಟಕಟೆಗೆ ಎಳೆದು ತರುವುದು ಸೇರಿ ಎಲ್ಲ ನೆರವು ನೀಡಲಿದೆ ಎಂದು ಧೋವಲ್‌ ಅವರಿಗೆ ಭರವಸೆ ಕೊಟ್ಟಿದ್ದಾರೆಂದು ಮೂಲಗಳು ಹೇಳಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ