ಆ್ಯಪ್ನಗರ

ಪಾಕ್‌ಗೆ ಮಾಹಿತಿ ರವಾನಿಸಿದ ಬಿಎಸ್ಎಫ್‌ ಯೋಧನ ಬಂಧನ

ಬಂತ ಆರೋಪಿ ಮಹಾರಾಷ್ಟ್ರದ ಲಾತೂರ್‌ ಜಿಲ್ಲೆಯ ರೇನಾಪುರ ಗ್ರಾಮದವರು. ಬಿಎಸ್‌ಎಫ್‌ 29ನೇ ಬೆಟಾಲಿಯನ್‌ಗೆ ಸೇರಿದ ಇವರು ಪಂಜಾಬ್‌ನ ಫಿರೋಜ್‌ಪುರ ಸೆಕ್ಟರ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

Vijaya Karnataka 5 Nov 2018, 7:17 am
ಫಿರೋಜ್‌ಪುರ: ಸೇನೆಯ ಕುರಿತ ಸೂಕ್ಷ್ಮ ಮಾಹಿತಿಗಳನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಏಜೆಂಟ್‌ಗೆ ರವಾನಿಸುತ್ತಿದ್ದ ಆರೋಪದ ಮೇರೆಗೆ ಗಡಿ ಭದ್ರತಾ ಪಡೆ ಯೋಧ ಶೇಖ್‌ ರಿಯಾಜುದ್ದೀನ್‌ ಅವರನ್ನು ಪೊಲೀಸರು ಬಂಸಿದ್ದಾರೆ.
Vijaya Karnataka Web Arrest 23


ಬಂತ ಆರೋಪಿ ಮಹಾರಾಷ್ಟ್ರದ ಲಾತೂರ್‌ ಜಿಲ್ಲೆಯ ರೇನಾಪುರ ಗ್ರಾಮದವರು. ಬಿಎಸ್‌ಎಫ್‌ 29ನೇ ಬೆಟಾಲಿಯನ್‌ಗೆ ಸೇರಿದ ಇವರು ಪಂಜಾಬ್‌ನ ಫಿರೋಜ್‌ಪುರ ಸೆಕ್ಟರ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಭಾರತ-ಪಾಕ್‌ ಗಡಿಯಲ್ಲಿ ಅಳವಡಿಸಲಾಗಿರುವ ತಂತಿ ಬೇಲಿ ಹಾಗೂ ಕೈಗೊಳ್ಳಲಾಗುತ್ತಿರುವ ರಸ್ತೆ ನಿರ್ಮಾಣದಂತಹ ಮೂಲಸೌಕರ್ಯಗಳ ಫೋಟೊಗಳನ್ನು ಮತ್ತು ಬಿಎಸ್‌ಎಫ್‌ ಹಿರಿಯ ಅಧಿಕಾರಿಗಳ ದೂರವಾಣಿ ಸಂಖ್ಯೆಗಳನ್ನು ಕಲೆಹಾಕಿ ಆ ಮಾಹಿತಿಗಳನ್ನು ಐಎಸ್‌ಐ ಏಜೆಂಟ್‌ ಮಿರ್ಜಾ ಫೈಸಲ್‌ಗೆ ಮೊಬೈಲ್‌ ಮೂಲಕ ರವಾನಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಯಿಂದ ಎರಡು ಮೊಬೈಲ್‌ ಫೋನ್‌, ಏಳು ಸಿಮ್‌ ಕಾರ್ಡ್‌ಗಳನ್ನು ವಶಕ್ಕೆ ಪಡೆದಿದ್ದು, ಅವುಗಳನ್ನು ಜಾಲಾಡಲಾಗುತ್ತಿದೆ. ಸದ್ಯ ಅಧಿಕೃತ ರಹಸ್ಯ ಕಾಯಿದೆ, ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ