ಆ್ಯಪ್ನಗರ

ಮಹಾಮೈತ್ರಿಯಿಂದ ಬಿಎಸ್‌ಪಿ 'ಮಾಯ', ಕಾಂಗ್ರೆಸ್‌ ಜತೆ ಕೈ ಜೋಡಿಸಲ್ಲ ಎಂದ ಮಾಯಾ

ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ಎಡಪಕ್ಷಗಳು ಸಂಘಟಿಸಿದ್ದ ಮಹಾಮೈತ್ರಿಯಿಂದ ಬಿಎಸ್‌ಪಿ ದೂರ ಸರಿದಿದೆ. ಈ ಮೂಲಕ ಮೋದಿ ವಿರುದ್ಧ ಒಗ್ಗಟ್ಟಿನ ಸಮರ ಸಾರಿದ್ದ ಎಡಪಕ್ಷಗಳಲ್ಲಿ ಬಿರುಕು ಮೂಡಿದೆ.

TIMESOFINDIA.COM 3 Oct 2018, 5:02 pm
[This story originally published in times of India on oct 3, 2018]
Vijaya Karnataka Web mayavati


ಹೊಸದಿಲ್ಲಿ: ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ಎಡಪಕ್ಷಗಳು ಸಂಘಟಿಸಿದ್ದ ಮಹಾಮೈತ್ರಿಯಿಂದ ಬಿಎಸ್‌ಪಿ ದೂರ ಸರಿದಿದೆ. ಈ ಮೂಲಕ ಮೋದಿ ವಿರುದ್ಧ ಒಗ್ಗಟ್ಟಿನ ಸಮರ ಸಾರಿದ್ದ ಎಡಪಕ್ಷಗಳಲ್ಲಿ ಬಿರುಕು ಮೂಡಿದೆ.

ಉತ್ತರ ಪ್ರದೇಶ ಮಾಜಿ ಸಿಎಂ, ಬಹುಜನ ಸಮಾಜ ಪಕ್ಷದ ಮಾಯಾವತಿ, ಮಹಾಮೈತ್ರಿಯಿಂದ ಹೊರ ಬಂದಿದ್ದು, ಚುನಾವಣೆಯಲ್ಲಿ ಕಾಂಗ್ರೆಸ್‌ ಜತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲಎಂದು ಘೋಷಿಸಿದ್ದಾರೆ.


ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ವರಿಷ್ಠೆ ಸೋನಿಯಾ ಗಾಂಧಿ ಅವರು, ಬಿಎಸ್‌ಪಿ ಜತೆಗೆ ಮೈತ್ರಿ ಮಾಡುವುದಕ್ಕೆ ಯಾವುದೇ ಅಪಸ್ವರ ಎತ್ತಿಲ್ಲ. ಆದರೆ ಕೆಲ ಕಾಂಗ್ರೆಸ್‌ ನಾಯಕರು, ಬಿಎಸ್‌ಪಿ ಜತೆಗಿನ ಮೈತ್ರಿಯಲ್ಲಿ ಅಸಮಾಧಾನವಾಗಿರುವುದು ಗೊತ್ತಾಗಿದೆ. ಕಾಂಗ್ರೆಸ್‌ನಲ್ಲಿ ಇನ್ನೂ ಜಾತಿವಾದಗಳು ಜೀವಂತವಾಗಿರುವುದು ಗೊತ್ತಾಗಿದೆ. ಹೀಗಾಗಿ ಕಾಂಗ್ರೆಸ್‌ ಜತೆಗಿನ ಮೈತ್ರಿ ಬೆಂಬಲವನ್ನು ಹಿಂಪಡೆಯುತ್ತಿರುವುದಾಗಿ ಅವರು ಘೋಷಣೆ ಮಾಡಿದ್ದಾರೆ.


ಕಾಂಗ್ರೆಸ್‌ ಚುನಾವಣೆಯನ್ನು ಸ್ವತಂತ್ರವಾಗಿಯೇ ಎದುರಿಸಬಹುದು ಎಂದು ಕೊಂಡಿದೆ ಎಂದು ಅವರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ