ಆ್ಯಪ್ನಗರ

ಬುಲಂದ್‌ಶಹರ್‌ ಹಿಂಸಾಚಾರ: ಪೊಲೀಸ್‌ ಅಧಿಕಾರಿ ಹತ್ಯೆ ಸಿಸಿಟಿವಿಯಲ್ಲಿ ಸೆರೆ

ಚಿಂಗ್ರಾವತಿ ಪೊಲೀಸ್‌ ಔಟ್‌ಪೋಸ್ಟ್‌ ಬಳಿ ಇರುವ ದಿಲಾವರಿ ದೇವಿ ಕನ್ಯಾ ಪಿಜಿ ಕಾಲೇಜ್‌ನಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿ, ಡಿ.3ರಂದು ನಡೆದ ಹಿಂಸಾಚಾರದ ವೇಳೆ ಯುವಕನೊಬ್ಬ ಪೊಲೀಸ್‌ ಇನ್ಸ್‌ಪೆಕ್ಟ್ರ್‌ ಸುಬೋಧ್‌ ಕುಮಾರ್‌ ಅವರ ಬಂದೂಕು ಕಿತ್ತುಕೊಂಡು, ಅವರನ್ನೇ ಹತ್ಯೆ ಮಾಡುವ ದೃಶ್ಯ ಸೆರೆಯಾಗಿದೆ.

Vijaya Karnataka 12 Dec 2018, 5:00 am
ಲಖನೌ: ಪೊಲೀಸ್‌ ಅಧಿಕಾರಿ ಹಾಗೂ ಯುವಕನನ್ನು ಬಲಿಪಡೆದ ಉತ್ತರ ಪ್ರದೇಶದ ಬುಲಂದ್‌ಶಹರ್‌ ಹಿಂಸಾಚಾರ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ(ಎಸ್‌ಐಟಿ) ಚುರುಕುಗೊಳಿಸಿದ್ದು, ನೂರಾರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದೆ.
Vijaya Karnataka Web subhodh


ಚಿಂಗ್ರಾವತಿ ಪೊಲೀಸ್‌ ಔಟ್‌ಪೋಸ್ಟ್‌ ಬಳಿ ಇರುವ ದಿಲಾವರಿ ದೇವಿ ಕನ್ಯಾ ಪಿಜಿ ಕಾಲೇಜ್‌ನಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿ, ಡಿ.3ರಂದು ನಡೆದ ಹಿಂಸಾಚಾರದ ವೇಳೆ ಯುವಕನೊಬ್ಬ ಪೊಲೀಸ್‌ ಇನ್ಸ್‌ಪೆಕ್ಟ್ರ್‌ ಸುಬೋಧ್‌ ಕುಮಾರ್‌ ಅವರ ಬಂದೂಕು ಕಿತ್ತುಕೊಂಡು, ಅವರನ್ನೇ ಹತ್ಯೆ ಮಾಡುವ ದೃಶ್ಯ ಸೆರೆಯಾಗಿದೆ.

ಯುವಕನನ್ನು ಚಿಂಗ್ರಾವತಿ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ. ಐದು ಯುವಕರ ಗುಂಪಿನೊಂದಿಗೆ ಆತ ಸುಬೋಧ್‌ ಕುಮಾರ್‌ ಅವರನ್ನು ಸುತ್ತುವರಿದು, ಅವರ ಬಳಿಯಿದ್ದ ಸವೀರ್‍ಸ್‌ ರಿವಾಲ್ವರ್‌ ಕಸಿದು, ಅವರ ಮೇಲೆ ಗುಂಡು ಹಾರಿಸುತ್ತಾನೆ. ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಡುತ್ತಾರೆ. ಇದಕ್ಕು ಮುನ್ನ ಆತ, ಪೊಲೀಸರ ಮೇಲೆ ಕಲ್ಲು ತೂರಾಟ ಸಹ ನಡೆಸಿದ್ದ ಎನ್ನುವುದು ಇತರೆ ಸಿಸಿಟಿವಿಗಳಲ್ಲಿ ಸೆರೆಯಾಗಿದೆ.

ಗಲಭೆ ಸಂಬಂಧ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಆ ಯುವಕನ ಹೆಸರು ಉಲ್ಲೇಖವಾಗಿಲ್ಲ. ಆದರೆ ಆತ ಹಿಂಸಾಚಾರದ ನಂತರ ಕುಟುಂಬ ಸಮೇತ ನಾಪತ್ತೆಯಾಗಿದ್ದಾನೆ. ಮತ್ತೊಂದು ಕಡೆ ಹಿಂಸಾಚಾರದ ವೇಳೆ ಮೃತಪಟ್ಟ ಬಿಜೆಪಿ ಕಾರ್ಯಕರ್ತ ಸುಮಿತ್‌ ಅವರ ಮೇಲೆ ಗುಂಡು ಹಾರಿಸಿದ್ದು ಯಾರು ಎಂಬುದು ಇದುವರೆಗೂ ಪತ್ತೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಘಟನೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಈಗಾಗಲೇ ಒಂಬತ್ತು ಆರೋಪಿಗಳನ್ನು ಬಂಧಿಸಿದ್ದು, 27 ಜನರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ