ಆ್ಯಪ್ನಗರ

ಬುರಾರಿ ಪ್ರಕರಣ: ಕುಟುಂಬದ ಕೊನೆಯ ಕೊಂಡಿ ಶ್ವಾನ ಹೃದಯಾಘಾತದಿಂದ ಸಾವು

ಒಂದೇ ಮನೆಯ ಹನ್ನೊಂದು ಮಂದಿ ವಿಚಿತ್ರ ರೀತಿಯಲ್ಲಿ ಸಾವಿಗೆ ಶರಣಾದ ದಿಲ್ಲಿಯ ಬುರಾರಿ ಕುಟುಂಬದೊಂದಿಗೆ ಬಾಂಧವ್ಯ ಹೊಂದಿದ್ದ ಕೊನೆಯ ಜೀವವೂ ಕೊನೆಯುಸಿರೆಳೆದಿದೆ.

Vijaya Karnataka 24 Jul 2018, 8:21 am
ಹೊಸದಿಲ್ಲಿ: ಒಂದೇ ಮನೆಯ ಹನ್ನೊಂದು ಮಂದಿ ವಿಚಿತ್ರ ರೀತಿಯಲ್ಲಿ ಸಾವಿಗೆ ಶರಣಾದ ದಿಲ್ಲಿಯ ಬುರಾರಿ ಕುಟುಂಬದೊಂದಿಗೆ ಬಾಂಧವ್ಯ ಹೊಂದಿದ್ದ ಕೊನೆಯ ಜೀವವೂ ಕೊನೆಯುಸಿರೆಳೆದಿದೆ.
Vijaya Karnataka Web Tommy


ತನ್ನೆಲ್ಲಾ ಮಾಲೀಕರು ದಿಢೀರನೆ ಕಣ್ಮರೆಯಾಗಿದ್ದರಿಂದ ತೀವ್ರ ಆಘಾತಕ್ಕೆ ಗುರಿಯಾಗಿದ್ದ ಬುರಾರಿ ಕುಟುಂಬದ ಶ್ವಾನ 'ಟಾಮಿ' ತಾನೂ ಅದೇ ನೋವಿನಲ್ಲಿ ಮೃತಪಟ್ಟಿದೆ. ಜುಲೈ 1ರಂದು ದುರಂತ ನಡೆದ ಬಳಿಕ ದೈಹಿಕವಾಗಿ ಸೊರಗಿದ್ದ 'ಟಾಮಿ'ಯನ್ನು ಸಂಜಯ್‌ ಮಲ್ಹೋತ್ರಾ ಎಂಬ ಶ್ವಾನಪ್ರಿಯರೊಬ್ಬರು ಪೋಷಣೆ ಮಾಡುತ್ತಿದ್ದರು. ಇತ್ತೀಚೆಗೆ 'ಟಾಮಿ' ಚೇತರಿಸಿಕೊಂಡಿತ್ತು. ಅದರ ತೂಕವೂ ಹೆಚ್ಚಾಗುತ್ತಿತ್ತು.

ಎಂದಿನಂತೆ ಭಾನುವಾರ ಸಂಜೆ ವಾಯು ವಿಹಾರದಿಂದ ಹಿಂದಿರುಗಿದ ಟಾಮಿ, ಗೇಟ್‌ ಬಳಿಯೇ ಕುಸಿದು ಮೃತಪಟ್ಟಿದೆ. ಆಪ್ತರನ್ನು ಕಳೆದುಕೊಂಡ ಆಘಾತವೇ ನಾಯಿಯ ಸಾವಿಗೆ ಕಾರಣ ಎಂದು ಪ್ರಾಣಿ ಹಕ್ಕು ಹೋರಾಟಗಾರರೂ ಆಗಿರುವ ಸಂಜಯ್‌ ಹೇಳಿದ್ದಾರೆ. ಕುಟುಂಬ ಸದಸ್ಯರು ಸಾಮೂಹಿಕ ಆತ್ಮಹತ್ಯೆಗೆ ಶರಣಾಗುವ ಮೊದಲು, ಮನೆಯ ಸಾಕು ನಾಯಿಯನ್ನು ಹೊರಗೆ ಸರಪಳಿಯಿಂದ ಕಟ್ಟಿಹಾಕಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ