ಆ್ಯಪ್ನಗರ

ಸೊಳ್ಳೆಬತ್ತಿಯ ಕಿಡಿಯಿಂದ ಬೆಂಕಿ: ಮಹಿಳೆ ಬಲಿ

ಮಲಗುವ ಕೋಣೆಯಲ್ಲಿ ಸೊಳ್ಳೆ ಬತ್ತಿ ಹಚ್ಚಿ ಇಡುವಾಗ ಎಚ್ಚರವಿರಲಿ. ಮಂಚದ ಕೆಳಗೆ ಹಚ್ಚಿಟ್ಟ ಸೊಳ್ಳೆಬತ್ತಿಯ ಕಿಡಿ ಹೊದಿಕೆಗೆ ತಾಗಿ ಬೆಂಕಿ ಹೊತ್ತಿಕೊಂಡು ಮಹಿಳೆಯೊಬ್ಬರು ಮೃತಪಟ್ಟ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

Vijaya Karnataka Web 15 Oct 2018, 3:41 pm
ತಿರುಚ್ಚಿ: ರಾತ್ರಿ ಮಲಗುವಾಗ ಹಚ್ಚಿಟ್ಟ ಸೊಳ್ಳೆ ಬತ್ತಿಯಿಂದ ಬೆಂಕಿ ತಗುಲಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ತಮಿಳುನಾಡಿನ ತಿರುವೆರುಂಬೂರ್‌ನಲ್ಲಿ ನಡೆದಿದೆ.
Vijaya Karnataka Web Fire


ಮೃತಪಟ್ಟ ಮಹಿಳೆಯನ್ನು ಸರಸ್ವತಿ (75) ಎಂದು ಗುರುತಿಸಲಾಗಿದೆ. ಆಕೆ ಕಿಡ್ನಿ ಕಾಯಿಲೆಯಿಂದ ಬಳಲುತ್ತಿದ್ದು, ಕೆಲವು ವಾರಗಳಿಂದ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು. ಅವರು ಹೊದ್ದುಕೊಂಡಿದ್ದ ಹೊದಿಕೆಗೆ ಸೊಳ್ಳೆ ಬತ್ತಿ ತಗುಲಿ ಬೆಂಕಿ ಹತ್ತಿಕೊಂಡಿದೆ.

ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ಮನೆಯಿಂದ ಭಾರೀ ಹೊಗೆ ಬರುತ್ತಿರುವುದನ್ನು ಗಮನಿಸಿ ಸ್ಥಳೀಯ ನಿವಾಸಿಗಳು ಧಾವಿಸಿ ಬಂದರು. ಆದರೆ ಅಷ್ಟು ಹೊತ್ತಿಗಾಗಲೇ ಸರಸ್ವತಿ ಅವರು ಶೇ 90ರಷ್ಟು ಗಾಯಗಳಿಂದ ಸುಟ್ಟುಹೋಗಿದ್ದರು.

ಮಂಚದ ಕೆಳಗೆ ಇರಿಸಿದ್ದ ಸೊಳ್ಳೆ ಬತ್ತಿಗೆ ಹೊದಿಕೆ ತಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಪ್ರಾಥಮಿಕ ತನಿಖೆಗಳಿಂದ ಗೊತ್ತಾಗಿದೆ. ಮನೆಯ ಒಳಗಿನಿಂದ ಬಾಗಿಲಿಗೆ ಲಾಕ್ ಮಾಡಿದ್ದ ಕಾರಣ ನೆರೆಮನೆಯವರು ಬಾಗಿಲು ಒಡೆದು ಒಳಬರಬೇಕಾಯಿತು.

ತಿರುವೆರುಂಬೂರ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ