ಆ್ಯಪ್ನಗರ

ಮಗನಿಂದ ಮೊಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯ : ಬೆಂಗಳೂರಿನ ಉದ್ಯಮಿ ತಾಯಿ ದೂರು

ಶಂಕಿತ ಆರೋಪಿಯ ತಾಯಿ ಮತ್ತು ಸಹೋದರಿ ಈ ಕುರಿತು ಇಂದೋರ್‌ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. 13 ವರ್ಷದ ಪುತ್ರಿಯ ಮೇಲಾತ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾನೆ ಎಂಬುದು ಅವರ ಆರೋಪ. ಪೊಲೀಸರು ಸಂಬಂಧಿತ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

TIMESOFINDIA.COM 24 Apr 2019, 12:29 pm
ಇಂದೋರ್: ತನ್ನ ಮೊಮ್ಮಗಳ ಮೇಲೆ ಅವರ ತಂದೆ( ದೂರುದಾರರ ಮಗ) ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾನೆ ಎಂದು ಬೆಂಗಳೂರು ನಿವಾಸಿ ಉದ್ಯಮಿಯೊಬ್ಬರ ಮೇಲೆ ಅವರ ತಾಯಿಯೇ ದೂರು ನೀಡಿದ್ದಾರೆ.
Vijaya Karnataka Web CHild Crime Boy


ಶಂಕಿತ ಆರೋಪಿಯ ತಾಯಿ ಮತ್ತು ಸಹೋದರಿ ಈ ಕುರಿತು ಇಂದೋರ್‌ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. 13 ವರ್ಷದ ಪುತ್ರಿಯ ಮೇಲಾತ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾನೆ ಎಂಬುದು ಅವರ ಆರೋಪ. ಪೊಲೀಸರು ಸಂಬಂಧಿತ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ಬಳಿಕ ಅಜ್ಜಿ (ಆರೋಪಿ ತಾಯಿ) ಇಂದೋರ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆರೋಪಿ ಬೆಂಗಳೂರಿನ ತನ್ನ ನಿವಾಸದಲ್ಲಿ ತನ್ನದೇ ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಿದ್ದಾನೆ, ಎಂದು ಅವರ ಪರ ವಕೀಲರು ವಾದಿಸಿದ್ದರು. ಬಾಲಕಿ ಹೇಳಿಕೆ ಮತ್ತು ಇನ್ನಿತರ ಸಾಕ್ಷ್ಯಗಳ ಆಧಾರದ ಮೇಲೆ ಕೋರ್ಟ್ ಪೊಕ್ಸೋ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿತು.

ಆರೋಪಿ, ಜಯನಗರದಲ್ಲಿ ಸಾಫ್ಟವೇರ್ ಕಂಪನಿಯನ್ನು ನಡೆಸುತ್ತಿದ್ದು 2016ರಲ್ಲಿ ಮಗುವಿಗೆ ಜನ್ಮ ನೀಡುವ ಸಂದರ್ಭದಲ್ಲಿ ಪತ್ನಿಯನ್ನು ಕಳೆದುಕೊಂಡಿದ್ದ. ಆತನಿಗೆ ಮೂವರು ಮಕ್ಕಳಿದ್ದು ಮೊದಲ ಮಗುವಿಗೆ (ಹೆಣ್ಣು) 13 ವರ್ಷ. ಎರಡನೆಯ ಮಗುವಿಗೆ 10 (ಗಂಡು) ಮತ್ತು ಮೂರನೆಯ ಮಗುವಿಗೆ 3 ವರ್ಷ.

ಮಾರ್ಚ್ ತಿಂಗಳಲ್ಲಿ ಬೆಂಗಳೂರಿಗೆ ಬಂದ ಉದ್ಯಮಿ ತಾಯಿ ಮೊಮ್ಮಕ್ಕಳನ್ನು ಬೇಸಿಗೆ ರಜೆಗೆಂದು ಇಂದೋರ್‌ಗೆ ಕರೆದೊಯ್ದಾಗ ಮೊಮ್ಮಗುವಿನ ಮೇಲೆ ಲೈಂಗಿಕ ದೌರ್ಜನ್ಯವಾಗಿರುವುದು ಬೆಳಕಿಗೆ ಬಂದಿದೆ. ಅದರ ಜತೆಗೆ ಉದ್ಯಮಿಯ ಉದ್ಯೋಗಿಯೊಬ್ಬರು ಸಹ 10 ವರ್ಷದ ಬಾಲಕನೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ ಎಂದು ದೂರುದಾರರ ಪರ ವಕೀಲರು ಆರೋಪಿಸಿದ್ದಾರೆ.

ತಂದೆ ಆಗಾಗ ಕೆಲವು ಮಹಿಳೆಯರನ್ನು ಮನೆಗೆ ಕರೆ ತರುತ್ತಾರೆ ಎಂದು ಮಕ್ಕಳೇ ಹೇಳಿದ್ದಾರೆ. ಆಗ ಮಕ್ಕಳೆಲ್ಲ ಹೊರಗಡೆ ಇರಬೇಕು. ಮಹಿಳೆಯರಿರುವಾಗ ಒಳಗೆ ಬಂದರೆ ಅವರನ್ನು ನಿರ್ದಯವಾಗಿ ಥಳಿಸಲಾಗುತ್ತಿತ್ತು, ಎಂದು ದೂರುದಾರರ ಪರ ವಕೀಲರು ಕೋರ್ಟ್‌ನಲ್ಲಿ ಹೇಳಿದ್ದಾರೆ.

ಆರೋಪ ನಿರಾಕರಿಸಿದ ಉದ್ಯಮಿ

ತಮ್ಮ ಮೇಲಿನ ಆರೋಪ ತಳ್ಳಿ ಹಾಕಿರುವ ಉದ್ಯಮಿ, ಸಹೋದರಿ ಮತ್ತು ಆಕೆಯ ಪತಿ ನಡೆಸಿರುವ ಪಿತೂರಿ ಇದು. ತಾಯಿ ಇಲ್ಲದ ಮಕ್ಕಳನ್ನು ತುಂಬ ಚೆನ್ನಾಗಿ ನೋಡಿಕೊಂಡಿದ್ದೇನೆ. ಆದರೆ ತಾಯಿಯ ಸ್ಥಾನ ತುಂಬಲಾಗಲು ಎಂಬ ಅರಿವು ನನಗಿದೆ. ನನ್ನ ಸಹೋದರಿ ಪತಿ ನಿರುದ್ಯೋಗಿಯಾಗಿದ್ದು ನನ್ನ ಪೋಷಕರೊಂದಿಗೆ ಅವರು ವಾಸಿಸುತ್ತಾರೆ. ಏನಾದರು ಕೆಲಸ ಮಾಡು ಎಂದು ಸಲಹೆ ನೀಡಿದ್ದೆ. ಇದಕ್ಕೆ ಕೋಪಗೊಂಡ ಅವರು ನನ್ನ ಹೆಸರು ಕೆಡಿಸಲು ಸಂಚು ರೂಪಿಸಿದ್ದಾರೆ. ನನ್ನ ತಾಯಿಯನ್ನು ಬ್ಲ್ಯಾಕ್‌ಮೇಲ್ ಮಾಡಿ ನನ್ನ ವಿರುದ್ಧ ದೂರು ನೀಡುವಂತೆ ಮಾಡಲಾಗಿದೆ. ನಾನು ಪ್ರಕರಣವನ್ನು ಏಕಾಂಗಿಯಾಗಿ, ವಿಶ್ವಾಸದಿಂದ ಎದುರಿಸಲಿದ್ದೇನೆ ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ