ಆ್ಯಪ್ನಗರ

ನ್ಯಾಯಾಲಯದಲ್ಲಿ ಸಿಎಎ ಪ್ರಶ್ನಿಸುವಂತಿಲ್ಲ: ಕೇಂದ್ರ ಸರ್ಕಾರ!

ಸಿಎಎ ಕಾನೂನು ರಚನೆ ಮತ್ತು ಜಾರಿ ಸಂಸತ್ತಿನ ಪರಮಾಧಿಕಾರವಾಗಿದ್ದು, ಈ ಕುರಿತು ನ್ಯಾಯಾಲಯದಲ್ಲಿ ಯಾರೂ ಕೂಡ ದಾವೆ ಹೂಡಲು ಬರುವುದಿಲ್ಲ ಎಂದು ಸುಪ್ರೀಂಕೋರ್ಟ್ ಮುಂದೆ ಕೇಂದ್ರ ಸರ್ಕಾರ ವಾದ ಮಂಡಿಸಿದೆ.

Vijaya Karnataka Web 17 Mar 2020, 5:09 pm
ನವದೆಹಲಿ: ಪೌರತ್ವ ತಿದ್ದುಪಡಿ ಕಾನೂನು(ಸಿಎಎ) ಸಂಪೂರ್ಣ ಸಂವಿಧಾನಾತ್ಮಕವಾಗಿದ್ದು, ಈ ಕಾನೂನನ್ನು ಜಾರಿಗೊಳಿಸುವ ಪರಮಾಧಿಕಾರ ಸಂಸತ್ತಿಗೆ ಇದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಹೇಳಿದೆ.
Vijaya Karnataka Web caa
ಸಿಎಎ ಜಾರಿ ಸಂಸತ್ತಿನ ಪರಮಾಧಿಕಾರವಾಗಿದ್ದು, ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ.


ಸಿಎಎ ಕಾನೂನು ರಚನೆ ಮತ್ತು ಜಾರಿ ಸಂಸತ್ತಿನ ಪರಮಾಧಿಕಾರವಾಗಿದ್ದು, ಈ ಕುರಿತು ನ್ಯಾಯಾಲಯದಲ್ಲಿ ದಾವೆ ಹೂಡಲು ಬರುವುದಿಲ್ಲ ಎಂದು ಸುಪ್ರೀಂಕೋರ್ಟ್ ಮುಂದೆ ಕೇಂದ್ರ ಸರ್ಕಾರ ವಾದ ಮಂಡಿಸಿದೆ.

ಸಿಎಎ ಸಿಂಧುತ್ವ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋದ ರಾಜಸ್ಥಾನ ಸರಕಾರ

ಸಿಎಎ ಕುರಿತು ಸುಪ್ರೀಂಕೋರ್ಟ್ ಮುಂದೆ ತನ್ನ ಪ್ರಾಥಮಿಕ ಹೇಳಿಕೆ ನೀಡಿರುವ ಕೇಂದ್ರ ಸರ್ಕಾರ, ಸಿಎಎ ಜಾರಿ ಸಂಸತ್ತಿನ ಪರಮಧಿಕಾರದ ವ್ಯಾಪ್ತಿಗೆ ಬರುತ್ತದೆ ಎಂದು ಸ್ಪಷ್ಟಪಡಿಸಿದೆ.

ಸಂವಿಧಾನದ 246ನೇ ಪರಿಚ್ಛೇದದ ಪ್ರಕಾರ 7ನೇ ಅನುಸೂಚಿಯಲ್ಲಿ ಬರುವ ಯಾವುದೇ ವಿಷಯದ ಮೇಲೆ ಕಾನೂನು ಪಾಸು ಮಾಡಲು ಕೇಂದ್ರ ಸರ್ಕಾರಕ್ಕೆ ಪರಮಾಧಿಕಾರವಿದ್ದು, ಇದನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸಲು ಬರುವಂತಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಇದೇ ವೇಳೆ ಸಿಎಎ ಪ್ರಸ್ತುತ ಜಾರಿ ಇರುವ ಯಾವದೇ ಪೌರತ್ವ ಹಕ್ಕು ಕಾಯ್ದೆಯನ್ನು ನಿಯಂತ್ರಿಸುವುದಿಲ್ಲ ಎಂದಿರುವ ಕೇಂದ್ರ, ಈ ಕಾನೂನು ಜನರ ಕಾನೂನಾತ್ಮಕ, ಜಾತ್ಯಾತೀತ ಹಾಗೂ ಪ್ರಜಾಸತ್ತಾತ್ಮಕ ಹಕ್ಕಿನ ಮೇಲೆ ದಾಳಿ ಮಾಡುವುದಿಲ್ಲ ಎಂದು ಹೇಳಿದೆ.

'ಸಿಎಎ' ವಿರುದ್ಧ ನಿರ್ಣಯ ಅಂಗೀಕರಿಸಿದ ತೆಲಂಗಾಣ ವಿಧಾನಸಭೆ!

ಸಿಎಎ ಕಾನೂನು ನೆರೆಯ ಇಸ್ಲಾಮಿಕ್ ದೇಶಗಳಲ್ಲಿ ಧಾರ್ಮಿಕ ಶೋಷಣೆಗೊಳಗಾದ ಅಲ್ಪಸಂಖ್ಯಾತಿಗೆ ಪೌರತ್ವ ನೀಡಲು ಪಾತ್ರವಿದೆಯೇ ಹೊರತು, ದೇಶದಲ್ಲಿರುವ ಯಾರ ಪೌರತ್ವವನ್ನೂ ಕಸಲಿಯಲು ಅಲ್ಲ ಎಂದು ಸುಪ್ರೀಂಕೋರ್ಟ್ ಗೆ ಕೇಂದ್ರ ಸರ್ಕಾರ ನವರಿಕೆ ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ