ಆ್ಯಪ್ನಗರ

ಉಬರ್, ಓಲಾ ಮತ್ತಷ್ಟು ದುಬಾರಿ: ಗ್ರಾಹಕರ ಆಕ್ರೋಶ

ಕಳೆದ ಹಲವು ವರ್ಷಗಳಿಂದ ಉಬರ್, ಓಲಾ ಎಂಬುದು ಬೆಂಗಳೂರು ಜನರ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಆದರೆ ಕೆಲ ವಾರಗಳಲ್ಲಿ ಕ್ಯಾಬ್ ಮತ್ತು ಆಟೋಗಳ ದರಗಳಲ್ಲಿ ವಿಪರೀತ ಏರಿಕೆಯಾಗುತ್ತಿದ್ದು ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳುತ್ತಿದೆ.

TIMESOFINDIA.COM 16 Jul 2018, 12:23 pm
ಬೆಂಗಳೂರು: ಕಳೆದ ಹಲವು ವರ್ಷಗಳಿಂದ ಉಬರ್, ಓಲಾ ಎಂಬುದು ಬೆಂಗಳೂರು ಜನರ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಆದರೆ ಕೆಲ ವಾರಗಳಲ್ಲಿ ಕ್ಯಾಬ್ ಮತ್ತು ಆಟೋಗಳ ದರಗಳಲ್ಲಿ ವಿಪರೀತ ಏರಿಕೆಯಾಗುತ್ತಿದ್ದು ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳುತ್ತಿದೆ.
Vijaya Karnataka Web OLA


ಪ್ರತಿದಿನ ಉಬರ್, ಓಲಾ (ಶೇರಿಂಗ್) ನಲ್ಲಿ ಕಚೇರಿಗೆ ಹೋಗಿಬರುವ ಸಾಗ್ನಿಕ್ ಬಸು ಹೇಳುತ್ತಾರೆ, "ಆಟೋ ರಿಕ್ಷಾಗಿಂತ ಕಡಿಮೆ ದರಕ್ಕೆ ಸಿಗುತ್ತಿದುದರಿಂದ ಕ್ಯಾಬ್ ಸೇವೆ ಬಳಸಲು ನನಗೆ ಸಂತೋಷವಾಗುತ್ತಿತ್ತು. ಆದರೆ ಇತ್ತೀಚಿಗೆ ಕ್ಯಾಬ್ ದರದಲ್ಲಿ ವಿಪರೀತ ಏರಿಕೆಯಾಗುತ್ತಿದ್ದು ನಾನೀಗ ಕಾರು ಕೊಂಡುಕೊಳ್ಳಲು ನಿರ್ಧರಿಸಿದ್ದೇನೆ. ಎರಡು ತಿಂಗಳ ಹಿಂದೆ ಮೇಕ್ರಿ ಸರ್ಕಲ್ ನಿಂದ ಟ್ರಿನಿಟಿ ಸರ್ಕಲ್ ಕಡೆ ಹೋಗಲು ಕೇವಲ 80 ರೂ ವ್ಯಯಿಸುತ್ತಿದ್ದೆ. ಮತ್ತೀಗ 100 ಮತ್ತು ಕೆಲವು ಬಾರಿ ಅದಕ್ಕಿಂತ ಹೆಚ್ಚು ನೀಡಬೇಕಾಗಿದೆ''.

ಈ ಹಿಂದೆ 300 ರೂಪಾಯಿಯಲ್ಲಿ ಕಚೇರಿಗೆ ಹೋಗುತ್ತಿದ್ದೆ. ಮತ್ತೀಗ 500 ರೂಪಾಯಿ ನೀಡುತ್ತಿದ್ದೇನೆ, ಎನ್ನುತ್ತಾರೆ ಎಮ್.ಜಿ ರಸ್ತೆಯಲ್ಲಿರುವ ಕಚೇರಿಗೆ ಪ್ರತಿನಿತ್ಯ ಕ್ಯಾಬ್‌ನಲ್ಲಿ ಓಡಾಡುವ ಚಿಕ್ಕಬಾಣಾವರ ನಿವಾಸಿ ಎಸ್. ಶಿವ.

ಕಳೆದ ತಿಂಗಳ ದರಕ್ಕಿಂತ ಈಗ 50% ದಿಂದ 100% ಏರಿಕೆಯಾಗಿದೆ, ಎನ್ನುವುದು ಹಲವರ ಅಳಲು.

ಕೆಲವರು ದಿನವೀಡಿ ಬೆಲೆ ಏರಿಕೆಯಾಗಿರುತ್ತದೆ ಎಂದು ದೂರುತ್ತಾರೆ. ಮತ್ತೆ ಕೆಲವರು ಪೀಕ್ ಹವರ್‌ನಲ್ಲಿ ಜಾಸ್ತಿ ಇರುತ್ತದೆ ಎಂದರೆ, ಮತ್ತೆ ಕೆಲವರು ನಿರ್ದಿಷ್ಟ ಮಾರ್ಗಗಳಲ್ಲಿ ದರ ಜಾಸ್ತಿಯಾಗಿದೆ ಎನ್ನುತ್ತಿದ್ದಾರೆ. ದರ ಕಡಿಮೆಯಾಗಿದ್ದರೂ ಸಹ ಪೀಕ್ ಹವರ್‌ನಲ್ಲಿ ಬುಕ್ ಮಾಡಲು ಪರದಾಡಬೇಕಾಗುತ್ತದೆ ಎನ್ನುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ