ಆ್ಯಪ್ನಗರ

ಕರೆ ವಿವರ ಮಾರಾಟ: ಮಹಿಳಾ ಪತ್ತೇದಾರಿ ಪಂಡಿತ್‌ ಬಂಧನ

ಕರೆ ವಿವರ ದಾಖಲೆಗಳನ್ನು(ಸಿಡಿಆರ್‌) ಕಾನೂನುಬಾಹಿರವಾಗಿ ಸಂಗ್ರಹಿಸಿದ ಆರೋಪದ ಮೇಲೆ ಖಾಸಗಿ ಪತ್ತೆದಾರಿ ಮಹಿಳೆಯೊಬ್ಬಳನ್ನು ಬಂಧಿಸಲಾಗಿದೆ.

Vijaya Karnataka 4 Feb 2018, 9:40 am

ಥಾಣೆ: ಕರೆ ವಿವರ ದಾಖಲೆಗಳನ್ನು(ಸಿಡಿಆರ್‌) ಕಾನೂನುಬಾಹಿರವಾಗಿ ಸಂಗ್ರಹಿಸಿದ ಆರೋಪದ ಮೇಲೆ ಖಾಸಗಿ ಪತ್ತೆದಾರಿ ಮಹಿಳೆಯೊಬ್ಬಳನ್ನು ಬಂಧಿಸಲಾಗಿದೆ.

Vijaya Karnataka Web call detail sales women arrested
ಕರೆ ವಿವರ ಮಾರಾಟ: ಮಹಿಳಾ ಪತ್ತೇದಾರಿ ಪಂಡಿತ್‌ ಬಂಧನ


ಭಾರತದ ಮೊದಲ ಖಾಸಗಿ ಪತ್ತೆದಾರಿ ಮಹಿಳೆ ಎಂದು ಹೇಳಲಾಗುವ ರಜನಿ ಪಂಡಿತ್‌(54) ಅವರನ್ನು ಥಾಣೆ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಆಕೆಯನ್ನು ಫೆಬ್ರವರಿ 7ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ರಜನಿ ಅವರ ಬಂಧನಕ್ಕೂ ಮೊದಲು ನಾಲ್ವರು ಪತ್ತೆದಾರರನ್ನು ಬಂಧಿಸಲಾಗಿತ್ತು.ಅವರ ವಿಚಾರಣೆ ವೇಳೆ ಹಗರಣದಲ್ಲಿ ರಜನಿ ಭಾಗವಹಿಸಿರುವುದು ಖಚಿತವಾದ ಹಿನ್ನೆಲೆಯಲ್ಲಿ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಮುಂಬಯಿ ಸುತ್ತಮುತ್ತ ವಾಸಿಸುವ ವ್ಯಕ್ತಿಗಳ ಕರೆ ವಿವರ ದಾಖಲೆಗಳನ್ನು(ಸಿಡಿಆರ್‌) ಸಂಗ್ರಹಿಸಿ ಅದನ್ನು ಹೆಚ್ಚಿನ ಹಣಕ್ಕೆ ಮಾರುತ್ತಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ