ಆ್ಯಪ್ನಗರ

ರೋಹಿತ್ ತಿವಾರಿ ಹತ್ಯೆ ಪ್ರಕರಣ: ಸಾವಿನ ಬಳಿಕ ಅವರ ಮೊಬೈಲ್‌ನಿಂದ ಪತ್ರಕರ್ತನಿಗೆ ಕರೆ ಮಾಡಿದವರ್ಯಾರು?

ದಿಲ್ಲಿ ಪೊಲೀಸ್ ಅಪರಾಧ ದಳದ ಶನಿವಾರ ರೋಹಿತ್ ಮನೆಯವರನ್ನು ಪ್ರಶ್ನಿಸಿದ್ದಾರೆ. ರೋಹಿತ್ ಪತ್ನಿ ಅಪೂರ್ವ ಅವರ ಕೆಲ ಹೇಳಿಕೆಗಳು ಅನುಮಾನಾಸ್ಪದವಾಗಿದ್ದವು. ಆದಾಗ್ಯೂ, ರೋಹಿತ್ ಸಹೋದರ ಮತ್ತು ಅವರ ಮನೆಯ ಸಹಾಯಕ ಭೋಲು ಸಹ ಆಕೆಯ ಸ್ಪಷ್ಟೀಕರಣವನ್ನೇ ಬೆಂಬಲಿಸಿದರು. ಜತೆಗೆ ಭೋಲು ಹೇಳಿಕೆ ಆಕೆಯ ಹೇಳಿಕೆಯನ್ನು ಹೋಲುತ್ತಿತ್ತು.

TIMESOFINDIA.COM 21 Apr 2019, 12:13 pm
ಹೊಸದಿಲ್ಲಿ: ಉತ್ತರಾಖಂಡ್ ಮಾಜಿ ಮುಖ್ಯಮಂತ್ರಿ ಎನ್ ಡಿ ತಿವಾರಿ ಪುತ್ರ ರೋಹಿತ್ ತಿವಾರಿ ಹತ್ಯೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಅಪರಾಧ ದಳ ಪೊಲೀಸರು ಮೂರು ಅಂಶಗಳ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ.
Vijaya Karnataka Web 1555421891-rohit_0


1. ಆ ಸಂದರ್ಭದಲ್ಲಿ ಮನೆಯಲ್ಲಿದ್ದ ಸಂಬಂಧಿ ಮಹಿಳೆಯ ಪಾತ್ರ
3. ರೋಹಿತ್ ಸಾವಿನ ಬಳಿಕ ( ಬಹುಶಃ) ಅಂದರೆ ಮಧ್ಯರಾತ್ರಿ 2 ಗಂಟೆಯಿಂದ 4.14ರವರೆಗೆ ಅವರ ರೋಹಿತ್ ಮೊಬೈಲ್‌ನಿಂದ ಪತ್ರಕರ್ತರಿಗೆ ಮತ್ತು ಸಂಬಂಧಿಗೆ ಕರೆ ಮಾಡಿದ್ದು( ಕರೆ ಸ್ವೀಕರಿಸಲಾಗಿಲ್ಲ)
3. ವಿಚಾರಣೆಗೆ ಕುಟುಂಬ ಸದಸ್ಯರ ಅಸಹಕಾರ

ಶನಿವಾರ ಪೊಲೀಸ್ ವಿಚಾರಣೆಯಲ್ಲಿ ರೋಹಿತ್ ತಾಯಿ ಉಜ್ವಲಾ, ಮುಂಜಾನೆಯಿಂದ ರೋಹಿತ್‌ನನ್ನು ಎಬ್ಬಿಸಲು ಒಬ್ಬರೂ ಸಹ ಯಾಕೆ ಪ್ರಯತ್ನಿಸಿಲ್ಲ ಎಂದು ಕೇಳಿದರೆ ಆತನ ಪತ್ನಿ ಮತ್ತು ಮನೆಗೆಲಸದವರಿಂದ ಸರಿಯಾದ ಉತ್ತರ ಬರಲಿಲ್ಲ ಎಂದು ಹೇಳಿದ್ದಾರೆ. ಏಪ್ರಿಲ್ 15ರ ರಾತ್ರಿ ರಾತ್ರಿ 11. 30ಕ್ಕೆ ಮಲಗಲು ಹೋಗಿದ್ದರು. ಮರುದಿನ ಮಧ್ಯಾಹ್ನ 4 ಗಂಟೆಗೆ ಮೂಗಿನಲ್ಲಿ ರಕ್ತ ಒಸರುವ ಸ್ಥಿತಿಯಲ್ಲಿ ಅವರು ಪತ್ತೆಯಾಗಿದ್ದರು.

ದಿಲ್ಲಿ ಪೊಲೀಸ್ ಅಪರಾಧ ದಳದ ಶನಿವಾರ ರೋಹಿತ್ ಮನೆಯವರನ್ನು ಪ್ರಶ್ನಿಸಿದ್ದಾರೆ. ರೋಹಿತ್ ಪತ್ನಿ ಅಪೂರ್ವ ಅವರ ಕೆಲವು ಹೇಳಿಕೆಗಳು ಅನುಮಾನಾಸ್ಪದವಾಗಿದ್ದವು. ಆದಾಗ್ಯೂ, ರೋಹಿತ್ ಸಹೋದರ ಮತ್ತು ಅವರ ಮನೆಯ ಸಹಾಯಕ ಭೋಲು ಸಹ ಆಕೆಯ ಸ್ಪಷ್ಟೀಕರಣವನ್ನೇ ಬೆಂಬಲಿಸಿದರು. ಜತೆಗೆ ಭೋಲು ಹೇಳಿಕೆ ಆಕೆಯ ಹೇಳಿಕೆಯನ್ನು ಹೋಲುತ್ತಿತ್ತು.

ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಗಳ ಪ್ರಕಾರ ರೋಹಿತ್ ಸಾವನ್ನಪ್ಪಿದ್ದು ಏಪ್ರಿಲ್ 15 ಮತ್ತು 16ರ ನಡುವಿನ ರಾತ್ರಿ 1 ಗಂಟೆಯಿಂದ 1.30. ಅವರ ಮೂಗಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ಮತ್ತು ಎದೆಯ ಮೇಲೆ ಗಾಯವಿರುವುದು ಅವರ ಮೇಲೆ ಗಟ್ಟಿಯಾದ ವಸ್ತುವಿನಿಂದ ದಾಳಿ ಮಾಡಿರಬಹುದೆಂದು ಅನುಮಾನ ತರಿಸುತ್ತದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ರಾತ್ರಿ ಅವರ ಅವರ ಮೊಬೈಲ್‌ನಿಂದ ಕಾಲ್ ಮಾಡಲಾಗಿರುವ ಮೊಬೈಲ್ ಸಂಖ್ಯೆ ಒಬ್ಬ ಪತ್ರಕರ್ತರದಾಗಿದೆ. ತನ್ನ ತಂದೆಯ ವಿರುದ್ಧ ರೋಹಿತ್ ಕಾನೂನು ಹೋರಾಟ ನಡೆಸುತ್ತಿದ್ದಾಗ ಇದೇ ಪತ್ರಕರ್ತರು ಸಹಾಯ ಮಾಡಿದ್ದರು ಎಂದು ಹೇಳಲಾಗುತ್ತಿದೆ. ರೋಹಿತ್ ಮೊಬೈಲ್ ಪಾಸ್‌ವರ್ಡ್‌ನಿಂದ ಲಾಕ್ ಮಾಡಲಾಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮನೆಯಲ್ಲಿ 5 ಸ್ಥಿರ ದೂರವಾಣಿಗಳಿದ್ದು, ಅದರಿಂದ ಮಾಡಲಾಗಿರುವ ಕರೆಗಳ ಬಗ್ಗೆ ಸಹ ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಮನೆಯಲ್ಲಿರುವ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಲಾಗುತ್ತಿದೆ. ಆದರೆ ರೋಹಿತ್ ಬೆಡ್ ರೂಮ್ ಕಡೆಗೆ ಕೇಂದ್ರೀಕರಿಸಿರುವ 2 ಮತ್ತು ಲಿವಿಂಗ್ ರೂಮ್‌ನಲ್ಲಿರುವ ಸಿಸಿ ಕ್ಯಾಮರಾಗಳು ಕಾರ್ಯ ನಿರ್ವಹಿಸುತ್ತಿಲ್ಲ ಎಂದು ತಿಳಿದು ಬಂದಿದೆ.

ಏಪ್ರಿಲ್ 11ರಂದು ರೋಹಿತ್, ತಾಯಿ ಉಜ್ವಲಾ ಮತ್ತು ಸಂಬಂಧಿಯೊಬ್ಬರು ಹಲ್ವಾನಿಗೆ ಹೊರಟು, ರಾಣಿಬಾಗ್‌ನಲ್ಲಿರುವ ಎನ್ ಡಿ ತಿವಾರಿ ಸ್ಮಾರಕಕ್ಕೆ ಭೇಟಿ ನೀಡಿದರು. ಯಾತ್ರೆಯುದ್ದಕ್ಕೂ ಮಗ ತನ್ನ ರಾಜಕೀಯ ಜೀವನ ಸಂಘರ್ಷದ ಹಾದಿಯಲ್ಲಿರುವುದರ ಬಗ್ಗೆ ಚಿಂತೆಯಲ್ಲಿದ್ದ. ಹೀಗಾಗಿ ಏಪ್ರಿಲ್ 14 ರಂದು ಸಡನ್ ಆಗಿ ಯಾತ್ರೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ದಿಲ್ಲಿಗೆ ಹಿಂತಿರುಗಿದೆವು ಎಂದು ತಾಯಿ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ