ಆ್ಯಪ್ನಗರ

ಅನುಕೂಲಸ್ಥರಿಗೆ ಎಸ್ಸಿ/ಎಸ್ಟಿ ಮೀಸಲು: ಸುಪ್ರೀಂ ಪ್ರಶ್ನೆ

ಸರಕಾರಿ ಉದ್ಯೋಗ ಮತ್ತು ಬಡ್ತಿಯಲ್ಲಿ ಎಸ್ಸಿ/ಎಸ್ಟಿ ಸಮುದಾಯದ ಅನುಕೂಲಸ್ಥರಿಗೆ ಮೀಸಲು ಒದಗಿಸುವುದರ ಹಿಂದಿನ ತರ್ಕವನ್ನು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ.

Vijaya Karnataka 24 Aug 2018, 8:18 am
ಹೊಸದಿಲ್ಲಿ: ಸರಕಾರಿ ಉದ್ಯೋಗ ಮತ್ತು ಬಡ್ತಿಯಲ್ಲಿ ಎಸ್ಸಿ/ಎಸ್ಟಿ ಸಮುದಾಯದ ಅನುಕೂಲಸ್ಥರಿಗೆ ಮೀಸಲು ಒದಗಿಸುವುದರ ಹಿಂದಿನ ತರ್ಕವನ್ನು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ.
Vijaya Karnataka Web Supreme Court 1


ಒಬಿಸಿ ಮೀಸಲು ನೀತಿ ಮಾದರಿಯಲ್ಲೇ ಎಸ್ಸಿ/ಎಸ್ಟಿ ಮೀಸಲು ವಿಷಯದಲ್ಲಿ 'ಕೆನೆ ಪದರ' ನಿಯಮ ಅನುಸರಿಸಿ, ಅನುಕೂಲಸ್ಥರನ್ನು ಕೋಟಾದಿಂದ ಹೊರಗಿರಿಸಬಾರದೇಕೆ ಎಂದು ಸಿಜೆಐ ದೀಪಕ್‌ ಮಿಶ್ರಾ ನೇತೃತ್ವದ ಪಂಚ ಸದಸ್ಯ ಪೀಠ ಪ್ರಶ್ನಿಸಿತು. ಆದರೆ, ಅಟಾರ್ನಿ ಜನರಲ್‌ ವೇಣುಗೋಪಾಲ್‌ ಸೇರಿದಂತೆ ಸರಕಾರದ ಪರ ವಕೀಲರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು.

ಒಬ್ಬ ವ್ಯಕ್ತಿ ಮೀಸಲು ಅನುಕೂಲ ಪಡೆದು ರಾಜ್ಯವೊಂದರ ಮುಖ್ಯ ಕಾರ್ಯದರ್ಶಿಯಾದರೆ, ಅವರ ಕುಟುಂಬದ ಇತರ ಸದಸ್ಯರಿಗೂ ಈ ಅನುಕೂಲ ಏಕೆ ನೀಡಬೇಕೆಂದು ನ್ಯಾಯಪೀಠ ಉದಾಹರಿಸಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ