ಆ್ಯಪ್ನಗರ

ಯುಪಿಎಸ್‌ಸಿ ಪರೀಕ್ಷಾ ಅರ್ಜಿ ಇನ್ನು ಹಿಂಪಡೆಯಬಹುದು

ಯುಪಿಎಸ್‌ಸಿ ಸೋಮವಾರ ಪರೀಕ್ಷಾ ಅರ್ಜಿ ಹಿಂಪಡೆದುಕೊಳ್ಳುವ ಸೌಲಭ್ಯವನ್ನು ಪರಿಚಯಿಸಿದ್ದು, 2019ನೇ ಸಾಲಿನಲ್ಲಿ ಇಂಜಿನಿಯರಿಂಗ್ ಸೇವೆಗಳ ಪರೀಕ್ಷೆಯಲ್ಲಿ ಅರ್ಜಿ ಹಿಂಪಡೆತ ಆಯ್ಕೆಯನ್ನು ಒದಗಿಸಲಿದೆ.

Vijaya Karnataka Web 1 Oct 2018, 8:47 pm
ಹೊಸದಿಲ್ಲಿ: ಕೇಂದ್ರೀಯ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಸರಕಾರ ಗುಡ್‌ನ್ಯೂಸ್ ಒಂದನ್ನು ನೀಡಿದೆ. ಪರೀಕ್ಷೆ ಬರೆಯಲು ಅರ್ಜಿ ಸಲ್ಲಿಸಿ ನಂತರ ಮನಸ್ಸು ಬದಲಾಯಿಸಿ ಅರ್ಜಿ ಹಿಂಪಡೆಯಲು ಬಯಸಿದರೆ ಅದಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.
Vijaya Karnataka Web Patna: Students form a queue for inspection by police personnel before entering ...


ಯುಪಿಎಸ್‌ಸಿ ಸೋಮವಾರ ಪರೀಕ್ಷಾ ಅರ್ಜಿ ಹಿಂಪಡೆದುಕೊಳ್ಳುವ ಸೌಲಭ್ಯವನ್ನು ಪರಿಚಯಿಸಿದ್ದು, 2019ನೇ ಸಾಲಿನಲ್ಲಿ ಇಂಜಿನಿಯರಿಂಗ್ ಸೇವೆಗಳ ಪರೀಕ್ಷೆಯಲ್ಲಿ ಅರ್ಜಿ ಹಿಂಪಡೆತ ಆಯ್ಕೆಯನ್ನು ಒದಗಿಸಲಿದೆ.

ಯುಪಿಎಸ್‌ಸಿ ನಡೆಸುವ ವಿವಿಧ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುವ ಪೈಕಿ ಶೇ. 50 ಮಂದಿ ಮಾತ್ರ ಪ್ರಿಲಿಮ್ಸ್ ಪರೀಕ್ಷೆಗೆ ಹಾಜರಾಗುತ್ತಾರೆ. ಆದರೆ ಅರ್ಜಿ ಸಲ್ಲಿಸಿದ ಅಷ್ಟೂ ಜನಕ್ಕೆ ಪರೀಕ್ಷೆ ಬರೆಯಲು ಎಲ್ಲ ವ್ಯವಸ್ಥೆ ಮಾಡಲಾಗಿರುತ್ತದೆ. ಆದರೆ ಬಹಳಷ್ಟು ಮಂದಿ ಅರ್ಜಿ ಸಲ್ಲಿಸಿ ನಂತರ ಅತ್ತ ಕಡೆ ಸುಳಿಯುವುದಿಲ್ಲ. ಇದರಿಂದ ಯುಪಿಎಸ್‌ಸಿಗೆ ಸಾಕಷ್ಟು ನಷ್ಟವುಂಟಾಗುತ್ತಿದೆ.

ಜತೆಗೆ ನೈಜ ಆಸಕ್ತ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಅರ್ಜಿ ಹಿಂಪಡೆತ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ, ಅರ್ಜಿ ಹಿಂಪಡೆತ ಆಯ್ಕೆ ನೀಡಲಾಗುತ್ತದೆ.

ಅಭ್ಯರ್ಥಿಗಳು ವೆಬ್‌ಸೈಟ್‌ನಲ್ಲಿ ಎಲ್ಲ ವಿವರ ನಮೂದಿಸಿ, ನಂತರ ಬರುವ ಒಟಿಪಿ ಬಳಸಿ ಅರ್ಜಿ ಹಿಂಪಡೆಯಬಹುದು. ಬಳಿಕ ಅವರಿಗೆ ದೃಢೀಕರಣ ಸಂದೇಶ ಬರಲಿದೆ. ಹೀಗಾಗಿ ಅರ್ಜಿ ಸಲ್ಲಿಸಿ ನಂತರ ಪರೀಕ್ಷೆ ಬರೆಯದೆ ಇರುವವರಿಗೆ ಪ್ರಯೋಜನವಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ