ಆ್ಯಪ್ನಗರ

ವೈಯಕ್ತಿಕ ರಾಜಕೀಯ ಕಮೆಂಟ್‌ಗಳಿಗೆ ಕಡಿವಾಣ ಕಷ್ಟ ಎಂದ ಚು.ಆಯೋಗ

ಇತ್ತೀಚಿನ ದಿನಗಳಲ್ಲಿ ರಾಜಕೀಯ ಮತ್ತು ಚುನಾವಣೆಗೆ ಸಂಬಂಧಿಸಿದಂತೆ ಯೂಟ್ಯೂಬ್‌, ಫೇಸ್‌ಬುಕ್‌, ಟ್ವಿಟರ್‌, ವಾಟ್ಸ್‌ಆ್ಯಪ್‌ಗಳಲ್ಲಿ ಜಾಹೀರಾತು ರೂಪದಲ್ಲಿ ಇಲ್ಲವೇ ಪೇಯ್ಡ್‌ ಕಂಟೆಂಟ್‌ ರೂಪದಲ್ಲಿ ವೈಯಕ್ತಿಕ ರಾಜಕೀಯ ಅಭಿಪ್ರಾಯಗಳು ಹೆಚ್ಚಾಗಿ ಹರಿದಾಡುತ್ತಿದ್ದು, ಇವುಗಳಿಗೆ ತಡೆ ಹಾಕಬೇಕೆಂದು ಕೋರಿ ವಕೀಲ ಸಾಗರ್‌ ಸೂರ್ಯವಂಶಿ ಪಿಐಎಲ್‌ ಸಲ್ಲಿಸಿದ್ದರು.

Vijaya Karnataka 12 Jan 2019, 5:00 am
ಮುಂಬಯಿ: ಯಾವುದೇ ಒಂದು ಪಕ್ಷವನ್ನು ಬೆಂಬಲಿಸಿ, ಇಲ್ಲವೇ ವಿರೋಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಜನರು ವ್ಯಕ್ತಪಡಿಸುವ ವೈಯಕ್ತಿಕ 'ರಾಜಕೀಯ ಅಭಿಪ್ರಾಯ'ಗಳಿಗೆ ಕಡಿವಾಣ ಹಾಕಲು ಕಷ್ಟಸಾಧ್ಯ ಎಂದು ಕೇಂದ್ರ ಚುನಾವಣಾ ಆಯೋಗ ಬಾಂಬೆ ಹೈಕೋರ್ಟ್‌ಗೆ ತಿಳಿಸಿದೆ. ಇತ್ತೀಚಿನ ದಿನಗಳಲ್ಲಿ ರಾಜಕೀಯ ಮತ್ತು ಚುನಾವಣೆಗೆ ಸಂಬಂಧಿಸಿದಂತೆ ಯೂಟ್ಯೂಬ್‌, ಫೇಸ್‌ಬುಕ್‌, ಟ್ವಿಟರ್‌, ವಾಟ್ಸ್‌ಆ್ಯಪ್‌ಗಳಲ್ಲಿ ಜಾಹೀರಾತು ರೂಪದಲ್ಲಿ ಇಲ್ಲವೇ ಪೇಯ್ಡ್‌ ಕಂಟೆಂಟ್‌ ರೂಪದಲ್ಲಿ ವೈಯಕ್ತಿಕ ರಾಜಕೀಯ ಅಭಿಪ್ರಾಯಗಳು ಹೆಚ್ಚಾಗಿ ಹರಿದಾಡುತ್ತಿದ್ದು, ಇವುಗಳಿಗೆ ತಡೆ ಹಾಕಬೇಕೆಂದು ಕೋರಿ ವಕೀಲ ಸಾಗರ್‌ ಸೂರ್ಯವಂಶಿ ಪಿಐಎಲ್‌ ಸಲ್ಲಿಸಿದ್ದರು. ಈ ಅರ್ಜಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಕೋರ್ಟ್‌ಗೆ ತನ್ನ ನಿಲುವು ಸ್ಪಷ್ಟಪಡಿಸಿದೆ. ''ಸದ್ಯದ ಕಾನೂನಿನ ಅನುಸಾರ ರಾಜಕಾರಣಿಗಳಿಗೆ, ರಾಜಕೀಯ ಪಕ್ಷಗಳಿಗೆ ಯಾವುದೇ ರೂಪದ ರಾಜಕೀಯ ಕಮೆಂಟ್‌ಗಳನ್ನು ಹಾಕಲು ನಿರ್ದಿಷ್ಟ ನಿರ್ಬಂಧಗಳಿವೆ. ಆದರೆ ಸಾಮಾನ್ಯ ಜನರನ್ನು ವೈಯಕ್ತಿಕ 'ಪೊಲಿಟಿಕಲ್‌ ಕಮೆಂಟ್‌'ಗಳಿಂದ ನಿರ್ಬಂಧಿಸಲು ಹೇಗೆ ಸಾಧ್ಯ ಎಂದು ಆಯೋಗ ಪ್ರಶ್ನಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ