ಆ್ಯಪ್ನಗರ

ಹಸುಳೆ-ಅಮ್ಮನನ್ನೂ ಲೆಕ್ಕಿಸದೇ ಕಾರು ಎಳೆದೊಯ್ದ ಪೊಲೀಸರು!

ಏಳು ತಿಂಗಳ ಮಗುವಿಗೆ ಸ್ತನ್ಯಪಾನ ಮಾಡಿಸುತ್ತಿದ್ದ ಮಹಿಳೆಯನ್ನು ಲೆಕ್ಕಿಸದೇ ಮುಂಬಯಿ ಸಂಚಾರ ಪೊಲೀಸರು ನಿಯಮ ಉಲ್ಲಂಘಿಸಿ ಪಾರ್ಕಿಂಗ್‌ ಮಾಡಿದ್ದ ಕಾರಿನ ಜತೆ ಪೊಲೀಸ್‌ ಠಾಣೆಗೆ ಎಳೆದೊಯ್ದ ಘಟನೆ ಶನಿವಾರ ನಡೆದಿದೆ.

Vijaya Karnataka 12 Nov 2017, 7:19 am

ಮುಂಬಯಿ: ಏಳು ತಿಂಗಳ ಮಗುವಿಗೆ ಸ್ತನ್ಯಪಾನ ಮಾಡಿಸುತ್ತಿದ್ದ ಮಹಿಳೆಯನ್ನು ಲೆಕ್ಕಿಸದೇ ಮುಂಬಯಿ ಸಂಚಾರ ಪೊಲೀಸರು ನಿಯಮ ಉಲ್ಲಂಘಿಸಿ ಪಾರ್ಕಿಂಗ್‌ ಮಾಡಿದ್ದ ಕಾರಿನ ಜತೆ ಪೊಲೀಸ್‌ ಠಾಣೆಗೆ ಎಳೆದೊಯ್ದ ಘಟನೆ ಶನಿವಾರ ನಡೆದಿದೆ.

Vijaya Karnataka Web car with woman and child inside towed away cop suspended
ಹಸುಳೆ-ಅಮ್ಮನನ್ನೂ ಲೆಕ್ಕಿಸದೇ ಕಾರು ಎಳೆದೊಯ್ದ ಪೊಲೀಸರು!


ಜ್ಯೋತಿ ಎಂಬ ಹೆಸರಿನ ಆ ಮಹಿಳೆ ರಸ್ತೆ ಬದಿ ನಿಲ್ಲಿಸಿದ್ದ ತಮ್ಮ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತು ಮಗುವಿಗೆ ಸ್ತನ್ಯಪಾನ ಮಾಡಿಸುತ್ತಿದ್ದರು. ಆಗ ಅಲ್ಲಿಗೆ ಬಂದ ಸಂಚಾರ ಪೊಲೀಸರು ಆಕೆಯನ್ನು ವಿಚಾರಿಸುವ ಗೋಜಿಗೆ ಹೋಗದೆ ಏಕಾಏಕಿ ಕಾರನ್ನು ಎಳೆದೊಯ್ಯಲಾರಂಭಿಸಿದ್ದಾರೆ.

ಆ ಸಂದರ್ಭದಲ್ಲಿ ತಾವು ಅಸ್ವಸ್ಥರಾಗಿರುವುದಾಗಿ ಆ ಮಹಿಳೆ ಪೊಲೀಸರಿಗೆ ವಿನಂತಿಸಿಕೊಂಡಿದ್ದಾರೆ. ಅಲ್ಲದೆ, ವೈದ್ಯರು ಬರೆದುಕೊಟ್ಟ ಔಷಧಿ ಚೀಟಿಯನ್ನೂ ಕಿಟಕಿಯಲ್ಲಿ ತೋರಿಸಿದ್ದಾರೆ. ಆದರೆ, ಅದಕ್ಕೆ ಕಿವಿಗೊಡದ ಪೊಲೀಸರು ಮೊಬೈಲ್‌ನಲ್ಲಿ ಮಾತನಾಡುತ್ತಾ ತಮ್ಮ ಕೆಲಸ ಮುಂದುವರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ