ಆ್ಯಪ್ನಗರ

ದನದ ಕತ್ತು ಕೊಯ್ದ ಕೇರಳ ಕಾಂಗ್ರೆಸ್‌ ಮುಖಂಡರು

ಕಾಂಗ್ರೆಸ್‌ ಕಾರ್ಯಕರ್ತರು ಸಾರ್ವಜನಿಕವಾಗಿಯೇ ದನದ ಕತ್ತು ಕೊಯ್ದು ಬೀಫ್‌ ಪೇಸ್ಟ್‌ ಮಾಡಿ ತಿಂದಿರುವ ವೀಡಿಯೋ ವೈರಲ್‌ ಆಗಿದೆ.

Vijaya Karnataka Web 29 May 2017, 11:03 am
ಕಣ್ಣೂರು: ಹತ್ಯೆಗಾಗಿ ಗೋವು ಮಾರಾಟಕ್ಕೆ ಕೇಂದ್ರ ಸರಕಾರ ಕಡಿವಾಣ ಹಾಕಲು ಮುಂದಾದ ಬಳಿಕ ಪ್ರತಿಭಟನೆ ನಡೆಸಿದ್ದ ಕೇರಳ ಯುವ ಕಾಂಗ್ರೆಸ್‌ ಕಾರ್ಯಕರ್ತರು ಸಾರ್ವಜನಿಕವಾಗಿ ದನದ ಕತ್ತು ಕೊಯ್ದಿರುವ ವೀಡಿಯೋ ವೈರಲ್‌ ಆಗಿದೆ.
Vijaya Karnataka Web cattle slaughtering by kerala youth congress leader
ದನದ ಕತ್ತು ಕೊಯ್ದ ಕೇರಳ ಕಾಂಗ್ರೆಸ್‌ ಮುಖಂಡರು


ಕೇಂದ್ರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಕೇರಳದ ಯುವ ಕಾಂಗ್ರೆಸ್‌ನ ಮುಖಂಡರು, ನಡು ರಸ್ತೆಯಲ್ಲೇ ದನವನ್ನು ನಿರ್ದಯವಾಗಿ ಕಡಿದಿದ್ದಾರೆ. ‘ಪ್ರಧಾನಿಯವರೇ ನಿಮಗೆ ಗೋಮಾಂಸ ನಿಷೇಧಿಸಲಾಗದು, ಯುವ ಕಾಂಗ್ರೆಸ್‌ ಜಿಂದಾಬಾದ್’ ಎಂಬ ಘೋಷಣೆಯೊಂದಿಗೆ ದನದ ಕತ್ತನ್ನು ಕಡಿಯುವ ದೃಶ್ಯ ವೀಡಿಯೋದಲ್ಲಿದೆ.
@Kummanam Iam really sad ,hurt ,angry ,mad and disappointed..our state is called Gods own country ..let's all stand together against this inhumanity — Sreesanth (@sreesanth36) May 27, 2017 ಘಟನೆಗೆ ಸಂಬಂಧಿಸಿದ ವೀಡಿಯೋವನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕುಮ್ಮನಮ್ ರಾಜಶೇಖರನ್ ಟ್ವೀಟ್ ಮಾಡಿದ್ದಾರೆ. ‘ಕ್ರೂರತೆಯ ಪರಾಕಾಷ್ಠೆ. ಕೇರಳದ ಯುವ ಕಾಂಗ್ರೆಸ್ ಕಾರ್ಯಕರ್ತರು ಸಾರ್ವಜನಿಕವಾಗಿ ಜಾನುವಾರು ಹತ್ಯೆ ಮಾಡಿದ್ದಾರೆ’ ಎಂದು ರಾಜಶೇಖರನ್ ಟ್ವೀಟ್ ಮಾಡಿದ್ದಾರೆ.

Cruelty at its peak.Cattle slaughtering by Kerala Youth Congress leader in broad daylight,in front of public gathering. pic.twitter.com/4gBWUVDa1l — KummanamRajasekharan (@Kummanam) May 27, 2017 ಕೇರಳ ಯುವ ಕಾಂಗ್ರೆಸ್ ಕಾರ್ಯರ್ತರು ಸಾರ್ವಜನಿಕ ಸ್ಥಳದಲ್ಲಿ ಗೋಹತ್ಯೆ ಮಾಡಿರುವುದನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಖಂಡಿಸಿದ್ದು, ಇದೊಂದು ಅನಾಗರಿಕ ನಡೆ, ಇದನ್ನು ಸಹಿಸಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ಅಲ್ಲದೇ 16 ಮಂದಿ ವಿರುದ್ಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ