ಆ್ಯಪ್ನಗರ

ಹಿಂಸಾಚಾರದ ಕಿಡಿ ಹಚ್ಚಬೇಡಿ: ಚಾನೆಲ್‌ಗಳಿಗೆ ಕೇಂದ್ರ ಸೂಚನೆ

ಪ್ರಚೋದನಕಾರಿ ಹಾಗೂ ದ್ವೇಷ ಹಬ್ಬಿಸುವ ಸುದ್ದಿ/ಕಾರ್ಯಕ್ರಮಗಳನ್ನು ಪದೇ ಪದೇ ಪ್ರಸಾರ ಮಾಡಿರುವ ಕೆಲವು ಟಿವಿ ಚಾನೆಲ್‌ಗಳ ಬಗ್ಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಅಸಮಾಧಾನ ವ್ಯಕ್ತಪಡಿಸಿದೆ.

TIMES INTERNET NETWORK 13 Sep 2016, 5:01 pm
ಹೊಸದಿಲ್ಲಿ: ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರಚೋದನಕಾರಿ ಹಾಗೂ ದ್ವೇಷ ಹಬ್ಬಿಸುವ ಸುದ್ದಿ/ಕಾರ್ಯಕ್ರಮಗಳನ್ನು ಪದೇ ಪದೇ ಪ್ರಸಾರ ಮಾಡಿರುವ ಕೆಲವು ಟಿವಿ ಚಾನೆಲ್‌ಗಳ ಬಗ್ಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಅಸಮಾಧಾನ ವ್ಯಕ್ತಪಡಿಸಿದ್ದು, ಸಂಯಮ ಪಾಲಿಸುವಂತೆ ಸಲಹೆ ನೀಡಿದೆ.
Vijaya Karnataka Web cauvery dispute advisory to news channel not to ignite violence
ಹಿಂಸಾಚಾರದ ಕಿಡಿ ಹಚ್ಚಬೇಡಿ: ಚಾನೆಲ್‌ಗಳಿಗೆ ಕೇಂದ್ರ ಸೂಚನೆ


ಈ ರೀತಿ ಪ್ರಸಾರ ಮಾಡಿದಲ್ಲಿ ಕಾವೇರಿ ವಿವಾದದಿಂದ ಬಾಧಿತವಾದ ಎರಡೂ ರಾಜ್ಯಗಳಲ್ಲಿ ಉದ್ವಿಗ್ನತೆ ಹೆಚ್ಚಲಿದೆ. ಸತ್ಯಾಂಶ ಪರಿಶೀಲಿಸಿಯೇ ಪ್ರಸಾರ ಮಾಡುವಂತೆ ಎಲ್ಲ ಚಾನೆಲ್‌ಗಳಿಗೆ ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಅದು ಸೂಚನೆ ನೀಡಿದೆ.

ಸ್ಥಳೀಯ ಮಾಧ್ಯಮಗಳು, ಕೇಬಲ್ ನೆಟ್‌ವರ್ಕ್‌ಗಳು ರಾಷ್ಟ್ರೀಯ ಹಿತದೃಷ್ಟಿಯಿಂದ ಹಿಂಸೆ, ಗಲಭೆಗಳ ವರದಿ ಪ್ರಸಾರದಲ್ಲಿ ಮಾಧ್ಯಮ ಧರ್ಮ ಪಾಲಿಸಬೇಕೆಂದು ಕೇಳಿಕೊಳ್ಳಲಾಗಿದೆ. ಹಿಂಸೆಗೆ ಪ್ರೇರಣೆ ನೀಡಬಲ್ಲ ಯಾವುದೇ ಸುದ್ದಿ ಅಥವಾ ಕಾರ್ಯಕ್ರಮ ಪ್ರಸಾರ ಮಾಡಬಾರದು, ಹಿಂಸೆ/ಹಾನಿಯ ದೃಶ್ಯಗಳ ಪ್ರಸಾರದಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಲಾಗಿದೆ.

ಅದೇ ರೀತಿ, ಹಿಂಸೆ ಅಥವಾ ಗಲಭೆ ಘಟನೆಗಳ ನೇರ ಪ್ರಸಾರ ಅಥವಾ ಫೈಲ್ ಕ್ಲಿಪ್ಪಿಂಗ್‌ಗಳ ಪ್ರಸಾರ ಮಾಡದಂತೆಯೂ ಅದು ಸುದ್ದಿ ಮಾಧ್ಯಮಗಳನ್ನು ಕೇಳಿಕೊಂಡಿದೆ. ಪ್ರಸಾರ ಸಂದರ್ಭದಲ್ಲಿ ಪದ ಬಳಕೆಯ ಬಗೆಗೂ ಕಟ್ಟೆಚ್ಚರ ವಹಿಸಬೇಕಾಗಿದೆ ಎಂದು ಸಲಹೆ ನೀಡಲಾಗಿದೆ.

ಎಲ್ಲ ಚಾನೆಲ್‌ಗಳು ಕಾರ್ಯಕ್ರಮ ಪ್ರಸಾರ ಹಾಗೂ ಜಾಹೀರಾತು ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದೂ ಸೂಚಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ