Please enable javascript.ಕಾವೇರಿಗೆ ಮತ್ತೆ ಕ್ಯಾತೆ: ಮೋದಿಗೆ ಜಯಾ ಪತ್ರ - Cauvery: Jaya writes to PM - Vijay Karnataka

ಕಾವೇರಿಗೆ ಮತ್ತೆ ಕ್ಯಾತೆ: ಮೋದಿಗೆ ಜಯಾ ಪತ್ರ

ಏಜೆನ್ಸೀಸ್ 6 Sep 2015, 8:31 pm
Subscribe

ಕಾವೇರಿ ನ್ಯಾಯಾಧೀಕರಣದ ಅಂತಿಮ ಆದೇಶದ ಅನ್ವಯ ಕರ್ನಾಟಕವು ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿಲ್ಲ ಎಂದು ಆರೋಪಿಸಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

cauvery jaya writes to pm
ಕಾವೇರಿಗೆ ಮತ್ತೆ ಕ್ಯಾತೆ: ಮೋದಿಗೆ ಜಯಾ ಪತ್ರ
ಚೆನ್ನೈ: ಕಾವೇರಿ ನ್ಯಾಯಾಧೀಕರಣದ ಅಂತಿಮ ಆದೇಶದ ಅನ್ವಯ ಕರ್ನಾಟಕವು ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿಲ್ಲ ಎಂದು ಆರೋಪಿಸಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ಆಗಸ್ಟ್ ಅಂತ್ಯದ ವೇಳೆಗೆ ಕೆಆರ್‌ಎಸ್ ಜಲಾಶಯದಿಂದ ಕಾವೇರಿ ನದಿಗೆ ಬಿಡಬೇಕಿದ್ದ ನೀರಿನ ಪ್ರಮಾಣದಲ್ಲಿ 27 ಟಿಎಂಸಿ ಕಡಿಮೆಯಾಗಿದೆ. ಕೂಡಲೇ ಪ್ರಧಾನಿಗಳು ಮಧ್ಯಪ್ರವೇಶ ಮಾಡಬೇಕು. ಕಾವೇರಿ ನ್ಯಾಯಾಧೀಕರಣದ ಆದೇಶದಂತೆ ನೀರು ಬಿಡಲು ನಿರ್ದೇಶನ ನೀಡಬೇಕು ಎಂದು ಕೋರಿದ್ದಾರೆ.

‘‘ಕಾವೇರಿ ನ್ಯಾಯಾಧಿಕರಣವು ತನ್ನ ಅಂತಿಮ ಆದೇಶದಲ್ಲಿ ಉಲ್ಲೇಖಿಸಿರುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರವನ್ನು ರಚಿಸಬೇಕು. ಈ ವಿಚಾರದಲ್ಲಿ ಸಕಾರಾತ್ಮಕವಾಗಿ ನಿರ್ಧಾರ ಕೈಗೊಳ್ಳುತ್ತೀರಿ ಎನ್ನುವ ನಿರೀಕ್ಷೆ ನಮಗೆ ಇದೆ’’ ಎಂದು ಜಯಾ ಅವರು ಸೆಪ್ಟೆಂಬರ್ 4ರಂದು ಪ್ರಧಾನಿಗೆ ಬರೆದಿದ್ದರು. ಈ ಪತ್ರದ ನಕಲನ್ನು ಚೆನ್ನೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶನಿವಾರ ಬಿಡುಗಡೆ ಮಾಡಲಾಗಿದೆ.

‘‘ಆಗಸ್ಟ್ ಅಂತ್ಯದವೇಳೆಗೆ ತಮಿಳುನಾಡಿಗೆ 94 ಟಿಎಂಸಿ ನೀರು ತಲಪಬೇಕಿತ್ತು. ಆದರೆ ಈ ಬಾರಿ ಕೇವಲ 66.443 ಟಿಎಂಸಿ ನೀರನ್ನು ಮಾತ್ರ ಕರ್ನಾಟಕ ಬಿಡುಗಡೆ ಮಾಡಿದೆ. ಇನ್ನೂ 27.57 ಟಿಎಂಸಿ ನೀರು ಬಾಕಿ ಇದ್ದು, ಅದನ್ನು ಬಿಡುಗಡೆ ಮಾಡುವಂತೆ ಕರ್ನಾಟಕ ಸರಕಾರಕ್ಕೆ ಆದೇಶ ನೀಡಬೇಕು’’ ಎಂದು ಪತ್ರದಲ್ಲಿ ಜಯಾ ಮನವಿ ಮಾಡಿದ್ದಾರೆ.

ಕರ್ನಾಟಕ ಉದ್ದೇಶಪೂರ್ವಕವಾಗಿ ಕಡಿಮೆ ನೀರು ಬಿಡುಗಡೆ ಮಾಡಿದೆ. ಮೆಟ್ಟೂರು ಅಣೆಕಟ್ಟಿನಿಂದ ಜೂನ್ 12ಕ್ಕೆ ರೈತರಿಗೆ ನೀರು ಬಿಡಗಡೆ ಮಾಡಬೇಕಿತ್ತು. ಕಾವೇರಿ ನದಿ ನೀರನ್ನೇ ಅವಲಂಬಿಸಿರುವ ತಮಿಳುನಾಡಿನ ಜಿಲ್ಲೆಗಳ ರೈತರ ಹಿತದೃಷ್ಟಿಯಿಂದ ಕೇಂದ್ರ ಸರಕಾರ ಮಧ್ಯಪ್ರವೇಶ ಮಾಡಬೇಕಾದ ಅಗತ್ಯತೆ ಇದೆ ಎಂದೂ ಪತ್ರದಲ್ಲಿ ಜಯಾ ಬರೆದಿದ್ದಾರೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ