ಆ್ಯಪ್ನಗರ

ಸಿಬಿಐ ಮಾಜಿ ವಿಶೇಷ ನಿರ್ದೇಶಕ ರಾಕೇಶ್‌ ಆಸ್ಥಾನಾಗೆ ಸಿಬಿಐನಿಂದಲೇ ಕ್ಲೀನ್‌ಚಿಟ್‌

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮೊಯಿನ್‌ ಜತೆ ನಂಟು ಹೊಂದಿದ್ದ ಆರೋಪದಲ್ಲಿ ಬಂಧನಕ್ಕೆ ಒಳಗಾದ ಹೈದರಾಬಾದ್‌ ಮೂಲದ ಉದ್ಯಮಿ ಸತೀಶ್‌ ಸಾನಾ ಅವರು, ದೇವಿಂದರ್‌ ಮತ್ತು ಆಗ ಸಿಬಿಐ ವಿಶೇಷ ನಿರ್ದೇಶಕರಾಗಿದ್ದ ರಾಕೇಶ್‌ ಆಸ್ಥಾನಾ ಇಬ್ಬರೂ ಲಂಚ ಪಡೆದಿದ್ದಾರೆ ಎಂದು ಆರೋಪಿಸಿದ್ದರು. ನಂತರ ಹಲವು ತಿರುವುಗಳನ್ನು ಪಡೆದುಕೊಂಡು ಸಿಬಿಐ ವರ್ಸಸ್‌ ಸಿಬಿಐ ಪ್ರಕರಣವಾಗಿ ಇದು ದೇಶದಾದ್ಯಂತ ಸುದ್ದಿಗೆ ಗ್ರಾಸವಾಗಿತ್ತು.

Agencies 7 Mar 2020, 9:13 pm
ಹೊಸದಿಲ್ಲಿ: ಭ್ರಷ್ಟಚಾರ ಪ್ರಕರಣದಲ್ಲಿ ಸಿಬಿಐ ಮಾಜಿ ವಿಶೇಷ ನಿರ್ದೇಶಕ ರಾಕೇಶ್‌ ಆಸ್ಥಾನಾ ಅವರಿಗೆ ಸಿಬಿಐ ಕ್ಲೀನ್‌ಚಿಟ್‌ ನೀಡಿರುವುದನ್ನು ವಿಶೇಷ ನ್ಯಾಯಾಲಯ ಶನಿವಾರ ಎತ್ತಿಹಿಡಿದಿದೆ. ಹೀಗಾಗಿ ಕಾನೂನು ಸಂಘರ್ಷಕ್ಕೆ ಸಿಲುಕಿರುವ ಆಸ್ಥಾನಾ ಕೊಂಚ ನಿಟ್ಟುಸಿರು ಬಿಡಬಹುದು.
Vijaya Karnataka Web Rakesh Astana


ರಾಕೇಶ್‌ ಆಸ್ಥಾನಾ ಮತ್ತು ಡಿಎಸ್ಪಿ ದೇವಿಂದರ್‌ ಕುಮಾರ್‌ ಹೆಸರನ್ನು ಸಿಬಿಐ ಆರೋಪಪಟ್ಟಿಯ 12ನೇ ಕಾಲಂನಲ್ಲಿ ನಮೂದಿಸಿದೆ. ಸಾಕ್ಷ್ಯಾಧಾರಗಳ ಕೊರತೆ ಇದ್ದರೆ ಅಂತಹ ಆರೋಪಿಗಳ ಹೆಸರನ್ನು ಈ ಕಾಲಂನಲ್ಲಿ ನಮೂದಿಸಲಾಗುತ್ತದೆ. ದೇವಿಂದರ್‌ ಕುಮಾರ್‌ ಅವರನ್ನು 2018ರಲ್ಲಿ ಬಂಧಿಸಲಾಗಿತ್ತು, ನಂತರ ಅವರು ಜಾಮೀನು ಪಡೆದಿದ್ದರು. ಆದರೆ, ಇದೇ ಪ್ರಕರಣದಲ್ಲಿ ಮಧ್ಯವರ್ತಿ ಮನೋಜ್‌ ಪ್ರಸಾದ್‌, ಅವರ ಸಹೋದರ ಸೋಮೇಶ್ವರ ಶ್ರೀವಾತ್ಸವ ಮತ್ತು ಮಾವ ಸುನೀಲ್‌ ಮಿತ್ತಲ್‌ ಅವರಿಗೆ ಸಮನ್ಸ್‌ ಜಾರಿಗೊಳಿಸಲು ಕೋರ್ಟ್‌ ನಿರ್ಧರಿಸಿದೆ.

ಮಾಂಸ ರಫ್ತುದಾರ ಮೊಯಿನ್‌ ಖುರೇಷಿ ಭಾಗಿಯಾಗಿರುವ ಪ್ರಕರಣವೊಂದರ ತನಿಖೆಯನ್ನು ದೇವಿಂದರ್‌ ಕುಮಾರ್‌ ನಡೆಸುತ್ತಿದ್ದರು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮೊಯಿನ್‌ ಜತೆ ನಂಟು ಹೊಂದಿದ್ದ ಆರೋಪದಲ್ಲಿ ಬಂಧನಕ್ಕೆ ಒಳಗಾದ ಹೈದರಾಬಾದ್‌ ಮೂಲದ ಉದ್ಯಮಿ ಸತೀಶ್‌ ಸಾನಾ ಅವರು, ದೇವಿಂದರ್‌ ಮತ್ತು ಆಗ ಸಿಬಿಐ ವಿಶೇಷ ನಿರ್ದೇಶಕರಾಗಿದ್ದ ರಾಕೇಶ್‌ ಆಸ್ಥಾನಾ ಇಬ್ಬರೂ ಲಂಚ ಪಡೆದಿದ್ದಾರೆ ಎಂದು ಆರೋಪಿಸಿದ್ದರು.

ಸಾನಾ ನೀಡಿದ ದೂರು ಆಧರಿಸಿ ಸಿಬಿಐ ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿತ್ತು. ನಂತರ ಸಿಬಿಐ ನಿರ್ದೇಶಕರಾಗಿದ್ದ ಅಲೋಕ್‌ ವರ್ಮಾ ಅವರು ಸತೀಶ್‌ ಸಾನಾ ಅವರಿಂದ ಲಂಚ ಸ್ವೀಕರಿಸಿದ್ದಾರೆ ಎಂದು ಆಸ್ಥಾನಾ ಅವರು ಕೇಂದ್ರ ವಿಚಕ್ಷಣಾ ದಳಕ್ಕೆ ಪತ್ರ ಬರೆದಿದ್ದರು. ಸಿಬಿಐ ವರ್ಸಸ್‌ ಸಿಬಿಐ ಪ್ರಕರಣವಾಗಿ ಇದು ದೇಶದಾದ್ಯಂತ ಸುದ್ದಿಗೆ ಗ್ರಾಸವಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ