ಆ್ಯಪ್ನಗರ

ಶೇ.5ರಷ್ಟು ಕುಸಿದ CBSE ಫಲಿತಾಂಶ!

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) 10ನೇ ತರಗತಿಯ ಫಲಿತಾಂಶ ಶನಿವಾರ ಪ್ರಕಟವಾಗಿದೆ.

ಟೈಮ್ಸ್ ಆಫ್ ಇಂಡಿಯಾ 3 Jun 2017, 2:53 pm
ಹೊಸದಿಲ್ಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) 10ನೇ ತರಗತಿಯ ಫಲಿತಾಂಶ ಶನಿವಾರ ಪ್ರಕಟವಾಗಿದೆ.
Vijaya Karnataka Web cbse announces class x results
ಶೇ.5ರಷ್ಟು ಕುಸಿದ CBSE ಫಲಿತಾಂಶ!


ಅಲಹಾಬಾದ್, ಚೆನ್ನೈ, ದಿಲ್ಲಿ, ಡೆಹ್ರಾಡೂನ್ ಮತ್ತು ತಿರುವನಂತಪುರ ಪ್ರದೇಶದ ಫಲಿತಾಂಶ ವೆಬ್‌ಸೈಟ್‌ಗಳಲ್ಲಿ ಅಪ್‌ಲೋಡ್ ಆಗಿವೆ. ಇತರೆ ಪ್ರದೇಶದ ಫಲಿತಾಂಶ ಅಪ್‌ಲೋಡ್ ಆಗುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಸಿಬಿಎಸ್‌ಸಿ ಬೋರ್ಡ್ ತಿಳಿಸಿದೆ.

ಕಳೆದ ವರ್ಷ ಶೇ.96.21ರಷ್ಟು ಫಲಿತಾಂಶ ದಾಖಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ಶೇ.95.95ರಷ್ಟು ಫಲಿತಾಂಶ ದಾಖಲಾಗಿದೆ. ಒಟ್ಟಾರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಫಲಿತಾಂಶ ಶೇ.5ರಷ್ಟು ಕುಸಿದಿದೆ.

ತಿರುವನಂತಪುರ ಪ್ರದೇಶದಲ್ಲಿ ಅತಿ ಹೆಚ್ಚು ಫಲಿತಾಂಶ ಅಂದರೆ ಶೇ.99.85 ದಾಖಲಾಗಿದ್ದು, ಚೆನ್ನೈ ಶೇ.99.62 ಮತ್ತು ಅಲಹಾಬಾದ್‌ನಲ್ಲಿ ಶೇ.98.23ರಷ್ಟು ಫಲಿತಾಂಶ ದಾಖಲಾಗಿದೆ.

ಫಲಿತಾಂಶ ನೋಡುವುದು ಹೇಗೆ?

* www.cbse.nic.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
* ಸಂಬಂಧಿತ ಲಿಂಕ್ ಮೇಲೆ ಕ್ಲಿಕ್ ಮಾಡಿ, ಅಗತ್ಯ ವಿವರಗಳನ್ನು ನಮೂದಿಸಿ
* submit ಮೇಲೆ ಕ್ಲಿಕ್ ಮಾಡಿ

IVR ಮೂಲಕ ಫಲಿತಾಂಶ ಪಡೆಯಬಹುದು

IVR ಸಿಸ್ಟಮ್ ಸಿಬಿಎಸ್‌ಸಿ ಫಲಿತಾಂಶವನ್ನು ಕರೆ ಮೂಲಕ ಒದಗಿಸುತ್ತದೆ (ಪ್ರತಿ ನಿಮಿಷಕ್ಕೆ 30 ಪೈಸೆ ದರ). ಅಭ್ಯರ್ಥಿಗಳು ಫಲಿತಾಂಶ ಪಡೆಯಲು 011-24357276, 011-28127030 (MTNL), 54321223 (Tata Teleservices), 54321202 (Airtel) ಕರೆ ಮಾಡಿ ಫಲಿತಾಂಶ ಪಡೆಯಬಹುದು.

SMS ಮೂಲಕ ಫಲಿತಾಂಶ ಪಡೆಯಿರಿ......

ಸಿಬಿಎಸ್‌ಇ 10ನೇ ತರಗತಿಯ ಫಲಿತಾಂಶ SMS ಸೇವೆಯ ಮೂಲಕ ಲಭ್ಯವಿರುತ್ತದೆ (ಪ್ರತಿ ಫಲಿತಾಂಶಕ್ಕೆ 50 ಪೈಸೆ ಶುಲ್ಕ). SMS ಮೂಲಕ ಫಲಿತಾಂಶ ಪಡೆಯಲು ಕೆಳಗಿನ ಯಾವುದೇ ಸಂಖ್ಯೆಗೆ ರೋಲ್ ನಂಬರ್ ಕಳುಹಿಸಬಹುದು.

52001 (MTNL), 57766 (BSNL), 5800002 (Aircel), 55456068 (Idea), 54321, 51234 and 5333300 (Tata Teleservices), 54321202 (Airtel), and 9212357123 (National Informatics Centre)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ