ಆ್ಯಪ್ನಗರ

ಗಡಿಯಲ್ಲಿ ಪಾಕ್‌ ಪುಂಡಾಟ: ಭಾರತೀಯ ಸೇನೆಯ ದಿಟ್ಟ ಉತ್ತರಕ್ಕೆ ಇಬ್ಬರು ಪಾಕ್‌ ಸೇನೆ ತತ್ತರ

ಪೂಂಚ್‌ನ ಸುಂದರ್‌ಬನಿ ಸೆಕ್ಟರ್‌ನಲ್ಲಿ ಪಾಕ್‌ ಕದನ ವಿರಾಮ ಉಲ್ಲಂಘಿಸಿದ್ದು, ಉಭಯ ದೇಶಗಳ ಸೇನೆಯ ನಡುವೆ ಭಾರಿ ಗುಂಡಿನ ಕಾಳಗ ನಡೆದಿದೆ. ಪಾಕ್‌ ಇಬ್ಬರು ಕಮಾಂಡೋಗಳು ಹಾಗೂ ಭಾರತೀಯ ಸೇನೆಯ ರೈಫಲ್‌ ಮ್ಯಾನ್‌ ಹುತಾತ್ಮರಾಗಿದ್ದಾರೆ ಎಂದು ತಿಳಿದು ಬಂದಿದೆ

Times Now 17 Dec 2019, 6:23 pm
ಗಡಿಯಲ್ಲಿ ಮತ್ತೆ ಕದನ ವಿರಾಮ ಉಲ್ಲಂಘಿಸಿದ ಪಾಕ್‌ ಸೇನೆಗೆ ಭಾರತೀಯ ಯೋಧರು ದಿಟ್ಟ ಉತ್ತರ ನೀಡಿದ್ದಾರೆ. ಪಾಕಿಸ್ತಾನ ಸ್ಪೆಷಲ್‌ ಫೋರ್ಸಸ್‌ನ ಇಬ್ಬರು ಯೋಧರನ್ನು ಹತ್ಯೆಗೈಯ್ಯಲಾಗಿದೆ.
Vijaya Karnataka Web indian_army_2


ಜಮ್ಮು ಕಾಶ್ಮೀರದ ಪೂಂಚ್‌ ಜಿಲ್ಲೆಯ ಭಾಗಕ್ಕೆ ಹೊಂದಿಕೊಂಡಿರುವ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ಸೇನೆ ಹಾಗೂ ಪಾಕಿಸ್ತಾನದ ಗಡಿ ರಕ್ಷಣಾ ತಂಡದ ಜತೆ ಗುಂಡಿನ ಕಾಳಗ ನಡೆದಿದೆ. ಈ ವೇಳೆ ಪಾಕ್‌ನ ಇಬ್ಬರು ಹಾಗೂ ಭಾರತೀಯ ಸೇನೆಯ ಒಬ್ಬ ಯೋಧ ಹತರಾಗಿದ್ದಾರೆ ಎಂದು ತಿಳಿದು ಬಂದಿದೆ.

ಸುಂದರ್‌ಬನಿ ಸೆಕ್ಟರ್‌ನಲ್ಲಿನ ನಾತುವಾ ಕಾ ಟಿಬ್ಬ ಭಾಗದಲ್ಲಿ ಪಾಕ್‌ ಸೇನಾ ಯೋಧರು ಹಾಗೂ ವಿಶೇಷ ರಕ್ಷಣಾ ಪಡೆ ಯೋಧರು ಏಕಾಏಕಿ ಅಪ್ರಚೋದಿತ ಗುಂಡಿನ ದಾಳಿ ನಡೆಸಲು ಆರಂಭಿಸಿದ್ದಾರೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿದಾಳಿ ನಡೆಸಿದ ಭಾರತೀಯ ಸೇನಾ ಪಡೆ, ದಾಳಿಯನ್ನು ಹಿಮ್ಮೆಟ್ಟಿಸುವಲ್ಲಿ ಸಫಲರಾಗಿದ್ದಾರೆ ಎಂದು ತಿಳಿದು ಬಂದಿದೆ. ಗುಂಡಿನ ಕಾಳಗದ ವೇಳೆ ರಾಕೆಟ್‌ ಲಾಂಚರ್ಸ್‌, ಆ್ಯಂಟಿ ಟ್ಯಾಂಕ್‌ ಗೈಡೆಡ್‌ ಮಿಸೈಲ್‌ಗಳನ್ನು ಪ್ರಯೋಗಿಸಲಾಗಿದೆ ಎಂದು ಭಾರತೀಯ ಸೇನಾ ಪಡೆ ಮೂಲಗಳು ಖಚಿತಪಡೆಸಿದೆ. ಸೇನೆಯ ರೈಫಲ್‌ಮ್ಯಾನ್‌ ಸುಖ್ವಿಂದರ್‌ ಸಿಂಗ್‌ ಕಾಳಗದಲ್ಲಿ ಗುಂಡೇಟಿಗೆ ಹುತಾತ್ಮನಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಪಾಕ್‌ ಸೇನೆಯ ಮೂಲಗಳ ಪ್ರಕಾರ ಇಬ್ಬರು ಎಎಸ್‌ಜಿ ಕಮಾಂಡೋಗಳು ಭಾರತೀಯ ಸೇನೆ ನಡೆಸಿದ ಪ್ರತಿ ದಾಳಿಯಲ್ಲಿ ಹತರಾಗಿದ್ದಾರೆ ಎನ್ನಲಾಗಿದೆ. ಮೂರು ಭಾಗಗಳಿಂದ ಪಾಕ್‌ ಸೇನೆಯಿಂದ ಆಕ್ರಮಿತವಾಗಿದ್ದ ಸುಂದರ್‌ಬನಿ ಸೆಕ್ಟರ್‌ನಲ್ಲಿ ಕದನ ವಿರಾಮ ಉಲ್ಲಂಘಿಸಿ ಪಾಕ್‌ ಮತ್ತೆ ಪುಂಡಾಟ ಮೆರೆದಿದೆ. ಇತ್ತೀಚಿನ ದಿನದಲ್ಲಿ ಪೂಂಚ್‌ ಹಾಗೂ ಸಮೀಪದ ಗಡಿ ನಿಯಂತ್ರಣ ಭಾಗದಲ್ಲಿ ಕದನ ವಿರಾಮ ಉಲ್ಲಂಘನೆ, ಅಪ್ರಚೋದಿತ ಗುಂಡಿನ ದಾಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೈ ಎಲರ್ಟ್‌ ಘೋಷಣೆ ಮಾಡಲಾಗಿದೆ..

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ